ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೪ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ಭಿಷೇಕವನ್ನು ದಶರಥನು ಗೊತ್ತುಪಡಿಸಿದಾಗ ಮಂಥರೆಯು ಕೈಕೇಯಿಯ ಮತ್ಸರವನ್ನು ಕೆರಳಿಸಿದಳು. ಪೂರ್ವದಲ್ಲಿ ಕೊಡಬಯಸಿದ ಎರಡು ವರಗಳನ್ನು ಬೇಡಿಕೊಳ್ಳಲು ಇದೇ ತಕ್ಕ ಸಮಯವೆಂದು ಕೈಕೇಯಿಯು ಭಾವಿಸಿ ದಶರಥನ ಬಳಿ ವರಗಳನ್ನು ಬೇಡುವದೆಂದು ನಿರ್ಧರಿಸಿದಳು. ವರಗಳನ್ನು ಬೇಡುವ ಮೊದಲು ವಚನವನ್ನು ಪೂರಯಸುವ ಶಪಥವನ್ನು ದಶರಥನಿಂದ ಮಾಡಿಸಿದಳು. ಅಷ್ಟೇ ಅಲ್ಲದೆ, ಸತ್ಯಪ್ರತಿಜ್ಞನೂ, ಮಹಾತೇಜಸ್ವಿಯೂ, ಧರ್ಮಜ್ಞನೂ, ಸತ್ಯ ವಚನಿಯೂ, ಶುದ್ಧಾಚರಣೆಯುಳ್ಳವನೂ ಆದ ರಾಜನು ನನಗೆ ವರವನ್ನು ಕೊಡಲಿದ್ದಾನೆಂದು ಎಲ್ಲ ದೇವತೆಗಳೆದುರು ಸಾರಿ ಹೇಳಿದಳು. ಕಾಮಮೋಹಿತ ನಾಗಿ, ವರಗಳನ್ನು ಕೊಡಲು ಉದ್ಯುಕ್ತನಾದ ರಾಜನನ್ನು ಮೊದಲು ವಚನ ಬದ್ದನನ್ನಾಗಿ ಮಾಡಿ, ಆಮೇಲೆ ರಾಮನಿಗೆ ವನವಾಸ ಮತ್ತು ಭರತನಿಗೆ ಯುವ ರಾಜ್ಯಾಬಿಷೇಕ ಎಂಬೆರಡು ವರಗಳನ್ನು ಬೇಡಿಕೊಂಡಳು. ಕೈಕೇಯಿಯು ಆಡಿದ ನುಡಿಗಳನ್ನು ಕೇಳಿ ದಶರಥ ರಾಜನು ಮೂರ್ಛ ಹೋದನು. ಪ್ರಜ್ಞೆ ಮರಳಿದಾಗ ದಶರಥರಾಜನು ಕೈಕೇಯಿಯ ಮೇಲೆ ಕೋಪಗೊಂಡು ಅತಿಯಾಗಿ ತೆಗಳಿದನು. ಆಕೆಗೆ ವರಗಳನ್ನು ಕೊಟ್ಟಿದ್ದಕ್ಕಾಗಿ ಪರಮಪಶ್ಚಾತ್ತಾಪಪಟ್ಟನು. ಹಲವಾರು ರೀತಿಯಿಂದ ಆಕೆಯ ಮನವೊಲಿಸಲು ಪ್ರಯತ್ನಪಟ್ಟು ವಿಫಲಗೊಂಡನು. ಅವನ ಮಾತುಗಳ ಎಳ್ಳಷ್ಟೂ ಪರಿಣಾಮವು ಕೈಕೇಯಿಯ ಮೇಲೆ ಆಗಲಿಲ್ಲ. ಇದಕ್ಕೆ ಪ್ರತಿಯಾಗಿ ಕೊಟ್ಟ ವಚನವನ್ನು ಪಾಲಿಸ ದಿರುವ ದಶರಥನನ್ನು ಬಿರುನುಡಿಗಳಿಂದ ಈ ರೀತಿ ಧಿಕ್ಕರಿಸಿದಳು- - “ಸತ್ಯಪ್ರತಿಜ್ಞರಾದ ಪುರುಷರು ಕೊಟ್ಟ ವಚನವನ್ನು ಪಾಲಿಸಲು ಎಷ್ಟೊಂದು ಅಪೂರ್ವ ತ್ಯಾಗವನ್ನು ಮಾಡಿದ್ದಾರೆ ಎಂಬುದನ್ನು ಅವಳು ಉದಾಹರಣೆಗಳನ್ನು ಕೊಟ್ಟು ಹೇಳಿದಳು. ವಚನಭಂಗವು ಕುಲಕ್ಕೆ ಕಲಂಕವನ್ನು ತರುವಂತಹದು ಎಂದು ನಿಖರವಾಗಿ ಹೇಳಿದಳು. ಈ ಸಂದರ್ಭದಲ್ಲಿ ಅವಳು “ಶಿಬಿರಾಜ', “ಸಮುದ್ರ' ಮತ್ತು 'ಅಲರ್ಕ ರಾಜನ ಉದಾಹರಣೆಗಳನ್ನು ಕೊಟ್ಟಳು. ಅಲರ್ಕರಾಜನು ಒಬ್ಬ ಕುರುಡನಾದ ಬ್ರಾಹ್ಮಣನಿಗೆ ವರವನ್ನು ಕೊಡ ಬಯಸಿದನು. ಆಗ ಆ ಅಂಧನಾದ ಬ್ರಾಹ್ಮಣನು ರಾಜನ ಕಣ್ಣುಗಳನ್ನೇ ಬೇಡಿದನು. ಆಗ- ಅಲಕಶ್ಚಕ್ಷುಷೀ ದತ್ತಾ ಜಗಾಮ ಗತಿಮುತ್ತಮಾಮ್ ೪೩ ಅಲರ್ಕ ರಾಜನು ತನ್ನ ವಚನವನ್ನು ಪೂರೈಸಲು ತನ್ನ ಕಣ್ಣುಗಳನ್ನು ಆ ಬ್ರಾಹ್ಮಣನಿಗೆ ಕೊಟ್ಟು ಸದ್ದತಿಯನ್ನು ಪಡೆದನು. ಇದು 'ಅಯಾಚಿತ' ವರವಾಗಿದೆ.