ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೨೭೯


ಪೂರ್ವದಲ್ಲಿ ಈತನು ಶ್ರೇಷ್ಠರೆನಿಸಿದ ದಾನವರ ಶಿಲ್ಪಿಯಾಗಿದ್ದನೆಂದು ಪ್ರಸಿದ್ಧವಾಗಿದೆ.
ಆತನೇ ಈ ದಿವ್ಯವಾದ ಸರ್ವೋತ್ಕೃಷ್ಟವಾದ ವಸತಿಸ್ಥಾನವನ್ನೂ ನಿರ್ಮಿಸಿದ್ದಾನೆ.
ಮಹಾರಣ್ಯದಲ್ಲಿ ಸಾವಿರಾರು ವರ್ಷಗಳ ತಪಸ್ಸನ್ನು ಆಚರಿಸಿದ ನಂತರ ಬ್ರಹ್ಮನಿಂದ
ಆತನಿಗೆ ವರ ಪ್ರಾಪ್ತವಾಯಿತು. ಇದಲ್ಲದೆ 'ಉಶನ' (ಶುಕ್ರಾಚಾರ್ಯ)
ಮಹರ್ಷಿಯಿಂದ ರಚಿಸಲ್ಪಟ್ಟ ಎಲ್ಲ 'ಶಿಲ್ಪಶಾಸ್ತ್ರ'ದ ಸ್ವರೂಪದ ಧನವು ಈತನಿಗೆ
ಲಭಿಸಿತು.”
ಬೇಕುಬೇಕಾದ ಭೋಗ್ಯ ಪದಾರ್ಥಗಳನ್ನು ನಿರ್ಮಿಸುವ ಶಕ್ತಿಯನ್ನು
ಹೊಂದಿದ್ದ ಈ ಬಲಾಢ್ಯ ದಾನವನಾದ ಮಯನು ಇದನ್ನೆಲ್ಲ ನಿರ್ಮಿಸಿ ಕೆಲವು
ಕಾಲದವರೆಗೆ ಸುಖದಿಂದ ಬಾಳಿದನು. ಈ ನಂತರ 'ಹೇಮಾ' ಎಂಬ
ಅಪ್ಸರೆಯೊಡನೆ ಲಂಪಟನಾದ್ದರಿಂದ ಇಂದ್ರನು ವಜ್ರಾಘಾತದಿಂದ ಸಾಯಿಸಿದನು.
ಇದು 'ಯಾಚಿತ' ವರವಾಗಿದೆ.

೩೧. ಹೇಮಾ ಸ್ವಯಂಪ್ರಭಾ

ಕಿಷ್ಕಿಂಧಾಕಾಂಡ/೫೧

ಸ್ವಯಂಪ್ರಭೆಯು ಹನುಮಂತನಿಗೆ ಋಕ್ಷ-ಬಿಲದ ವೃತ್ತಾಂತವನ್ನು
ಅರುಹುತ್ತಾಳೆ.
ಸೀತೆಯ ಶೋಧಾರ್ಥಕ್ಕಾಗಿ ಅರಣ್ಯವನನು ಸುತ್ತುತ್ತಿದ್ದ ಹನುಮಂತ
ಮುಂತಾದ ವಾನರರು ಋಕ್ಷ-ಬಿಲವನ್ನು ಪ್ರವೇಶಿಸಿದರು. ಅಲ್ಲಿಯ ಅಪೂರ್ವ
ಸೌಂದರ್ಯವನ್ನು ಕಂಡು ಅವರು ಆಶ್ಚರ್ಯಚಕಿತರಾದರು. ಅಲ್ಲಿ ಓರ್ವ ವಲ್ಕಲ-
ಕೃಷ್ಣಾಜಿನಗಳನ್ನು ಧರಿಸಿದ್ದ ತಪಸ್ವಿನಿಯು ಕಂಡುಬಂದಳು. ಆಕೆಯು ಇವರೆಲ್ಲರಿಗೂ
ಯೋಗ್ಯವಾದ ಆದರಾತಿಥ್ಯವನ್ನು ಸಲ್ಲಿಸಿದಳು. ಆನಂತರ ಹನುಮಂತನ ವಿನಂತಿ
ಯನುಸಾರ 'ಋಕ್ಷ-ಬಿಲ'ದ ವೃತ್ತಾಂತವನ್ನು ಹೇಳಿದಳು. ಮಯನು ಈ ಸುವರ್ಣ
ವನವನ್ನು, ಎಂದಿಗೂ ಕಡಿಮೆಯಾಗಲಾರದ ಭೋಗ್ಯವಸ್ತುಗಳನ್ನು ನಿರ್ಮಿಸಿ,
ಈ ಸುವರ್ಣಮಯ ವಸತಿಸ್ಥಾನವನ್ನು ರಚಿಸಿದ್ದನ್ನು ಇಂದ್ರನು ಈ ಮಯವನ್ನು
ಸಾಯಿಸಿದನಂತರ ಬ್ರಹ್ಮದೇವನು, ಈ ಎಲ್ಲವನ್ನೂ ಮಯನ ಭಾರ್ಯೆಯಾದ
'ಹೇಮಾ' ಎಂಬ ಅಪ್ಸರೆಗೆ ಕೊಟ್ಟನು. ಇದನ್ನು ತಿಳಿಸಿ ಸ್ವಯಂಪ್ರಭೆಯು ತನ್ನ
ವೃತ್ತಾಂತವನ್ನು ಹೇಳುತ್ತಾಲೆ-
ದುಹಿತಾ ಮೇರುಸಾವರ್ಣೇರಹಂ ತಸ್ಯಾಃ ಸ್ವಯಂಪ್ರಭಾ ‖೧೬‖
ಇದಂ ರಕ್ಷಾಮಿ ಭವನಂ ಹೇಮಾಯಾ ವಾನರೋತ್ತಮ |