ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರದಾನ ೨೭೧ ೨೩. ಇಂದ್ರ < ಶರಭಂಗ - ಅರಣ್ಯಕಾಂಡ/೫ ವಿರಾಧನನ್ನು ವರಿಸಿದ ನಂತರ ರಾಮ ಲಕ್ಷ್ಮಣ ಸೀತೆಯರು ಶರಭಂಗ ಋಷಿಗಳ ಆಶ್ರಮಕ್ಕೆ ಬಂದರು. ತುಂಬಾ ಕ್ಲಶಕಾರಕ ಹಾಗೂ ನಿರ್ಗಮವಾದ ಕಾಡಿನಲ್ಲಿ ವಾಸಿಸುವ ಅನುಭವವು ಅವರಿಗೆ ಇರಲಿಲ್ಲ. ಈ ಆಶ್ರಮವನ್ನು ಸಮೀಪಿಸುತ್ತಿದ್ದಂತೆ ಒಂದು ಸೋಜಿಗದ ಸಂಗತಿಯು ರಾಮನಿಗೆ ಕಂಡುಬಂದಿತು. ಅನೇಕ ಮಹಾತ್ಮರನ್ನೊಳಗೂಡಿಕೊಂಡು ಇಂದ್ರನು ತನ್ನ ದಿವ್ಯ ರಥದಲ್ಲಿ ಈ ಋಷಿಯ ಆಶ್ರಮಕ್ಕೆ ಬರುತ್ತಿದ್ದನು. ರಾಮನು ಇಂದ್ರನನ್ನು ಗುರುತಿಸಿದನು. ರಥಾರೂಢನಾದ ಇಂದ್ರನನ್ನು ಲಕ್ಷ್ಮಣನಿಗೆ ತೋರಿಸಿದನು. ಶರಭಂಗ ಋಷಿ ಯೊಡನೆ ಇಂದ್ರನ ಮಾತುಕತೆ ನಡೆದಾಗ ರಾಮನು ಅಲ್ಲಿಗೆ ಬರುತ್ತಿದ್ದ ವಿಷಯವು ಇಂದ್ರನಿಗೆ ತಿಳಿಯಿತು. ಆಗ ಆತುರದಲ್ಲಿ ಶರಭಂಗ ಋಷಿಯ ಅಪ್ಪಣೆಯನ್ನು ಪಡೆದು ಇಂದ್ರನು ಸುರಲೋಕಕ್ಕೆ ತೆರಳಿದನು. ರಾಮನನ್ನು ಅಲ್ಲಿ ಭೇಟಿಯಾಗುವದು ಇಂದ್ರನಿಗೆ ಇಷ್ಟವಿರಲಿಲ್ಲ. ರಾಮನು ರಾವಣನನ್ನು ಸೋಲಿಸಿದ ನಂತರ ಇಂದ್ರನು ರಾಮನನ್ನು ಕಾಣಬಯಸಿದ್ದನು. ಶರಭಂಗ ಋಷಿಗೆ ರಾಮಲಕ್ಷ್ಮಣ ಸೀತೆಯರು ವಂದಿಸಿದರು. ಮುನಿಯು ಅವರಿಗೆ ಭೋಜನಾದಿ ಆತಿಥ್ಯವನ್ನು ಸಲ್ಲಿಸಿ ಅವರ ವಾಸಕ್ಕೆ ಏರ್ಪಾಟನ್ನು ಮಾಡಿದನು. ಇಂದ್ರನು ಆಗಮಿಸಿದ ಬಗ್ಗೆ ರಾಮನು ಕೇಳಿದಾಗ ಶರಭಂಗ ಮುನಿಯು ಈ ರೀತಿ ಉತ್ತರಿಸಿದನು- ಮಾಮೇಷ ವರದೋ ರಾಮ ಬ್ರಹ್ಮಲೋಕಂ ನಿನೀಷತಿ | ಜಿತಮುತ್ರೇಣ ತಪಸಾ ದುಷ್ಟಾಪಮಕೃತಾತ್ಮಭಿಃ ೨೮॥ “ಎಲೈ ರಾಮನೇ, ಚಿತ್ತಶುದ್ದಿಯನ್ನು ಮಾಡಿಕೊಳ್ಳದಿರುವ ಪುರುಷರಿಗೆ ದುರ್ಲಭ ವಾದಂಥ ಬ್ರಹ್ಮಲೋಕವನ್ನು ಉಗ್ರತಪಸ್ಸಿನಿಂದ ನಾನು ಸಂಪಾದಿಸಿಟ್ಟಿದ್ದೇನೆ. ಆ ಬ್ರಹ್ಮಲೋಕಕ್ಕೆ ನನ್ನನ್ನು ಕರೆದೊಯ್ಯಬಯಸಿ ಆ ವರವನ್ನಿತ್ತ ಇಂದ್ರನು ಆಗಮಿಸಿದ್ದನು.” ಅದರೆ ರಾಮನಂಥ ಅತಿಥಿಯು ಆಶ್ರಮದ ದ್ವಾರದಲ್ಲಿ ಬಂದುದನ್ನು ಕಂಡು ಶರಭಂಗನು ಬ್ರಹ್ಮಲೋಕಕ್ಕೆ ಹೋಗುವ ವಿಚಾರವನ್ನು ಮುಂದೂಡಿದನು. - ಇಂದ್ರನಿಗೆ ಇಲ್ಲಿ ವರದನೆಂದು ವಿಶೇಷವನ್ನು ಕೊಟ್ಟಿದ್ದರೂ ಆತನ ವರದ ಬಗ್ಗೆ ಸ್ಪಷ್ಟವಾದ ಉಲ್ಲೇಖವಿಲ್ಲ.