ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೪ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ೨೬. ಇಂದ್ರ < ಸೀತಾ ಅರಣ್ಯಕಾಂಡ/ಪ್ರಕ್ಷಿಪ್ತ/೫೬ರ ನಂತರ ರಾವಣನು ಸೀತೆಯನ್ನು ಬಲವಂತವಾಗಿ ಅಪಹರಿಸಿ ಲಂಕೆಯ ಅಶೋಕ ವನದಲ್ಲಿ ರಾಕ್ಷಸಿಯರ ಕಣ್ಣೆದುರು ಭದ್ರಕಾವಲಿನಲ್ಲಿ ಇಟ್ಟಿದ್ದನು. ಆಗ ಸೀತೆಯು ಜೀವನಾವಶ್ಯಕವಾದ ಅನ್ನಪಾನೀಯಗಳನ್ನು ತ್ಯಜಿಸಿದಳು. ಇದರಿಂದ ಬ್ರಹ್ಮದೇವನಿಗೆ ಬಹಳೇ ಚಿಂತೆಯುಂಟಾಯಿತು. ಸೀತೆಯು ಉಪವಾಸವಿದ್ದು ಪ್ರಾಣವಿದ್ದು ತ್ಯಜಿಸಬಾರದೆಂದು ಆತನು ಇಂದ್ರನನ್ನು ಲಂಕೆಗೆ ಹೋಗಲು ಪ್ರೇರೇಪಿಸಿದನು. ಅಲ್ಲಿಗೆ ಹೋಗಿ ಉತ್ಕೃಷ್ಟವಾದ ಹವಿಷ್ಯಾನವನ್ನು ಸೀತೆಗೆ ಅರ್ಪಿಸಲು ಎಲ್ಲ ವಿಧದ ಪ್ರಯತ್ನಗಳನ್ನು ಮಾಡಬೇಕೆಂದು ಹೇಳಿದನು. ಇಂದ್ರನು ತನ್ನ ಜೊತೆಗೆ ನಿದ್ರಾದೇವಿಯನ್ನು ಕರೆದೊಯ್ದು ಅಲ್ಲಿಯ ರಾಕ್ಷಸಿಯರಿಗೆ ಮೋಹನಿದ್ರೆ ಬರಿಸುವಂತೆ ಆಜ್ಞಾಪಿಸಿದನು. ಕಾವಲಿದ್ದ ರಾಕ್ಷಸಿಯರೆಲ್ಲ ಮೋಹ ನಿದ್ರೆಯ ವಶರಾದ ನಂತರ ಇಂದ್ರನು ಸೀತೆಯನ್ನು ಭೇಟಿಮಾಡಿದನು; ತನ್ನ ಆಗಮನದ ಉದ್ದೇಶವನ್ನು ವಿವರಿಸಿದನು. ದೇವತಾಕಾರ್ಯಕ್ಕಾಗಿ ರಾಮನ ಯೋಜನೆಯಾಗಿದೆ. ಆತನಿಗೆ ಸರ್ವರಿಂದ ಸಕಲ ರೀತಿಯಲ್ಲಿ ಸಹಾಯವು ದೊರೆಯಲಿರುವದು ಮತ್ತು ಮZಸಾದಾತ್ಸಮುದ್ರಂ ಸ ತರಿಷ್ಯತಿ ಬಲೈಃ ಸಹ ೧೩॥ “ನನ್ನ ಅನುಗ್ರಹದಿಂದ ರಾಮನು ಸೈನ್ಯಸಮೇತನಾಗಿ ಸಮುದ್ರವನ್ನು ಸದಟಿ ಬರುವನು” ಎಂಬ ಆಶ್ವಾಸನೆಯನ್ನು ಕೊಟ್ಟನು. “ರಾಕ್ಷಸಿಯರು ಮೋಹನಿದ್ರೆಯ ಅಧೀನರಾಗಬೇಕೆಂದು ನಾನು ನಿದ್ರಾದೇವಿಯನ್ನು ಜೊತೆಗೆ ತಂದಿದ್ದೇನೆ. ಈ ಹವಿಷ್ಯಾನ್ನವನ್ನು ನಿನಗಾಗಿ ತಂದಿದ್ದೇನೆ.” ಏತದತ್ಯಸ ಮದ್ದಸ್ತಾನ್ನ ತ್ವಾಂ ಬಾಧಿಷ್ಯತೇ ಶುಭೇ | ಕ್ಷುಧಾ ತೃಷಾ ಚ ರಂಭೋರು ವರ್ಷಾಣಾಮಯುತೈರಪಿ ||೧೫|| “ಎಲೈ ಕಲ್ಯಾಣೀ, ನೀನು ಇದನ್ನು ಸೇವಿಸಿದರೆ ಲಕ್ಷವರ್ಷಗಳವರೆಗೆ ನಿನಗೆ ಹಸಿವೆ ನೀರಡಿಕೆಗಳು ಬಾಧಿಸಲಾರವು.” ಭೇಟಿಯಾಗಲು ಬಂದವನು ಇಂದ್ರನೇ ಇರುವ ಬಗ್ಗೆ ಮನವರಿಕೆ ಮಾಡಿಕೊಳ್ಳಲು ರಾಮಲಕ್ಷ್ಮಣರಲ್ಲಿ ಅವಳು ಕಂಡಿದ್ದ ದೇವತಾಸ್ವರೂಪ ಚಿಹ್ನೆ ಗಳನ್ನು, ಇಂದ್ರನು ತನ್ನಲ್ಲಿ ತೋರಿಸಬೇಕೆಂದು ವಿನಂತಿಸಿದಳು. ಇಂದ್ರನು 8