ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರದಾನ ೨೬೩ ಯಾವ ಭೇದಭಾವವೂ ಅವಳಲ್ಲಿರಲಿಲ್ಲ. ರಾಮನಿಗೆ ಯುವರಾಜ್ಯಾಭಿಷೇಕವಾಗಲಿದೆ ಎಂಬ ಸಂಗತಿಯನ್ನು ತಿಳಿದು ಕೈಕೇಯಿಯು ಸಂತೋಷಗೊಂಡು ಮಂಥರೆಗೆ ಈ ರೀತಿ ಎಂದಳು- ನ ಮೇ ಪರಂ ಕಿಂಚದಿತೋ ವರಂ ಪುನಃ | ಷಿಯಂ ಷಿಯಾರ್ಹ ಸುವಚಂ ವಚೋsಮೃತಮ್ | ತಥಾ ಹವೋಚಸಮತಃ ಪಿಯೊತರಂ | ವರಂ ಪರಂ ತೇ ಪ್ರದದಾಮಿ ತಂ ವೃಣು |೩೬ “ಎಲೈ ದಾನಯೋಗ್ಯಳಾದ ಪ್ರಿಯ ಮಂಥರೆಯೇ, ಈಗ ನೀನು ತಂದ ಪ್ರಿಯವಾರ್ತೆಗಿಂತ ಇನ್ನು ಬೇರೆ ಯಾವ ಸಂಗತಿಯೂ ನನಗೆ ಹೆಚ್ಚು ಸಂತೋಷ ಕಾರಕವಾಗಿಲ್ಲ. ಅಮೃತಕ್ಕೆ ಸಮವಾದ ಈ ವಾರ್ತೆಯನ್ನು ನೀನು ನನಗೆ ತಿಳಿಸಿರುವೆ. ಹೀಗಿರುವುದರಿಂದ ಈ ಸಂತೋಷದ ಸುದ್ದಿಯನ್ನು ಕೇಳಿ, ನಾನು ನಿನಗೆ ಶ್ರೇಷ್ಠ ವರವನ್ನು ಕೊಡಲಿರುವೆ. ನೀನು ಬೇಡಿಕೊ!!” ನಿಜದಲ್ಲಿ ಈ ವರವನ್ನು ಕೈಕೇಯಿಯು ಕೊಡಲಿಲ್ಲ. ಮಂಥರೆಯು ಅದನ್ನು ಸ್ವೀಕರಿಸಲೂ ಇಲ್ಲ. ವರವನ್ನು ಮಂಥರೆಯು ಬೇಡದೇ ಇದ್ದರೂ ಸಂತೋಷ ಗೊಂಡ ಕೈಕೇಯಿಯು ಅದನ್ನು ಕೊಡಬಯಸಿದ್ದಳು; ಆದ್ದರಮದ ಇದು “ಅಯಾಚಿತ' ವರವಾಗಿದೆ. ಕೈಕೇಯಿಯು ಮಂಥರೆಗೆ ಕೊಟ್ಟ 'ಶುಭ'ವೆಂಬ ಆಭರಣವು ಅನುಗ್ರಹವಾಗಿದೆ; ವರವಲ್ಲ. ೧೮. ಅಲರ್ಕ < ಅಂಧಬ್ರಾಹ್ಮಣ ಅಯೋಧ್ಯಾಕಾಂಡ/೧೨ ಒಮ್ಮೆ ವಚನವನ್ನು ಕೊಟ್ಟ ನಂತರ ಅದನ್ನ ಪೂರೈಸಲು ಯಾವ ತ್ಯಾಗವನ್ನು ಮಾಡಲು ಸಿದ್ದರಿರಬೇಕು ಎಂಬುದನ್ನು ಮನವರಕೆ ಮಾಡಿಕೊಳ್ಳಲು ಕೈಕೇಯಿಯು ದಶರಥನಿಗೆ ಹಲವು ಉದಾರಹಣೆಗಳನ್ನು ಹೇಳುತ್ತಿದ್ದಾಳೆ. - ದೇವ-ದಾನವರಲ್ಲಿ ನಡೆದ ಸಂಗ್ರಾಮದ ಸಮಯದಲ್ಲಿ ರಥದ ಗಾಲಿಯ ಅಚ್ಚು ಮುರಿದಿತ್ತು. ಆಗ ಕೈಕೇಯಿಯು ತನ್ನ ಸ್ವಂತದ ಕೈಯನ್ನು ಅಲ್ಲಿ ಸೇರಿಸಿ ದಶರಥನಿಗೆ ಜಯವಾಗುವಷ್ಟು ಸಹಾಯವನ್ನು ಮಾಡಿದ್ದಳು. ಆಗ ಸಂತೋಷ ಗೊಂಡ ದಶರಥನು ಕೊಡಬಯಸಿದ ಎರಡು ವರಗಳನ್ನು 'ಸಮಯ ಬಂದಾಗ ಕೇಳಿಕೊಳ್ಳುವೆ' ಎಂದು ಕೈಕೇಯಿಯು ಹೇಳಿದ್ದಳು. ರಾಮನಿಗೆ ಯುವರಾಜ್ಯಾ