ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರದಾನ ೨೭೫ ಸೀತೆಗೆ ಅದನ್ನು ಖಚಿತಪಡಿಸಿದ ನಂತರ ಹವಿಷ್ಯಾನವನ್ನು ಸ್ವೀಕರಿಸಲು ಅನುಮತಿಸಿದಳು. ಇದಕ್ಕೆ ವರವೆನ್ನಬೇಕೋ? ಅಥವಾ ಇಂದ್ರನ ಶಕ್ತಿಯ ಪ್ರಭಾವವೆನ್ನಬೇಕೋ? ವರವಾಗಿದ್ದರೆ, ಇದು ಅಯಾಚಿತ ವರವಿದೆ. ಹವಿಷ್ಯಾನ್ನವು ದೊರೆಯುವದು ಅನುಗ್ರಹ ಸ್ವರೂಪವಾಗಿದೆ. ೨೭. ತಪಸ್ವಿ < ಶಬರಿ - ಅರಣ್ಯಕಾಂಡ೭೪ ಕಬಂಧನು ತೋರಿಸಿದ ಮಾರ್ಗವನ್ನು ಅನುಸರಿಸಿ ಪಂಪಾಸರೋವರದತ್ತ ಸಾಗುತ್ತಿದ್ದ ರಾಮಲಕ್ಷ್ಮಣರಿಗೆ ಶಬರಿಯ ಆಶ್ರಮವು ಕಾಣಿಸಿತು. ಅಸಂಖ್ಯ ವೃಕ್ಷ ಗಳಿದ್ದ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತಿದ್ದ ಆ ಆಶ್ರಮವು ಅತ್ಯಂತ ರಮಣೀಯವಾಗಿತ್ತು ಅವರು ಶಬರಿಯ ಸಮೀಪ ಹೋದಾಗ ಅವಳಿಗೆ ತುಂಬಾ ಸಂತೋಷವಾಯಿತು. ಶಬರಿಯು ಅತ್ಯಂತ ವಿನಯಪೂರ್ವಕವಾಗಿ ಕರಗಳೆ ರಡನ್ನೂ ಜೋಡಿಸಿ ವಂದಿಸಿದಳು. ಪಾದ್ಯ ಆಚಮನಗಳಿಂದ ಯಥೋಚಿತ ಸ್ವಾಗತವನ್ನಿತ್ತಳು. ಆಕೆಯ ತಪಸ್ಸಿನ ಬಗ್ಗೆ, ಅದರಲ್ಲಿ ವಿಘ್ನವನ್ನು ತರುವ ಷಡ್ರಿಪುಗಳ ದಮನದ ಬಗ್ಗೆ, ಕೋಪನಿಗ್ರಹ, ನಿಯಂತ್ರಿತ ಆಹಾರ, ನಿಯಮಪಾಲನೆ ಇವೆಲ್ಲವುಗಳ ಬಗ್ಗೆ ರಾಮನು ಶಬರಿಯನ್ನು ಪ್ರಶ್ನಿಸಿ ತಿಳಿದುಕೊಂಡುದಲ್ಲದೆ, ಆಕೆಯ ಕ್ಷೇಮಸಮಾಚಾರವನ್ನು ವಿಚಾರಿಸಿಕೊಂಡನು. ಅವಳು ರಾಮನಿಗೆ ವಿನಯದಿಂದ ಈ ರೀತಿ ನುಡಿದಳು- “ನಿನ್ನ ದರ್ಶನದಿಂದ ನನ್ನ ತಪವು ಇಂದು ಫಲಿಸಿತು. ನನ್ನ ಜನ್ಮವು ಸಾರ್ಥಕವಾಯಿತು. ಗುರುಜನರ ಉತ್ಕಷ್ಟ ಸೇವೆಯನ್ನು ಸಲ್ಲಿಸಿದ ಫಲವು ಇಂದು ಲಭಿಸಿದಂತಾಯಿತು. ನಿನ್ನಂಥ ಪುರುಷಶ್ರೇಷ್ಠನನ್ನು ನಾನು ಪೂಜಿಸಿದ್ದರಿಂದ ನನಗೆ ಇನ್ನು ಸ್ವರ್ಗ ಪ್ರಾಪ್ತಿಯಾಗುವದು. ನಿನ್ನ ಮನೋಹರದೃಷ್ಟಿಯಿಂದ ಇಂದು ನಾನು ಪವಿತ್ರಳಾದೆನು. ನಿನ್ನ ಕೃಪಾಪ್ರಸಾದದಿಂದ ನನಗೆ ಅಕ್ಷಯಲೋಕಗಳು ಲಭಿಸಲಿವೆ.” ಚಿತ್ರಕೂಟಂ ತ್ವಯಿ ಪ್ರಾಪ್ತ ವಿಮಾನೈರತುಲಷಿ: || ಆತ ದಿವಮಾರೂಢಾ ಯಾನಹಂ ಪರ್ಯಚಾರಿಷಮ್ ॥೧೪॥ ತೈಶ್ಚಾಹಮುಕ್ತಾ ಧರ್ಮಜೈರ್ಮಹಾಭಾಗೈರ್ಮಹರ್ಷಿಭಿಃ | ಆಗಮಿಷ್ಯತಿ ತೇ ರಾಮಃ ಸುಪುಣ್ಯಮಿಮ ಮಾಶ್ರಮಮ್ ||೧೫||