ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರದಾನ ೨೮೧ ಮರಣವನ್ನು ಸಮೀಪಿಸುತ್ತಿದ್ದ ವಾನರರಾದ ನಮ್ಮನ್ನು ನೀನು ರಕ್ಷಿಸಿರುವೆ ಯಾದ್ದರಿಂದ ಆ ಉಪಕಾರವನ್ನು ತೀರಿಸಲು ನಮ್ಮಿಂದ ನಿನ್ನ ಯಾವ ಕಾರ್ಯ ವಾಗಬೇಕಾಗಿದೆ ಎಂಬುದನ್ನು ಹೇಳು?” ಆಗ ಸ್ವಯಂಪ್ರಭೆಯು ವಾನರಪ್ರಮುಖನಾದ ಹನುಮಂತನಿಗೆ ಈ ರೀತಿ ಉತ್ತರಿಸಿದಳು: ಸರ್ವೇಷಾಂ ಪರಿತುಷ್ಟಾಗಿ ವಾನರಾಣಾಂ ತರ ನಾಮ್ ೧೯॥ ಚರಂತ್ಯಾ ಮಮ ಧರ್ಮೇಣ ನ ಕಾರ್ಯಮಿಹ ಕೇನಚಿತ್ ||೨೦|| “ಎಲ್ಲ ಬಲಶಾಲಿಗಳಾದ ವಾನರರ ಬಗೆಗೂ ನಾನು ಪ್ರಸನ್ನಳಾಗಿದ್ದೇನೆ. ಧರ್ಮನಿರತಳಾದ ನನಗೆ ಯಾರಿಂದಲೂ ಯಾವ ಬಗೆಯ ಕಾರ್ಯಾಪೇಕ್ಷೆಯೂ ಉಳಿದಿಲ್ಲ.” 'ವರ' ಎಂಬ ಸ್ಪಷ್ಟ ಉಲ್ಲೇಖವು ವಾಲ್ಮೀಕಿಯಿಂದ ಮಾಡಲ್ಪಟ್ಟಿಲ್ಲ. 'ಪ್ರತ್ಯುಪಕಾರಾರ್ಥಮ್ - ಈ ಶಬ್ದವನ್ನು ಬಳಸಿರುವದರಿಂದ ಕೃತಜ್ಞತೆಯು ವ್ಯಕ್ತವಾಗುತ್ತದೆ. ಇದಕ್ಕೆ ವರ ಎನ್ನುವುದಾದರೆ ಇದು ಅಯಾಚಿತವೂ ಮತ್ತು ಅಸ್ವೀಕೃತವೂ ಆಗಿದೆ. ೩೩. ನಿಶಾಕರ < ಸಂಪಾತಿ ಕಿಷ್ಕಂದಾಕಾಂಡ/೬೨, ೬೩ ಸಂಪಾತಿಯು ವಾನರರಿಗೆ ತನ್ನ ಪೂರ್ವವೃತ್ತಾಂತವನ್ನು ಹೇಳುತ್ತಿದ್ದಾನೆ. ಭಗವಾನ ನಿಶಾಕರ ಮುನಿಯ ವಿನಂತಿಯನುಸಾರ ಸಂಪಾತಿಯು ತನ್ನ ರೆಕ್ಕೆಗಳು ಹೇಗೆ ಸುಟ್ಟುಹೋದವು ಎಂಬುದರ ಬಗ್ಗೆ ವಿಸ್ತಾರವಾಗಿ ಹೇಳುತ್ತಿದ್ದಾನೆ. ಒಮ್ಮೆ ಹೆಮ್ಮೆಯಿಂದ ಕೊಬ್ಬದ ಅವನು ಮತ್ತು ಆತನ ತಮ್ಮನಾದ ಜಟಾಯು ಇವರಲ್ಲಿ ಯಾರು ಬಹುದೂರ ಹಾರಬಲ್ಲರೋ ಅವರೇ ಶ್ರೇಷ್ಠರು, ಎಂದು ತಿಳಿಯಬೇಕೆಂಬ ಸ್ಪರ್ಧೆ ಶುರುವಾಯಿತು. ಅವರಿಬ್ಬರೂ ಹಾರಿ, ಅನೇಕ ಪ್ರದೇಶಗಳನ್ನು, ನದಿ ಪರ್ವತಗಳನ್ನು ದಾಟಿ ತುಂಬ ಎತ್ತರಕ್ಕೆ ತಲುಪಿದರು. ಆಗ ಅವರಿಗೆ ದಿಕ್ಕುಗಳ ಪ್ರಜ್ಞೆಯೂ ಉಳಿಯಲಿಲ್ಲ. ತುಂಬಾ ಹಾರಿ ದಣಿದು ಸೋತರು, ಭಯಗೊಂಡರು. ತಾವು ಅಗ್ನಿಯಿಂದ ದಹಿಸಲ್ಪಡುತ್ತಿದ್ದೇವೆ ಎಂಬ ಅನುಭವವು ಅವರಿಗೆ ಆಗಹತ್ತಿತು. ಸೂರ್ಯನತ್ತ ನೋಡಿದಾಗ ಸೂರ್ಯನು ಅತಿದೊಡ್ಡವನಾಗಿ ಕಾಣಹತ್ತಿದನು. ಆಗ ಇದ್ದಕ್ಕಿದ್ದಂತೆ ಜಟಾಯುವ ಧರಣಿಯತ್ತ