ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೯೪

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಹೊಗಳುತ್ತ “ನಿನಗೆ ಜಯವು ನಿಶ್ಚಿತವಿದೆ. ಚಿಂತೆಗೆ ಯಾವ ಕಾರಣವೂ ಇಲ್ಲ!
ಪೂರ್ವದಲ್ಲಿ ಪಾತಾಳದ ಭೋಗವತಿ ಪಟ್ಟಣದಲ್ಲಿಯ ಭುಜಂಗಗಳ, ಕುಬೇರನ,
ವಾಸುಕಿಯ, ತಕ್ಷಕ ಮುಂತಾದ ಅನೇಕರ ಪರಾಭವವನ್ನು ನೀನು ಮಾಡಿರುವೆ.
ಇಷ್ಟೇ ಅಲ್ಲದೆ-
ಅಕ್ಷಯಾ ಬಲವಂತಶ್ಚ ಶೂರಾ ಲಬ್ದವರಾಃ ಪುನಃ |
ತ್ವಯಾ ಸಂವತ್ಸರಂ ಯುದ್ಧ್ವಾ ಸಮರೇ ದಾನವಾ ವಿಭೋ ‖೧೦‖


“ಕ್ಷೀಣಿಸದ, ಬಲಾಢ್ಯರಾದ, ಶೂರ ಹಾಗೂ ವರವನ್ನು ಪಡೆದಂಥ
ಕಾಲಕೇಯ ದಾನವರೊಡನೆ ರಣರಂಗದಲ್ಲಿ ಒಂದು ಸಂವತ್ಸರದವರೆಗೆ ಯುದ್ಧ
ಮಾಡಿ ನಿನ್ನ ಸ್ವಂತ ಬಲದಿಂದ ಅವರನ್ನು ಪಾದಾಕ್ರಾಂತಗೊಳಿಸಿರುವೆ.”
ಕಾಲಕೇಯನಿಗೆ ಯಾರು, ಯಾವ ಕಾರಣದಿಂದ, ಯಾವ ವರವನ್ನು
ಯಾವಾಗ ಕೊಟ್ಟರೆಂಬುದು ಸ್ಪಷ್ಟವಿಲ್ಲ. ಕೇವಲ ವರ ದೊರೆತ ಉಲ್ಲೇಖ ಮಾತ್ರ
ಬಂದಿದೆ.

೪೨. ? < ಇಂದ್ರಜಿತು

ಯುದ್ಧಕಾಂಡ/೬

ಲಂಕೆಯತ್ತ ರಾಮನು ಸಾಗಿಬರುತ್ತಿರುವದನ್ನು ಅರಿತ ರಾವಣನು ತನ್ನ
ಮಹಾಬಲಾಢ್ಯ ರಾಕ್ಷಸರನ್ನು ಒಟ್ಟಿಗೆ ಕರೆಯಿಸಿ ಅವರೊಡನೆ ವಿಚಾರವಿನಿಮಯ
ನಡೆಯಿಸಿದನು. ಆಗ ಆ ರಾಕ್ಷಸರು, ರಾವಣನ ಸಾಮರ್ಥ್ಯವನ್ನು ಮತ್ತು ಆತನ
ಮೊದಲಿನ ಪರಾಕ್ರಮಗಳನ್ನು ಬಣ್ಣಿಸಿ ರಾವಣನಿಗೆ ಈ ರೀತಿ ನುಡಿಯುತ್ತಾರೆ-
“ಪೂರ್ವದಲ್ಲಿ ನೀನು ಅನೇಕ ಬಲಾಢ್ಯ ಶತ್ರುಗಳನ್ನು ಸಂಗ್ರಾಮದಲ್ಲಿ
ತುಲನೆಯಿಲ್ಲದ ನಿನ್ನ ಪರಾಕ್ರಮದಿಂದ ಸೋಲಿಸಿರುವೆ. ಇಂಥ ನೀನು ರಾಮನ
ಭಯವನ್ನು ಇಟ್ಟುಕೊಳ್ಳಬಾರದು. ನಿನಗೆ ವಿಜಯವು ಖಂಡಿತ.” ಈ ರಾಕ್ಷಸರು
ಇಂದ್ರಜಿತುವಿನಿಂದ ಪರಾಭೂತರಾದವರೆಲ್ಲರ ಹೆಸರುಗಳನ್ನು ನಿರ್ದೇಶಿಸಿ, ಆತನ
ಎಣೆಯಿಲ್ಲದ ಸಾಮರ್ಥ್ಯದ ಬಗ್ಗೆ ಗೌರವದಿಂದ ಮಾತನಾಡಿದರು. ಇಂದ್ರಜಿತು
ವೊಬ್ಬನೇ ರಾಮನನ್ನು, ಆತನ ವಾನರ ಸೇನೆಯನ್ನು ಸದೆಬಡಿಯಲು ಶಕ್ತಿ
ನಿದ್ದಾನೆಂದು ಹೊಗಳಿ-
ಅನೇನ ಚ ಮಹಾರಾಜ ಮಾಹೇಶ್ವರಮನುತ್ತಮಮ್ |
ಇಸ್ಟ್ವಾ ಯಜ್ಞಂ ವರೋ ಲಬ್ಧೋ ಲೋಕೇ ಪರಮದುರ್ಲಭಃ ‖೧೯‖