ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪಾದಪಿ ವರಾದಪಿ!

ಪ್ರಾಚೀನ ರಾಷ್ಟ್ರೀಯ ಚರಿತ್ರೆ” ಎಂದು ಶ್ರೀರಾಮಕೋಶದ ಸಂಪಾದಕರಾದ ಶ್ರೀ ಅಮರೇಂದ್ರ ಗಾಡಗೀಳ ಅವರು ಹೊಗಳಿದ್ದಾರೆ. “ವಾಲ್ಮೀಕಿರಾಮಾಯಣವೆಂದರೆ ಭಾರತೀಯ ಸಂಸ್ಕೃತಿಯ ಜೀವನಾದರ್ಶಗಳ ನೈಜ ಚಿತ್ರಣ. ವಾಲ್ಮೀಕಿಯು ಅದನ್ನು ಕಾವ್ಯರೂಪದಲ್ಲಿ ರಚಿಸಿದ್ದಾನೆ. ಈ ಕಾವ್ಯವು ಆದರ್ಶ ಮಹಾಕಾವ್ಯವೆಂದು ಪರಿಗಣಿಸಲ್ಪಟ್ಟಿದೆ. 'ದಂಡಿ' ಮೊದಲಾದ ಕವಿಶ್ರೇಷ್ಠರು ಈ ಕಾವ್ಯದಿಂದ ಮಹಾಕಾವ್ಯದ ಲಕ್ಷಣಗಳನ್ನು ಎತ್ತಿಕೊಂಡಿದ್ದಾರೆ. ಪಂಚಮಹಾಕಾವ್ಯಗಳಲ್ಲಿ ಇದು ಒಂದಾಗಿದೆ. 'ಶ್ರೇಷ್ಠ ಕಾವ್ಯ'ವೆಂದು ಕಾವ್ಯಮರ್ಮಜ್ಞರು ಇದನ್ನು ಶ್ಲಾಘಿಸಿದ್ದಾರೆ. ಅಷ್ಟೇ ಅಲ್ಲದೆ, ಪರದೇಶದ ರಸಿಕರೂ ಕೂಡ ಇದರ ರಸವತ್ತತೆಯನ್ನು ಕೊಂಡಾಡಿದ್ದಾರೆ” ಎಂದು ರಾಮಾಯಣವನ್ನು ವಿಶೇಷವಾಗಿ ಓದಿಕೊಂಡ ಡಾ॥ ಗ.ನ. ಸಾಠೆ ಅವರು ಉದ್ಗರಿಸಿದ್ದಾರೆ.
ರಾಮಕಥೆಯು ವಾಲ್ಮೀಕಿಯ ಕಾಲಕ್ಕಿಂತಲೂ ಮೊದಲಿನದು. ಈ ಕಥೆಯನ್ನು ನಾರದನು ವಾಲ್ಮೀಕಿಗೆ ಹೇಳಿದನು. “ನಾರದನಿಂದ ಕೇಳಿಕೊಂಡಂತೆ ರಾಮಕಥೆಯನ್ನು ಹೇಳು!” ಎಂದು ಬ್ರಹ್ಮನು ವಾಲ್ಮೀಕಿಗೆ ಪ್ರೋತ್ಸಾಹಿಸಿದನು. ರಾಮಾಯಣದ ರಚನೆ-ನಿರ್ಮಿತಿಯಲ್ಲಿ ಶಾಪಗಳಿಗೆ-ವರಗಳಿಗೆ ಮಹತ್ವಪೂರ್ಣ ಸ್ಥಾನವಿದೆ. ನಾರದನು ಹೇಳಿದ ಸಂಕ್ಷಿಪ್ತ ಕಥೆಯಲ್ಲಿ ಶಾಪಗಳ ಉಲ್ಲೇಖವಿರದಿದ್ದರೂ ವರಗಳ ಉಲ್ಲೇಖವಿದೆ. ನಿಷಾದನಿಗೆ ಕೊಟ್ಟ ಶಾಪವೇ ವಾಲ್ಮೀಕಿ ರಾಮಾಯಣಕ್ಕೆ ಮೂಲವಾಯಿತು. ದುರ್ವಾಸನು ನುಡಿಯದೇ ತಡೆಹಿಡಿದ ಶಾಪದಿಂದ ರಾಮಾಯಣವು ಕೊನೆಗೊಂಡಿದೆ. ದುರ್ವಾಸನ ಶಾಪವು ಕಟ್ಟಳೆಯದಿತ್ತು. ರಘುಕುಲವು ನಾಶವಾಗಬಾರದೆಂದು ಲಕ್ಷ್ಮಣನು ಈ ಕಟ್ಟಳೆಯಂತೆ ವರ್ತಿಸಿ, ಆತ್ಮಾರ್ಪಣೆ ಮಾಡಿ ವಂಶವನ್ನು ಕಾಪಾಡಿದನು. ಬ್ರಹ್ಮನ ವರದಿಂದ ವಾಲ್ಮೀಕಿಯು ರಾಮಾಯಣವನ್ನು ರಚಿಸಿದನು. ಸತ್ಯದಲ್ಲಿ, ದಶರಥನು ಕೈಕೇಯಿಗೆ ಕೊಟ್ಟ ವರಗಳ ಮೂಲಕ ರಾಮಾಯಣ ನಡೆಯಿತು. ರಾವಣನು ಒಂದು ವಿಧದ ಮರ್ಯಾದಿತ ಅಮರತ್ವವನ್ನೇ ಪಡೆದುಕೊಂಡಿದ್ದನು. ಆದಕಾರಣ ಅವನ ಉಪಟಳ ಹೆಚ್ಚಾಯಿತು- ಮೇಘನಾದನು ದೇವತೆಗಳನ್ನು ಸೋಲಿಸಿದನು. ಕುಂಭಕರ್ಣನು ದೀರ್ಘನಿದ್ರೆಗೆ ಒಳಗಾದನು. ಹನುಮಂತನಿಗೆ ಸ್ವಯಂಭೂಸಾಮರ್ಥ್ಯ ಇತ್ತು. ಅಷ್ಟದೇವತೆಗಳು ಆತನಿಗೆ ವರಗಳನ್ನು ಕೊಟ್ಟಿದ್ದರೀಂದ ಆತನು ಅಸಾಧ್ಯವಾದ ಸಂಗತಿಗಳನ್ನು ಸಾಧಿಸಿ ತೋರಿಸಿದನು. ರಾಮಾಯಣದಲ್ಲಿ ಶಾಪ-ವರಗಳು ಸಾಕಷ್ಟಿವೆ. ಹೀಗಿರುವುದರಿಂದ ರಾಮಾಯಣಕ್ಕೆ ಶಾಪ-ವರಗಳು ಸಾಕಷ್ಟಿವೆ. ಹೀಗಿರುವುದರಿಂದ ರಾಮಾಯಣಕ್ಕೆ ಶಾಪ-ವರಗಳ ಕಥೆ ಎಂತಲೂ