ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ೨ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ೨೪. ಶರಭಂಗ < ರಾಮ ಅರಣ್ಯಕಾಂಡ/೫ ಇಂದ್ರ < ಶರಭಂಗ-ವರ ಕ್ರಮಾಂಕ ೨೩ ನೋಡಿರಿ. ಸಾಕ್ಷಾತ್ ಇಂದ್ರನು ಬ್ರಹ್ಮಲೋಕಕ್ಕೆ ಕರೆದೊಯ್ಯಲು ಬಂದಿದ್ದರೂ, ರಾಮನಂತಹ ಅತಿಥಿಯು ಬರುತ್ತಿದ್ದುದನ್ನು ಕಂಡು ಶರಭಂಗ ಋಷಿಯು ಇಂದ್ರನೊಡನೆ ತೆರಳಲು ನಿರಕರಿಸಿದನು. “ನಿನ್ನಂತಹ ಧರ್ಮತತ್ಪರ ಮಹಾತ್ಮನನ್ನು ಕಂಡು ಅನಂತರವೇ ನಿಕೃಷ್ಟವಾದ ಸ್ವರ್ಗ ಮತ್ತು ಉತ್ಕೃಷ್ಟವಾದ ಬ್ರಹ್ಮಲೋಕಕ್ಕೆ ಹೋಗುವದೆಂದು ನಿರ್ಧರಿಸಿದ್ದೇನೆ.” ಅಕ್ಷಯಾ ನರಶಾರ್ದೂಲ ಜಿತಾ ಲೋಕಾ ಮಯಾ ಶುಭಾಃ | ಬ್ರಾಹ್ಮಾಷ್ಟ ನಾಕದೃಷ್ಟಾಕ್ಷ ಪ್ರತಿಗಳೇಷ್ಟ ಮಾಮಕಾನ್ 11೩೧ “ಹೇ ಪುರುಷೋತ್ತಮನೇ, ನಾನು ತಪೋಬಲದಿಂದ ಅಕ್ಷಯವಾದ ಶುಭವಾದ ಬ್ರಹ್ಮಲೋಕವನ್ನೂ ಸ್ವರ್ಗಲೋಕವನ್ನೂ ಪಡೆದುಕೊಂಡಿದ್ದೇನೆ. ಆ ಲೋಕಗಳನ್ನು ನೀನು ಸ್ವೀಕರಿಸು!” ಇದನ್ನು ಕೇಳಿ ರಾಮನು ಆ ಮುನಿಗೆ ಇಂತೆಂದನು- ಅಹಮೇವಾಹರಿಷ್ಯಾಮಿ ಸರ್ವಾಲೋಕಾನ್ಮಹಾಮುನೇ | ಆವಾಸಂ ತೊಹಮಿಚ್ಛಾಮಿ ಪ್ರದಿಷ್ಟಮಿಹ ಕಾನನೇ ||೩೩|| “ಹೇ ಮಹಾಮುನಿಯೇ, ನಾನೇ ತಪಸ್ಸನ್ನಾಚರಿಸಿ ಎಲ್ಲ ಲೋಕಗಳನ್ನೂ ಸಂಪಾದಿಸುವೆ. ನೀವು ಈ ಅರಣ್ಯದಲ್ಲಿ ನಮಗೆ ವಾಸಕ್ಕೆ ಯೋಗ್ಯವಾದ ಸ್ಥಳವನ್ನು ಮಾತ್ರ ತೋರಿಸಬೇಕೆಂಬ - ಅಗ ಶರಭಂಗ ಋಷಿಯು ರಾಮನಿಗೆ `ಸುತೀಕ್ಷ' ಮುನಿಯ ಆಶ್ರಮಯಕ್ಕೆ ಹೋಗಲು ಹೇಳಿದನು. ಈ ವರವು 'ಅಯಾಚಿತವಿದೆ ಮತ್ತು ಅಸ್ವೀಕೃತವೂ ಆಗಿದೆ. ೨೫. ಬ್ರಹ್ಮದೇವ < ಮಾರೀಚ ಅರಣ್ಯಕಂಡ೩೮ ಸೀತೆಯನ್ನು ಅಪಹರಿಸುವ ಕಾರ್ಯದಲ್ಲಿ ಸಹಾಯವನ್ನು ಕೋರಿದ ರಾವಣನಿಗೆ ಮಾರೀಚನು ಹಿತೋಪದೇಶವನ್ನು ಮಾಡುತ್ತಾನೆ.