ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರದಾನ ೨೮೯ ೩೮. ಬ್ರಹ್ಮದೇವ < ಲಂಕಾದೇವಿ ಸುಂದರಕಾಂಡ/೩ ಲಂಕಾದೇವಿಯು ಹನುಮಾನನಿಗೆ ತನ್ನ ಕಥೆಯನ್ನು ತಿಳಿಸುತ್ತಾಳೆ. ಲಂಕೆಯನ್ನು ಪ್ರವೇಶಿಸುತ್ತಿದ್ದ ಹನುಮಾನನನ್ನು ಲಂಕಾದೇವಿಯು ವಿರೋಧಿಸಿದಳು. ಹನುಮಂತನು ತನ್ನ ಉದ್ದೇಶವನ್ನು ತಿಳಿಸಿದ್ದರೂ ಆಕೆಯು ಬಲು ದರ್ಪದಿಂದ ಹನುಮಾನನೊಡನೆ ಮಾತನಾಡುತ್ತಿದ್ದಳು. ಅವಳು ಹನುಮಾನನಿಗೆ ಒಂದು ಬಲವಾದ ಏಟನ್ನು ಕೊಟ್ಟಳು. ಆಗ ಹನುಮಾನನು ಅವಳು ಓರ್ವ ಸ್ತ್ರೀಯಾದ್ದರಿಂದ ಅವಳಿಗೆ ಬಲವಾಗಿ ಹೊಡೆಯದೇ ತನ್ನ ಶಕ್ತಿಯನ್ನು ಅವಳಿಗೆ ಮನವರಿಕೆ ಮಾಡಿಕೊಡುವಷ್ಟು ಒಂದು ಸೌಮ್ಯವಾದ ಏಟನ್ನು ಕೊಟ್ಟನು. ಅಷ್ಟೇ ಪೆಟ್ಟಿನಿಂದ ಅವಳು ಭೂಮಿಗೆ ಕುಸಿದಳು. ಅವಳಿಗಿದ್ದ ಕೊಬ್ಬು ಒಮ್ಮೆಲೇ ಇಳಿಯಿತು. ಬಿಕ್ಕಿ ಬಿಕ್ಕಿ ಅಳುತ್ತ ಅವಳು ಹನುಮಾನನಿಗೆ ಈ ರೀತಿ ನುಡಿದಳು: "ಹೇ ವಾನರಶ್ರೇಷ್ಠನೇ, ನೀನು ಪ್ರಸನ್ನನಾಗಿ ನನ್ನನ್ನು ಕಾಪಾಡು! ಸತ್ವಶೀಲರಾದ, ಪರಾಕ್ರಮವುಳ್ಳ ಪುರುಷರು ಶಾಸ್ತಮರ್ಯಾದೆಯನ್ನು ಅನುಸರಿಸಿ ವರ್ತಿಸುತ್ತಾರೆ. ಆ ರೀತಿ ನೀನು ನನ್ನನ್ನು ಕ್ಷಮಿಸು!” ಅಹಂ ತು ನಗರೀ ಲಂಕಾ ಸ್ವಯಮೇವ ಪ್ಲವಂಗಮ | ನಿರ್ಜಿತಾಹಂ ತ್ವಯಾ ವೀರ ವಿಕ್ರಮೇಣ ಮಹಾಬಲ ೪೫॥ ಇದಂ ಚ ತಥ್ಯಂ ಶೃಣು ಮೇ ಬುಮತ್ಯಾ ವೈ ಹರೀಶ್ವರ | ಸ್ವಯಂ ಸ್ವಯಂಭುವಾ ದತ್ತಂ ವರದಾನಂ ಯಥಾ ಮಮ ||೪೬|| ಯದಾ ತ್ವಾಂ ವಾನರಃ ಕಶ್ಚಿದ್ವಿಕ್ರಮಾಧ್ವಶಮಾನಯೇತ್ || ತದಾ ತ್ವಯಾ ಹಿ ವಿಜೇಯಂ ರಕ್ಷಸಾಂ ಭಯವಾಗತಮ್ ॥೪೭॥ ಸ ಹಿ ಮೇ ಸಮಯ: ಸೌಮ್ಯ ಪ್ರಾಪ್ಲೋsದ್ಯ ತವ ದರ್ಶನಾತ್ ॥೪೮॥ “ಹೇ ಮಹಾಬಲಾಡ್ಯ ವೀರನೇ, ನಾನು ಸ್ವತಃ ಲಂಕೆಯಾಗಿದ್ದೇನೆ. ನೀನು ನನ್ನನ್ನು ಸೋಲಿಸಿರುವೆ. ಹೇ ವಾನರಾಧಿಪತನೇ, ನಿನಗೆ ಒಂದು ಗುಟ್ಟನ್ನು ಹೇಳುವೆ. 'ಪರಾಕ್ರಮವುಳ್ಳ ಒಬ್ಬ ವಾನರನು ಎಂದು ನನ್ನನ್ನು ಸೋಲಿಸುವನೋ ಅಂದೇ ರಾಕ್ಷಸ ಕುಲಕ್ಕೆ ಅಳಿಗಾಲದ ಭಯವು ಒದಗಿದೆ ಎಂದು ತಿಳಿಯಬೇಕೆಂದು ಬ್ರಹ್ಮದೇವನು ನನಗೆ ವರವನ್ನು ಕೊಟ್ಟಿದ್ದನು. ಬ್ರಹ್ಮದೇವನು ಮುನ್ಸೂಚಿಸಿದ ಆ ಸಮಯವು ನಿನ್ನ ದರ್ಶನದಿಂದ ಇಂದು ಪ್ರಾಪ್ತವಾಗಿದೆ.” ಹೀಗೆಂದು ಅವಳು