ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೨೬೭


ಹಿಮಾಲಯ ಪರ್ವತದಲ್ಲಿ ವಾಸವಾಗಿದ್ದ ದೇವಸಮನಾದ, ತೇಜಸ್ವಿಯಾದ,
ಭಗವಾನ್ ಭಾರ್ಗವಮುನಿಗೆ ವಂದಿಸಿದಳು, ಆಗ-
ಸ ತಾಮಭ್ಯವದತ್ಪ್ರೀತೋ ವರೇಪ್ಸುಂ ಪುತ್ರಜನ್ಮನಿ।
ಪುತ್ರಸ್ತೇ ಭವಿತಾ ದೇವೀ ಮಹಾತ್ಮಾ ಲೋಕವಿಶ್ರುತಃ ‖೨೧‖
ಧಾರ್ಮಿಕಶ್ಚ ಸುಭೀಮಶ್ಚ ವಂಶಕರ್ತಾರಿಸೂದನಃ |
ಶ್ರುತ್ವಾ ಪ್ರದಕ್ಷಿಣಂ ಕೃತ್ವಾ ಮುನಿಂ ತಮನುಮಾನ್ಯ ಚ ‖೨೨‖

ಪುತ್ರನನ್ನು ಪಡೆಯುವ ವರವನ್ನು ಇಚ್ಛಿಸುವ ಆ ಕಾಲಿಂದಿಗೆ ಮುನಿಯು
ಈ ರೀತಿ ನುಡಿದನು- “ಎಲೈ ರಾಣಿಯೇ, ನೀನು ಒಬ್ಬ ಮಹಾತ್ಮನೆನಿಸುವ,
ಜಗದಲ್ಲಿ ಖ್ಯಾತಿ ಹೊಂದಲಿರುವ, ಧಾರ್ಮಿಕನಾಗಲಿರುವ, ವಂಶವನ್ನು ಮುಂದೆ
ನಡೆಯಿಸುವ, ಶತ್ರುಗಳನ್ನು ದಮನಿಸಲಿರುವ ಪುತ್ರನನ್ನು ಪಡೆಯುವೆ.” ಮುನಿಯ
ಈ ನುಡಿಗಳನ್ನು ಆಲಿಸಿ ಕಾಲಿಂದಿಯು ಮುನಿಗೆ ಪ್ರದಕ್ಷಿಣೆ ಹಾಕಿ ಆತನ
ಅನುಮತಿಯನ್ನು ಪಡೆದು ಸ್ವಸ್ಥಾನಕ್ಕೆ ಮರಳಿದಳು.
ಯಥಾಕಾಲ ಅವಳು ಪ್ರಸೂತಳಾಗಿ ಗಂಡು ಮಗುವನ್ನು ಪಡೆದಳು.
ಇವಳು ಬಸುರಿ ಯಿದ್ದಾಗ ಈಕೆಯ ಸವತಿಯು ಈ ಗರ್ಭವು ನಾಶವಾಗ
ಲೆಂದು ಈಕೆಗೆ ವಿಷವನ್ನು ಕೊಟ್ಟಿದ್ದಳು. ಈ ವಿಷದಿಂದ ಗರ್ಭದ
ಮೇಲೆ ಯಾವ ಪರಿಣಾಮವೂ ಆಗಲಿಲ್ಲ. ಕಾಲಿಂದಿಯ ಮಗನು ಈ ಪರಿಯ
ಗರ(ವಿಷ) ಸಹಿತ ಜನ್ಮ ತಾಳಿದನೆಂದು ಆತನ ಹೆಸರನ್ನು 'ಸಗರ'ನೆಂದು
ಇಡಲಾಯಿತು.
ಸಗರನ ಜನ್ಮದ ಕಥೆಯು ಬಾಲಕಾಂಡದ ಸರ್ಗ ೭೦/೩೪/೩೫ರಲ್ಲಿ
ಬಂದಿದೆ. ಅದರಲ್ಲಿ ಪುತ್ರನನ್ನು ಪಡೆಯುವ ಇಚ್ಛೆಯಿಂದ ಅಭಿವಂದಿಸಿದ ಕಾಲಿಂದಿಗೆ
ಚ್ಯವನಋಷಿಯು ಈ ರೀತಿ ಎಂದನು-
ಸ ತಾಮಭ್ಯವದದ್ವಿಪ್ರಃ ಪುತ್ರೇಪ್ಸುಂ ಪುತ್ರಜನ್ಮನಿ |
ತವ ಕುಕ್ಷೌ ಮಹಾಭಾಗೇ ಸುಪುತ್ರಃ ಸುಮಹಾಬಲಃ ‖೩೪‖
ಮಹಾವೀರ್ಯೋ ಮಹಾತೇಜಾ ಅಚಿರಾತ್ಸಂಜನಿಷ್ಯತಿ |
ಗರೇಣ ಸಹಿತಃ ಶ್ರೀಮಾನ್ಮಾ ಶುಚಃ ಕಮಲೇಕ್ಷಣೇ ‖೩೫‖

“ಹೇ, ಮಹಾಭಾಗ್ಯವತಿಯೇ, ಅತಿ ಬಲಾಢ್ಯನಾದ, ಮಹಾವೀರನಾದ,
ಮತ್ತು ಮಹಾ ತೇಜಸ್ವಿಯಾದ ಒಬ್ಬ ವೈಭವಸಂಪನ್ನನಾದ ಸತ್ಪುತ್ರನು ವಿಷಸಹಿತವಾಗಿ