ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರದಾನ ೨೭೩ “ರಾಮನೊಡನೆ ಶತ್ರುತ್ವವನ್ನು ಕಟ್ಟಿಕೊಳ್ಳುವದು; ಆತನ ಸ್ತ್ರೀಯನ್ನು ಅಪಹರಿಸುವದು; ಈ ಸಂಗತಿಗಳು ಸ್ವಂತ ರಾವಣನಿಗಾಗಲೀ ಆತನ ಬಂಧುಗಳಿಗಾಗಲೀ ಒಳಿತಿಗಾಗಿ ಆಗಲಾರವು!” ಎಂದು ಮಾರೀಚನು ರಾವಣನಿಗೆ ಪರಿಪರಿಯಾಗಿ ಹೇಳುತ್ತಾನೆ. ರಾಮನ ಶಕ್ತಿ ಸಾಮರ್ಥ್ಯಗಳ ಅರಿವು ಅನುಭವದಿಂದ ಮಾರೀಚನಿಗಾಗಿದೆ. ರಾಮನಿಂದ ತನಗಾದ ದುರವಸ್ಥೆಯನ್ನು ರಾವಣನೆದುರು ವಿವರವಾಗಿ ಹೇಳುತ್ತಾನೆ: ಮಾರೀಚನನ್ನು ವಿನಾಶ ಗೊಳಿಸಲು ಯಾವ ರೀತಿ ವಿಶ್ವಾಮಿತ್ರನು ದಶರತನ ಬಳಿಗೆ ಹೋಗಿ ಯಜ್ಞದ ರಕ್ಷಣೆಗೆಂದು ರಾಮನನ್ನು ಕರೆತಂದಿದ್ದನು; ರಾಕ್ಷಸರನ್ನು ಸದೆಬಡಿಯಲು, ರಾಮನ ಹೊರತುಪಡಿಸಿ ಬೇರೆ ಯಾರಲ್ಲೂ ಸಾಮರ್ಥ್ಯವಿಲ್ಲವೆಂಬುದನ್ನು ವಿಶ್ವಾಮಿತ್ರನು ತಿಳಿದುಕೊಂಡಿದ್ದುದು. ಮಾರೀಚನು ಸ್ವಂತದ ಬಗ್ಗೆ ಈ ರೀತಿ ಹೇಳುತ್ತಾನೆ- ತತೋsಹಂ ಮೇಘಸಂಕಾಶಸ್ತಪ್ತಕಾಂಚನಕುಂಡಲಃ | ಬಲೀ ದತ್ತವರೋ ದರ್ಪಾದಾಜಗಾಮಾಶ್ರಮಾಂತರಮ್ |೧೬| “ಆನಂತರ ಮೇಘಸಮನಾದ, ಶುದ್ದ ಚಿನ್ನದ ಕುಂಡಲಗಳನ್ನು ಧರಿಸಿದ ಮಹಾ ಬಲಾಡ್ಯನಾದ ನಾನು ದೇವರಿಂದ ಕೂಡ ವಧಿಸಲ್ಪಡದಿರುವ ವರವನ್ನು ಬ್ರಹ್ಮದೇವನಿಂದ ಪಡೆದ ಕಾರಣ ಅಹಂಕಾರದಿಂದ ಆ ಆಶ್ರಮಕ್ಕೆ ತಲುಪಿದೆನು.

  • * 'ಪರಿಘಸಂಜ್ಞಕ್ತ'ವೆಂಬ ಆಯುಧವನ್ನು ಹಿಡಿದುಕೊಂಡ ನನ್ನನ್ನು ರಾಮನು

ಮೊದಲು ಗಮನಿಸಲಿಲ್ಲ; ಆದರೆ ನನ್ನನ್ನು ನೋಡಿದ ಕ್ಷಣವೇ ಸ್ವಲ್ಪ ಕೂಡ ಅಂಜದೆ ಆತನು ತನ್ನ ಬಿಲ್ಲಿಗೆ ಪ್ರತ್ಯಂಚೆಯನ್ನು ಏರಿಸಿದನು. ಅವನೊಬ್ಬ ಬಾಲಕನೊಬ್ಬ ಬಗೆದು ನಾನು ವೇದಿಯತ್ತ ಧಾವಿಸಿದೆ. ಆಗ ರಾಮನು ಒಂದು ತೀಕ್ಷವಾದ ಬಾಣದಿಂದ ನನ್ನನ್ನು ಸಮುದ್ರದಲ್ಲಿ ನೂರು ಯೋಜನೆಗಳಷ್ಟು ದೂರ ಹಾಕಿಸಿ ಎಸೆದನು” ಎಂದು ಸ್ವಂತ ಮಾರೀಚನೇ ಒಪ್ಪಿಕೊಂಡನು. ತನ್ನನ್ನು ಕೊಲ್ಲುವ ಇಚ್ಛೆ ರಾಮನದಾಗಿರಲಿಲ್ಲವಾದ್ದರಿಂದಲೇ ತಾನು ಬದುಕಿಕೊಂಡಿರುವು ದೆಂದು ಸಹ ಹೇಳಿದನು. ರಾಮನೊಡನೆ ಕಲಹವನ್ನು ನಡೆಯಿಸಿದರೆ ಘೋರ ಆಪತ್ತು ಒದಗಿ ನಿನ್ನ ನಾಶವು ಕೂಡಲೇ ಆಗುವದೆಂದು ಕೂಡ ರಾವಣನಿಗೆ ಎಚ್ಚರಿಸಿದನು. ಈ ಮಾರೀಚನಿಗೆ ವರವು ಏಕೆ, ಯಾವ ರೀತಿ ದೊರೆಯಿತೆಂಬ ಬಗ್ಗೆ ನಿಚ್ಚಳವಾದ ಉಲ್ಲೇಖವಿಲ್ಲ. ಇದು ಯಾಚಿತ ವರವೋ ಅಯಾಚಿತ ವರವೋ ಎಂಬುದನ್ನು ಖಚಿತವಾಗಿ ಹೇಳಲಾಗುವುದಿಲ್ಲ. ಎಣ