ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೦ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ದುಃಖವಾಯಿತು. ರಾಮನ ಮುಖವು ಬಾಡಿತು. ಸೀತೆಗೆ ಪರಪುರುಷನ ಸ್ಪರ್ಶವಾದುದನ್ನು ಕಂಡು ಪರಮವ್ಯಥೆಯಾಯಿತು. ರಾಕ್ಷಸನ ಈ ಹೀನ ಕೃತಿಯಿಂದ ದುಃಖಿತನಾದ ರಾಮನನ್ನು ಕೋಪಗೊಂಡ ಲಕ್ಷಣನು ಸಂತೈಸಿ, ರಾಕ್ಷಸನ ಪಾರಿಪತ್ಯ ಮಾಡಲು ಸಜ್ಜಾದನು. ಆಗ ವಿರಾಧನು ಪುನಃ “ನೀವು ಯಾರು? ಎಲ್ಲಿಗೆ ಹೊರಟಿರುವಿರಿ?” ಎಂದು ಪ್ರಶ್ನಿಸಿದನು. ರಾಮನು, ತಾನು ಇಕ್ಷಾಕು ಕುಲೋತ್ತನ್ನನಿದ್ದೇನೆ ಎಂದು ಹೇಳಿ “ನೀನು ಯಾರು?” ಎಂದು ಪ್ರಶ್ನಿಸಿದನು. ಅದನ್ನು ಕೇಳಿ ವಿರಾಧನು- ಪುತ್ರಃ ಕಿಲ ಜವಸ್ಯಾಹಂ ಮಾತಾ ಮಮ ಶತಪ್ರದಾ | ವಿರಾಧ ಆತಿ ಮಾಮಾಹುಃ ಪೃಥ್ವಿವ್ಯಾಂ ಸರ್ವರಾಕ್ಷಸಾಃ ||೫|| ತಪಸಾ ಚಾಭಿ ಸಪ್ತಾಪ್ತಾ ಬ್ರಹ್ಮಣೋ ಹಿ ಪ್ರಸಾದಜಾ || ಶಣಾವಧೂತಾ ಲೋಕೇಛೇದ್ಯಾ ಭೇದ್ಯತ್ವಮೇವ ಚ ||೬| “ನಾನು 'ಜವ'ನೆಂಬ ರಾಕ್ಷಸನ ಪುತ್ರನಾಗಿದ್ದು ನನ್ನ ಮಾತೆಯ ಹೆಸರು 'ಶತಪ್ರದಾ'. ಈ ಭೂಮಿಯಲ್ಲಿನ ಎಲ್ಲ ರಾಕ್ಷಸರೂ ನನ್ನನ್ನು 'ವಿರಾಧನೆಂದು ಕರೆಯುತ್ತಾರೆ. ನಾನು ತಪಸ್ಸಿನಿಂದ ಬ್ರಹ್ಮದೇವನನ್ನು ಪ್ರಸನ್ನಗೊಳಿಸಿದ್ದೇನೆ. ಆತನಿಂದ ಪಡೆದ ವರದಿಂದ ನನಗೆ ಯಾವ ಶಸ್ತ್ರಗಳೂ ನಾಟಲಾರವು; ನನ್ನನ್ನು ಛೇದಿಸ ಲಾರವು; ನನ್ನನ್ನು ತುಂಡರಿಸಲಾರವು. ನೀವು ಜೀವದಾನವನ್ನು ಬಯಸುತ್ತಿದ್ದರೆ ಈ ಸ್ತ್ರೀಯನ್ನು ಇಲ್ಲಿಯೇ ಬಿಟ್ಟು ತೆರಳಿರಿ!” ಎಂದು ನುಡಿಯುತ್ತಲೇ, ರಾಮನು ಆ ರಾಕ್ಷಸನ ಮೇಲೆ ತೀಕ್ಷ್ಯ ಬಾಣಗಳನ್ನು ಬಿಟ್ಟನು. ಲಕ್ಷ್ಮಣನು ಕೂಡ ಅವನ ಮೇಲೆ ಬಾಣಗಳ ಸುರಿಮಳೆಗರೆದನು; ಆದರೆ ಬಾಣಗಳೆಲ್ಲ ರಾಕ್ಷಸನ ದೇಹದಿಂದ ಕೆಳಗೆ ಉದುರಿ ಬೀಳಹತ್ತಿದವು. ಏಕೆಂದರೆ- ಸ್ಪರ್ಶಾತ್ತು ವರದಾನೇನ ಪ್ರಾಣಾನ್ನಂರೋಧ್ಯ ರಾಕ್ಷಸಃ II೧೭|| “ವರದಾನವನ್ನು ಹೊಂದಿದ್ದರಿಂದ ರಾಕ್ಷಸನಿಗೆ ತೀವ್ರ ವೇದನೆಯಾಗುತ್ತಿದ್ದರೂ ಆತನ ಪ್ರಾಣವು ಹೋಗಲಿಲ್ಲ.” ವಿರಾಧನು ಆನಂತರ ರಾಮನಿಗೆ ಶರಣು ಬಂದನು. ತನ್ನ ಸಾವಿನ ಉಪಾಯವನ್ನು ತಾನೇ ರಾಮಲಕ್ಷ್ಮಣರಿಗೆ ಹೇಳಿದನು. ಆ ರಾಕ್ಷಸನ ಹೇಳಿಕೆಯಂತೆ ಆತನನ್ನು ಒಂದು ಆಳವಾದ ಗುಂಡಿಯಲ್ಲಿ ಹೂತು ಸಾಯಿಸಿದರು. ಇದು 'ಯಾಚಿತ' ವರವಾಗಿದೆ.