ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮೬ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ಸಮುದ್ರವನ್ನು ಲಂಘಿಸುವಾಗ ಎಲ್ಲಿಯೂ ವಿಶ್ರಮಿಸುವದಿಲ್ಲವೆಂದು ಪ್ರತಿಜ್ಞೆಯನ್ನು ಮಾಡಿರುವದಾಗಿ ತಿಳಿಸಿ, ಪರ್ವತಶಿಖರದಲ್ಲಿ ಎಲ್ಲಿಯೂ ವಿಶ್ರಮಿಸಲು ನಿರಾಕರಿಸಿದನು. ರಾಮನ ಸೇವೆಯ ಕಾರ್ಯದಲ್ಲಿ ಮೈನಾಕ ಪರ್ವತವು ಸಹಾಯ ಮಾಡಲು ಸಮುದ್ರದ ಮೇಲಕ್ಕೆ ಬಂದದ್ದನ್ನು ನೋಡಿ ಇಂದ್ರನು ಸಂತೋಷಪಟ್ಟನು. ಮೈನಾಕ ಪರ್ವತಕ್ಕೂ ಸಾರ್ಥಕವೆನಿಸಿತು. ಇಂದ್ರನು ಆ ಪರ್ವತಕ್ಕೆ ಈ ರೀತಿ ನುಡಿದನು- ಹಿರಣ್ಯನಾಭ ಶೈಲೇಂದ್ರ ಪರಿಸ್ಟೋsಸ್ಮಿ ತೇ ಭೈಶಮ್ | ಅಭಯಂ ತೇ ಪ್ರಯಚ್ಛಾಮಿ ಗಚ್ಚ ಸೌಮ್ಯ ಯಥಾಸುಖಮ್ ॥೧೩೯ “ಎಲೈ ಸುವರ್ಣಕಾಂತಿಯ ಪರ್ವತರಾಜನೇ, ನಾನು ನಿನ್ನ ಮೇಲೆ ಪರಮ ಸಂತುಷ್ಟನಾಗಿದ್ದೇನೆ. ನಾನು ನಿನಗೆ ಅಭಯವನ್ನು ಕೊಡುವೆ. ಹೇ ವಿನಯ ಸಂಪನ್ನನೇ, ನೀನು ನಿಶ್ಚಿಂತೆಯಿಂದ ಇರು!” ಈ ವರವು ದೊರೆತ ನಂತರ ಮೈನಾಕ ಪರ್ವತವು ಮೊದಲಿನಂತೆ ನೀರಿನಲ್ಲಿ ಮುಳುಗಿತು. ಸ ವೈ ದತ್ತವರ: ತೈಲೋ ಬಭೂವಾವಸ್ಥಿತಸ್ತದಾ IK೮೩| ಇದು “ಅಯಾಚಿತ ವರವಾಗಿದೆ. ೩೭. ಬ್ರಹ್ಮದೇವ < ಸುರಸಾ ಸುಂದರಕಾಂಡ/೧ ಎಷ್ಟೇ ಸಂಕಷ್ಟಗಳು ಎದುರಾದರೂ ಅವುಗಳನ್ನು ನಿವಾರಿಸಿ, ರಾಕ್ಷಸ ರಾಜನಾದ ರಾವಣನನ್ನು ಹೆಡೆಮುರಿಗೆ ಕಟ್ಟಿ ಸೀತೆಯ ಸಹಿತಾಗಿ ಮರಳುವ ಪ್ರತಿಜ್ಞೆಯನ್ನು ಮಾಡುವ ಹನುಮಾನನ ಶಕ್ತಿಸಾಮರ್ಥ್ಯವನ್ನು ಪರೀಕ್ಷಿಸುವ ಉದ್ದೇಶದಿಂದ ದೇವತೆಗಳು, ಗಂಧರ್ವರು, ಸಿದ್ದರು, ಮಹರ್ಷಿಗಳು ಸುರಸೆಯನ್ನು ಪ್ರಾರ್ಥಿಸುತ್ತಿದ್ದಾರೆ. “ಈ ವಾಯುಪುತ್ರನು ಸಮುದ್ರವನ್ನು ದಾಟುತ್ತಿರುವಾಗ ಎಲೈ ಸುರಸೇ, ನೀನು ಪರ್ವತಪ್ರಾಯವಾದಂಥ ಭಯಂಕರ ರೂಪವನ್ನು ಧರಿಸು! ಆಕಾಶವನ್ನೇ ಸ್ಪರ್ಶಿಸುವಷ್ಟು ವಿಶಾಲವಾಗಿ ಬಾಯ್ದೆರೆದು ನೀನು ಕ್ಷಣಕಾಲ ಆತನಿಗೆ ವಿಘ್ನ ವನ್ನುಂಟುಮಾಡು!” ಎಂದು ಮನವಿ ಮಾಡಿದರು. ಆಗ ಘೋರ ರೂಪವನ್ನು