ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರದಾನ ೨೮೭ ತಾಳಿ ಸುರಸೆಯು ಹನುಮಂತನನ್ನು ಮಾರ್ಗದಲ್ಲಿ ತಡೆದು ಆತನಿಗೆ ಈ ರೀತಿ ಎಂದಳು: ಮಮ ಭಕ್ಷ್ಮ ಪ್ರದಿಷ್ಟಷ್ಟಮೀಶ್ವರೆರ್ವಾನರರ್ಷಭ | ಅಹಂ ತ್ವಾಂ ಭಕ್ಷಯಿಷ್ಯಾಮಿ ಪ್ರವಿಶೇದಂ ಮಮಾನನಮ್ ೧೫೦ ರ ಏಷ ಪುರಾ ದತ್ತೋ ಮಮ ಧಾತ್ರೇತಿ ಸತ್ವರಾ ವ್ಯಾದಾಯ ವಕ್ತ ವಿಪುಲ ಸ್ಥಿತಾ ಸಾ ಮಾರುತೇಃ ಪುರಃ ॥೧೫೧ “ವಾನರಶ್ರೇಷ್ಠನಾದ ನಿನ್ನನ್ನು ನನ್ನ ಆಹಾರವೆಂದು ಈಶ್ವರನು ಯೋಜಿಸಿದ್ದಾನೆ. ಅದಕ್ಕಾಗಿ ನಾನು ನಿನ್ನನ್ನು ಭಕ್ಷಿಸುವೆ. ಈ ನಿನ್ನ ವಿಶಾಲವಾದ ಬಾಯಿಯನ್ನು ಪ್ರವೇಶಿಸು! ನನ್ನ ಎದುರಿನಲ್ಲಿ ಬಂದವನು ನನ್ನ ಬಾಯಿಯನನು ಪ್ರವೇಶಿಸಲೇ ಬೇಕು- ಎಂಬ ವರವನ್ನು ಬ್ರಹ್ಮದೇವನಿಂದ ನಾನು ಪಡೆದಿದ್ದೇನೆ” ಎಂದು ಹೇಳಿ ಸುರಸೆಯು ತನ್ನ ಬಾಯಿಯನ್ನು ವಿಶಾಲಗೊಳಿಸಿದಳು. ಹನುಮಂತನು ಆಗ, ತಾನು ಕೈಗೊಂಡ ಕಾರ್ಯವು ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಶಾಂತಚಿತ್ತದಿಂದ ವಿವರಿಸಿದನು. ರಾಮನ ಕಾರ್ಯದಲ್ಲಿ ನೇರವಾಗಿ ತನ್ನ ಬಿಡುಗಡೆ ಮಾಡಬೇಕೆಂದು ಪ್ರಾರ್ಥಿಸಿಕೊಂಡನು. ಈ ಬಿನ್ನಹವನ್ನು ಮನ್ನಿಸಲು ಸಾಧ್ಯವಿರ ದಿದ್ದರೆ, ಸೀತೆ ಹಾಗೂ ಉದಾರಕಾರ್ಯನಿರತನಾದ ರಾಮನನ್ನು ಅವಲೋಕನ ಮಾಡಿ ಮರಳಿ ಬರುವೆನೆಂದು ಪ್ರತಿಜ್ಞೆ ಮಾಡಿ ಹೇಳಿದನು. ಇಷ್ಟೆಲ್ಲ ಹೇಳಿದರೂ ಬೇಕುಬೇಕಾದ ರೂಪವನ್ನು ಧರಿಸಬಲ್ಲ ಸುರಸೆಯು ಆತನಿಗೆ- ಅಬ್ರವೀನ್ಮಾತಿವರ್ತನ್ಯಾಮ ಕಲ್ಟಿವೇಷ ವರೋ ಮಮ ೧೫೬|| “ನನ್ನನ್ನು ತಪ್ಪಿಸಿ ಯಾರೂ ಮುಂದೆ ಹೋಗುವಂತಿಲ್ಲ ಎಂಬ ವರವು ನನಗೆ ದೊರೆತಿದೆ” ಎಂದು ಹೇಳುತ್ತಿದ್ದರೂ ಹನುಮಾನನು ಮುಂದೆ ಸಾಗ ಹತ್ತಿದನು. ಅಗ ಹನುಮಾನನ ಬಲದ ಪರೀಕ್ಷೆಯನ್ನು ಮಾಡಲು ಆಕೆಯು ಅವನಿಗೆ- ನಿವಿಷ್ಯ ವದನಂ ಮೇದ್ಯ ಗಂತವ್ಯಂ ವಾನರೋತ್ತಮ | ವರ ಏಷ ಪುರಾ ದತ್ತೋ ಮಮ ಧಾತ್ರೇತಿ ಸತ್ವರಾ (೧೫೯ “ನನ್ನಿಂದ ಪಾರಾಗುವದು ಯಾರಿಗೂ ಸಾಧ್ಯವಾಗಬಾರದೆಂಬ ವರವನ್ನು ನಾನು ಪಡೆದಿದ್ದೇನೆ” ಎಂದು ನುಡಿದು ತನ್ನ ಬಾಯಿಯನ್ನು ಇನ್ನಷ್ಟು ವಿಶಾಲ