ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರದಾನ ರ್೨ ನಿನ್ನ ಸಂಭಾಷಣೆಯು ಅರ್ಥಪೂರ್ಣವಾಗಿಯೂ ಯೋಗ್ಯವಾಗಿಯೂ ಇದೆ. ನಿನಗೆ ಪ್ರಿಯವಾದ ಯಾವುದನ್ನು ನಾನು ಮಾಡಲಿ? ಹೇಳು!” ಅನಸೂಯೆಯ ನುಡಿಯನ್ನು ಕೇಳಿ ಸೀತೆಗೆ ವಿಸ್ಮಯವಾಯಿತು. ಆಕೆಯು ಈ ರೀತಿ ಉತ್ತರಿಸಿದಳು: "ನಿಮ್ಮ ಕೃಪೆಯಿಂದ ಎಲ್ಲವೂ ಸರಿಯಾಗಿದೆ. ನನಗೆ ಯಾವ ಕೊರತೆಯೂ ಇಲ್ಲ.” ಸೀತೆಯ ಈ ಮಾತನ್ನು ಕೇಳಿ ಅನಸೂಯೆಯು ಪ್ರಸನ್ನಳಾಗಿ ಸೀತೆಗಾಗಿ ಶ್ರೇಷ್ಟವಾದ ಮಾಲೆ, ವಸ್ತ್ರಗಳು, ಆಭೂಷಣಗಳು, ಲೇಪನ, ಚಂದನ ಮುಂತಾದ ಬಹು ಮೂಲ್ಯ ವಸ್ತುಗಳನ್ನು ಕೊಟ್ಟಳು. - ಅಯಾಚಿತವಾದ ವರವನ್ನು ಅನಸೂಯೆಯು ಕೊಡಬಯಸಿದಳು; ಅದನ್ನು ಸ್ವೀಕರಿಸಬೇಕೆಂದು ಸೀತೆಗೆ ಬಲವಂತಿಸಿದಳು; ಆದರೆ ಸೀತೆಯು ಅದನ್ನು ಸ್ವೀಕರಿಸಲಿಲ್ಲ. ಸೀತೆಗೆ ದೊರೆತ ದಿವ್ಯಮಾಲೆ, ವಸ್ತಾಲಂಕಾರ, ಆಭರಣ, ಚಂದನ, ಲೇಪನ ಇವೆಲ್ಲವೂ ಅನುಗ್ರಹಸ್ವರೂಪದವಾಗಿವೆ. ಇದು ವರವಲ್ಲ. ೨೨. ಬ್ರಹ್ಮದೇವ < ವಿರಾಧ - ಅರಣ್ಯಕಾಂಡ/೩ ರಾಮ ಲಕ್ಷ್ಮಣ ಸೀತೆಯರು ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಒಬ್ಬ ರಾಕ್ಷಸನನ್ನು ಕಂಡರು. ಆ ರಾಕ್ಷಸನು ಅತಿ ಪ್ರಚಂಡನೂ, ಅಕ್ತಾಳವಿಕಾಳ ರೂಪಿಯೂ, ಭೀಭತ್ತನೂ, ಕುರೂಪಿಯೂ ಆಗಿದ್ದನು. ಆತನ ಮುಖಚರ್ಯೆ ಭಯಂಕರವಿತ್ತು. ಕಣ್ಣುಗಳು ಒಳಗೆ ಹೋಗಿದ್ದವು. ಹೊಟ್ಟೆಯು ವಿಶಾಲವಾಗಿತ್ತು. ರಾಮಲಕ್ಷ್ಮಣರು ತಪಸ್ವಿಗಳ ವೇಷದಲ್ಲಿದ್ದರು; ಆದರೆ ಶಸ್ತ್ರಗಳನ್ನು ಕೈಯಲ್ಲಿ ಧರಿಸಿದ್ದರು. ಇದನ್ನು ಕಂಡು ಆ ರಾಕ್ಷಸನು ಕುದ್ದನಾದನು. ದರ್ಪದಿಂದ ರಾಮಲಕ್ಷ್ಮಣರಿಗೆ ಈ ರೀತಿ ನುಡಿದನು: “ “ಮುನಿವೇಷಕ್ಕೆ ನೀವು ಕೈಯಲ್ಲಿ ಹಿಡಿದ ಆಯುಧಗಳು ಶೋಭಿಸು ವದಿಲ್ಲ. ನೀವಿಬ್ಬರೂ ಈ ಒಬ್ಬಳೇ ಸ್ತ್ರೀಯಲ್ಲಿ ಅನುರಕ್ತರಾದಂತಿದೆ. ನೀವು ಅಧರ್ಮನಿಷ್ಠ ಪಾಪಿಗಳು; ಮುನಿಗಳ ಹೆಸರಿಗೆ ಕಲಂಕವನ್ನು ತರುವವರಾಗಿದ್ದೀರಿ? ನೀವು ಯಾರು? ನಾನು 'ವಿರಾಧ'ನೆಂಬ ರಾಕ್ಷಸನಿದ್ದೇನೆ. ಋಷಿಗಳ ಮಾಂಸವನ್ನು ಭಕ್ಷಿಸಿ ಇರುತ್ತೇನೆ. ಮದುವೆಗೆ ತಕ್ಕವಳಾದ ಈ ನಾರಿಯು ನನ್ನ ಭಾರ್ಯೆ ಯಾಗುವಳು, ಯುದ್ಧದಲ್ಲಿ ಪಾಪಿಷ್ಠರಾದ ನಿಮ್ಮಿಬ್ಬರ ರಕ್ತಪ್ರಾಶನವನ್ನು ನಾನು ಮಾಡುವೆ ಎಂದು ಕಿರಿಚಿ ಭಯದಿಂದ ಕಂಪಿಸುತ್ತಿದ್ದ ಸೀತೆಯನ್ನು ಎಳೆದು ತನ್ನ ತೊಡೆಯಮೇಲೆ ಕುಳ್ಳಿರಿಸಿಕೊಂಡನು. ಅದನ್ನು ಕಂಡು, ರಾಮನಿಗೆ ಅತೀವ