ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರದಾನ ೨೮೩ ನಿಶಾಕರ ಮುನಿಯ ಹೇಳಿಕೆಯಂತೆ ಸಂಪಾತಿಯು, ವಾನರರು ಬರುವ ದಾರಿ ಕಾಯುತ್ತ ಕಾಲಕ್ರಮಿಸಹತ್ತಿದನು. ವಾನರರ ಸಮೂಹವು ಬಂದ ನಂತರ ಅವರಿಗೆ ತನ್ನ ಪೂರ್ವವೃತ್ತಾಂತವನ್ನು ತಿಳಿಸುತ್ತಿದ್ದಾಗ: ಉತ್ತೇತತುಸ್ತದಾ ಪಕ್ಷ ಸಮಕ್ಷಂ ವನಚಾರಿಣಾಮ್ | ಸ ದೃಷ್ಟಾ, ಸ್ವಾಂ ತನುಂ ಪರುದ್ಗತೈರರುಣಚ್ಛದೈ: || ಸರ್ಗ ೩-೯ ಆ ವಾನರರ ಸಮಕ್ಷಮವೇ ಸಂಪಾತಿಗೆ ರೆಕ್ಕೆಗಳು ಮೂಡಿಬಂದವು. ತಮ್ಮ ಶರೀರವು ನೂತನ ಕೆಂಪುವರ್ಣದ ರೆಕ್ಕೆಗಳಿಂದ ಯುಕ್ತವಾಗಿದೆ ಎಂಬುದನ್ನು ಅವಲೋಕಿಸಿ ಸಂಪಾತಿಗೆ ಬಹಳ ಆನಂದವಾಯಿತು. ಇದು 'ಅಯಾಚಿತ' ವರವಾಗಿದೆ. ೩೪. ಬ್ರಹ್ಮದೇವ < ಹನುಮಾನ ಕಿಂಧಾಕಾಂಡ/೬೬ ಜಾಂಬವಂತನು ಹನುಮಂತನಿಗೆ ಆತನ ಜನ್ಮದ ವೃತ್ತಾಂತವನ್ನು ಹೇಳುತ್ತಿದ್ದಾನೆ. ಅಂಜನಿಯ ಅನುಪಮ ಲಾವಣ್ಯವನ್ನು ಕಂಡು ಕಾಮಪೀಡಿತನಾದ ವಾಯುವು ಆಕೆಯನ್ನು ಆಲಿಂಗಿಸಿ ತನ್ನ ತೇಜಸ್ಸನ್ನು (ವೀರ್ಯ) ಆಕೆಯಲ್ಲಿ ಸ್ಥಾಪಿಸಿದನು. ತನ್ನ ಪಾತಿವ್ರತ್ಯವು ಯಾರಿಂದಲೋ ಭ್ರಷ್ಟವಾಗುತ್ತಿದ್ದುದನ್ನು ಅರಿತು ಅವಳು ಬೆಚ್ಚಿಬಿದ್ದಳು. ಆಗ ವಾಯುವು ಆಕೆಗೆ ಈ ರೀತಿ ನುಡಿದನು: “ಹೇ, ಸುಂದರಿಯೇ, ನಾನು ನಿನ್ನನ್ನು ಭ್ರಷ್ಟಗೊಳಿಸುತ್ತಿಲ್ಲ. ನೀನು ಭಯಪಡದಿರು. ನಾನು ನಿನ್ನನ್ನು ಆಲಿಂಗಿಸಿ ಮಾನಸಿಕ ಭೋಗದಿಂದ ನನ್ನ ತೇಜಸ್ಸನ್ನು ನಿನ್ನಲ್ಲಿಟ್ಟಿದ್ದೇನೆ. ನಿನಗೆ ಇದರಿಂದ ವೀರನಾದ, ಬುದ್ಧಿವಂತನಾದ ಮಗನು ಹುಟ್ಟುವನು. ಆ ಪುತ್ರನು ಬಹಳ ಶೂರನೂ, ತೇಜಸ್ವಿಯೂ, ಪರಾಕ್ರಮಿಯೂ ಆಗುವವನಿದ್ದು, ಮಾರ್ಗವನ್ನು ಉಲ್ಲಂಘಿಸುವದರಲ್ಲಿ ಆತನು ನನಗೆ ಸರಿಸಮಾನನಾಗುವನು. ವಾಯುವಿನ ನುಡಿಗಳನ್ನು ಕೇಳಿ ಅಂಜನಿಯು ಸಂತೋಷಗೊಂಡಳು. ಒಂದು ಗುಹೆಯಲ್ಲಿ ಅವಳು ಪ್ರಸೂತಳಾಗಿ ಅವಳಿಗೆ ಹನುಮಾನನು ಹುಟ್ಟಿದನು. ಆ ಸಮಯಕ್ಕೆ ಸರಿಯಾಗಿ ಅದೇ ಮೂಡಿದ ಸೂರ್ಯನನ್ನು ಕಂಡ ಹನುಮಾನನು ಅದೊಂದು ಫಲವಿರಬೇಕೆಂದು ಗ್ರಹಿಸಿ ಅದನ್ನು ತಿನ್ನಲೆಂದು ಆಕಾಶದಲ್ಲಿ ಮುನ್ನೂರು