ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೨೯೫


“ಹೇ ಮಹಾರಾಜನೇ, ಈ ಇಂದ್ರಜಿತುವು ಅತ್ಯಂತ ಉತ್ತಮವಾದ
ಮಾಹೇಶ್ವರೀ ಯಾಗವನ್ನು ಮಾಡಿ ಜಗತ್ತಿನಲ್ಲಿ ಶ್ರೇಷ್ಠವಾದ ವರವನ್ನು
ಸಂಪಾದಿಸಿದ್ದಾನೆ” ಎಂದರು.
ಹೀಗಿರುವದರಿಂದ ರಾಮನನ್ನು ನಾಶಗೊಳಿಸಲು ಇಂದ್ರಜಿತುವನ್ನೇ
ನಿಯಮಿಸಬೇಕು.
ಇಂದ್ರಜಿತುವಿಗೆ ಯಾರು ವರವನ್ನು ಕೊಟ್ಟರೆಂಬುದಕ್ಕೆ ಆಧಾರವಿರದಿದ್ದರೂ
ಅದನ್ನು ಬಹುಶಃ ಶಂಕರನೇ ಕೊಟ್ಟಿಬರಹುದು. ಇಂದ್ರಜಿತುವು ಆಚರಿಸಿದ
ಏಳು ಯಜ್ಞಗಳಲ್ಲಿ ಮಾಹೇಶ್ವರೀ ಯಾಗವು ಒಂದಾಗಿದ್ದು, ಶಿವಪ್ರಸಾದದಿಂದ
ಆತನಿಗೆ ದಿವ್ಯರಥಗಳು, ಬಿಲ್ಲುಬಾಣಗಳು, ಶಸ್ತ್ರಗಳು, ತಾಮಸೀ ಮಾಯಾ ವಿದ್ಯೆ
ಇವೆಲ್ಲವೂ ಪ್ರಾಪ್ತವಾದವು. ವಾಸ್ತವದಲ್ಲಿ ಇದೊಂದು ಅನುಗ್ರಹವೇ ಹೊರತು
ವರವೆನಿಸದು. ವಾಲ್ಮೀಕಿಯು 'ವರ' ಶಬ್ದವನ್ನು ಬಳಸಿದ್ದಾನೆ.
ಹೀಗೆ ಇಲ್ಲಿ ವರದ ಉಲ್ಲೇಖ ಮಾತ್ರವಿದೆ.
ನೋಡಿ: ವರ ಕ್ರಮಸಂಖ್ಯೆ ೬೪-ಮಾಹೇಶ್ವರ < ಮೇಘನಾದ
(ಇಮದ್ರಜಿತು).

೪೩. ರಾಮ < ಮರು ಪ್ರದೇಶ

ಯುದ್ಧಕಾಂಡ/೨೨

“ಇಂದು ನಾನು ಸಮುದ್ರವನ್ನು ದಾಟಬೇಕು; ಇಲ್ಲವೆ ನನ್ನಿಂದ ಈ
ಸಮುದ್ರ ರಾಜನ ಕೊನೆಯಾಗಬೇಕು!” ಎಂಬ ಪ್ರತಿಜ್ಞೆಯನ್ನು ಮಾಡಿ ರಾಮನು
ಸಮುದ್ರರಾಜನಿಗೆ ಕೈ ಮುಗಿದು, ದರ್ಭೆಯ ಹಾಸುಗೆಯನ್ನು ಮಾಡಿ ಅದರಲ್ಲಿ
ಒರಗಿಕೊಂಡನು. ರಾಮನು ಸಮುದ್ರರಾಜನನ್ನು ಸತ್ಕರಿಸಿ ಮೂರು ರಾತ್ರಿಗಳು
ಕಳೇದರೂ ಸಾಗರರಾಜನ ದರ್ಶನವಾಗಲಿಲ್ಲ. ಸಾಗರರಾಜನು ಮಂದಬುದ್ಧಿ
ಯವನಿದ್ದನು. ಅವನಿಗೆ ತುಂಬ ಅಹಂಕಾರವಿತ್ತು. ಸಾಗರರಾಜನ ಮೇಲೆ ರಾಮನಿಗೆ
ತುಂಬ ಕೋಪ ಬಂದಿತು. ರಾಮನು ತೀಕ್ಷ್ಣ ಬಾಣಗಳನ್ನು ಬಿಟ್ಟು ಸಾಗರನನ್ನು
ಕೆರಳಿಸಿದನು. ರಾಮನ ಬಾಣಗಳಿಂದ ಸಮುದ್ರದ ಜಲಚರ ಪ್ರಾಣಿಗಳೂ,
ಪಾತಾಳದಲ್ಲಿಯ ದಾನವರೂ ತೊಂದರೆಗೆ ಈಡಾದರು. ಸಾಗರನು ಭೋರ್ಗರೆ
ಯಲಾರಂಭಿಸಿನು. ಎಲ್ಲೆಡೆಯಲ್ಲಿಯೂ ಹಾಹಾಕಾರ ಉಂಟಾಯಿತು. ಆಗ
ಲಕ್ಷ್ಮಣನು ರಾಮನಿಗೆ “ಇಂಥ ಅನರ್ಥವನ್ನು ಮಾಡಬೇಡ” ಎಂದು ಪ್ರಾರ್ಥಿಸಿದನು.
ರಾಮನು ಸಾಗರನನ್ನು ಕುರಿತು- “ನನ್ನ ಬಾಣಗಳಿಂದ ನಿನ್ನಲ್ಲಿಯ ಜಲವನ್ನು