ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೯೨ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ಸುಂದರಕಾಂಡ೫೦ ರಾಕ್ಷಸರು ಹನುಮಂತನನ್ನು ರಾವಣನ ಸಭಾಗೃಹಕ್ಕೆ ತಂದಾಗ ರಾವಣನು ಆತನಿಗೆ ಅನೇಕ ಪ್ರಶ್ನೆಗಳನ್ನು ಕೇಳಿದನು. “ನಿಜ ಹೇಳಿದರೆ ನಿನ್ನನ್ನು ಬಿಟ್ಟುಬಿಡುವೆ; ಸುಳ್ಳನ್ನು ಆಡಿದರೆ ನೀನು ಬದುಕಿರುವದು ಕಷ್ಟ” ಎಂಬ ಬೆದರಿಕೆಯನ್ನು ಹಾಕಿದನು. ಆಗ ಹನುಮಂತನು ಯಾವ ಭಯವೂ ಇಲ್ಲದೆ ಈ ರೀತಿ ನುಡಿದನು- “ನಾನು, ಇಂದ್ರನ, ಯಮನ ಅಥವಾ ವರುಣ ಇವರ ರೂಪ ತಾಳಿ ಬಂದಿರುವದಿಲ್ಲ. ಕುಬೇರನು ನನ್ನ ಸ್ನೇಹಿತನಲ್ಲ; ವಿಷ್ಣುವು ನನ್ನನ್ನು ಇಲ್ಲಿಗೆ ಕಳುಹಿಸಿಲ್ಲ. ನಾನು ಜಾತಿಯಿಂದ ವಾನರನೇ ಇರುವೆ. ವಾನರನಾಗಿಯೇ ರಾಕ್ಷಸರ ರಾಜನನ್ನು ಕಾಣಲೆಂದು ಬಂದಿರುವೆನು. ಈ ದುರ್ಲಭ ದರ್ಶನವಾಗಬೇಕೆಂದು ನಾನು ಉದ್ಯಾನವನಗಳನ್ನು ಧ್ವಂಸಗೊಳಿಸಿದೆನು. ಆಗ ಬಲಾಡ್ಯರಾದ ರಾಕ್ಷಸರು ನನ್ನ ಮೈಮೇಲೆ ಧಾವಿಸಿ ಬಂದರು. ರಕ್ಷಣಾರ್ಥಂ ಚ ದೇಹಸ್ಯ ಪ್ರತಿಯುದ್ಧಾ ಮಯಾ ರಣೇ | ಅಸ್ತಪಾಶೈರ್ನ ಶಕ್ಕೋಹಂ ಬದ್ಲುಂ ದೇವಾಸುರೈರಪಿ |೧೬|| ಪಿತಾಮಹಾದೇಷ ವರೋ ಮಮಾಪಿ ಹಿ ಸಮಾಗತಃ ರಾಜಾನಂ ದ್ರುಷ್ಟುಕಾಮೇನ ಮಯಾಸ್ತಮನುವರ್ತಿತಮ್ ॥೧೭॥ “ನನ್ನ ದೇಹದ ರಕ್ಷಣೆಗಾಗಿ ನಾನು ಸಂಗ್ರಾಮದಲ್ಲಿ ಅವರೊಡನೆ ಕಾದಾಡಬೇಕಾಯಿತು. ದೇವ, ಅಸುರ ಇವರು ಯಾರೂ ನನ್ನನ್ನು ಅಸ್ತಪಾಶಗಳಿಂದ ಬಂಧಿಸಲಾರರು. ಅಂತಹ ವರವನ್ನು ನಾನು ಬ್ರಹ್ಮದೇವನಿಂದ ಪಡೆದಿದ್ದೇನೆ. ರಾಕ್ಷಸರಾಜನ ದರ್ಶನವಾಗಬೇಕೆಂದು ನಾನು ಈ ಅಸ್ತ್ರಕ್ಕೆ ಮರ್ಯಾದೆಯನ್ನು ಕೊಟ್ಟಿರುವೆನು.” - ಈ ವರವು ಯಾಚಿತವೋ ಅಯಾಚಿತವೋ ಎಂಬ ಬಗ್ಗೆ ಸ್ಪಷ್ಟ ಕಲ್ಪನೆ ಬರುವದಿಲ್ಲ. ೪೦. ಬ್ರಹ್ಮದೇವ < ಮೈಂದ, ದ್ವಿವಿದ (ಅಶ್ವಿನೀಕುಮಾರ ಪುತ್ರರು) ಸುಂದರಕಾಂಡ/೬೦ ಲಂಕೆಯಿಂದ ಮರಳಿಬಂದ ನಂತರ ಹನುಮಂತನು ಅಂಗದಸಮೇತರಾದ ಎಲ್ಲ ವಾನರರಿಗೆ ತನ್ನ ವೃತ್ತಾಂತವನ್ನು ಹೇಳಿದನು. ಆನಂತರ ಯಾವ ಕಾರ್ಯವನ್ನು