ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೭೮

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಒಮದು ಸಮೂಹವಿದೆ. ಆ ಸಮಸ್ತ ಪರ್ವತಶ್ರೇಣಿಯು ಎಳೆಯ ಸೂರ್ಯ
ಕಿರಣಗಳ ಹೊನ್ನಿನ ಕಾಂತಿಯಂತೆ ಬೆಳಗುತ್ತಿರುವದು. ಆ ಪರ್ವತಶ್ರೇಣಿಯ
ಮಧ್ಯ ಭಾಗದಲ್ಲಿ ಪರ್ವತರಾಜನಾದ 'ಮೇರು' ಎಂಬ ಪರ್ವತವಿದೆ.
ಆದಿತ್ಯೇನ ಪ್ರಸನ್ನೇನ ಶೈಲೋ ದತ್ತವರಃ ಪುರಾ ‖೩೮‖
ತೇನೈವಮುಕ್ತಃ ಶೈಲೇಂದ್ರಃ ಸರ್ವ ಏವ ತ್ವದಾಶ್ರಯಾಃ |
ಮತ್ಪ್ರಸಾದಾದ್‌ಭವಿಷ್ಯಂತಿ ದಿವಾ ರಾತ್ರೌ ಚ ಕಾಂಚನಾಃ ‖೩೯‖
ತ್ವಯಿ ಯೇ ಚಾಪಿ ಮತ್ಸ್ಯಂತಿ ದೇವಗಂಧರ್ವದಾನವಾಃ |
ತೇ ಭವಿಷ್ಯಂತಿ ಭಕ್ತಾಶ್ಚ ಪ್ರಭಯಾ ಕಾಂಚನಾಪ್ರಭಾಃ ‖೬೦‖

ಪೂರ್ವದಲ್ಲಿ ಪ್ರಸನ್ನನಾದ ಸೂರ್ಯನು ವರವನ್ನು ಕೊಡುವಾಗ ಆ ಪರ್ವತಕ್ಕೆ
ಇಂತೆಂದನು: “ಹಗಲಿರುಳೂ ನಿನ್ನ ಆಶ್ರಯಕ್ಕಿರುವ ಎಲ್ಲರೂ ನನ್ನ ಕೃಪೆಯಿಂದ
ಸುವರ್ಣ ಕಾಮತಿಯರಾಗುವರು. ನಿನ್ನಲ್ಲಿ ವಾಸಿಸುವ ದೇವತೆಗಳು, ಗಂಧರ್ವರು
ಮತ್ತು ದಾನವರು ನನ್ನ ಭಕ್ತರಾಗಿ ಹೊನ್ನಿನಂತೆ ಪ್ರಭೆಯುಳ್ಳವರಾಗುವರು.”
ಸ್ಪಷ್ಟವಾದ ಉಲ್ಲೇಖವು ಇರದ ಕಾರಣ ಈ ವರವು ಯಾಚಿತವೋ
ಅಯಾಚಿತವೋ? ಎಂಬುದನ್ನು ನಿಶ್ಚಿತವಾಗಿ ಹೇಳಲಾಗುವುದಿಲ್ಲ.

೩೦ ಬ್ರಹ್ಮದೇವ < ಮಯ

ಕಿಷ್ಕಿಂಧಾಕಾಂಡ/೫೧

ಹನುಮಂತನ ವಿನಂತಿಯನುಸಾರ ಸ್ವಯಂಪ್ರಭೆಯು 'ಋಕ್ಷಬಿಲ'ದ
ವೃತ್ತಾಂತವನ್ನು ಹೇಳುತ್ತಾಳೆ.
ಮಯೋ ನಮ ಮಹಾತೇಜಾ ಮಾಯಾವೀ ವಾನರರ್ಷಭ ‖೧೦‖
ತೇನೇದಂ ನಿರ್ಮಿತಂ ಸರ್ವಂ ಮಾಯಾಯಾ ಕಾಂಚನಂ ವನಮ್ |
ಪುರಾ ದಾನವಮುಖ್ಯಾನಾಂ ವಿಶ್ವಕರ್ಮಾ ಬಭೂವ ಹ ‖೧೧‖
ಯೇನೇದಂ ಕಾಂಚನಂ ದಿವ್ಯ ನಿರ್ಮಿತಂ ಭವನೋತ್ತಮಮ್ |
ಸ ತು ವರ್ಷಸಹಸ್ರಾಣಿ ತಪಸ್ತಪ್ತ್ವಾ ಮಹದ್ವನೇ ‖೧೨‖
ಪಿತಾಮಹಾದ್ವರಂ ಲೇಭೇ ಸರ್ವಮೌಶನಸಂ ಧಮನ್ ‖೧೩‖

“ಹೇ ವಾನರಶ್ರೇಷ್ಠನೇ, 'ಮಯ'ನೆಂಬ ಮಹಾತೇಜಸ್ವಿ ಮಾಯಾವಿಯೊಬ್ಬ
ನಿದ್ದಾನೆ. ಆತನು ತನ್ನ ಮಾಯೆಯಿಂದ ಸುವರ್ಣವನವನ್ನು ನಿರ್ಮಿಸಿದ್ದಾನೆ.