ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಯಾವುದೋ ಒಂದು ಅದ್ಭುತಶಕ್ತಿ ಇರಲೇಬೇಕು! ಎಂದು ನಂಬುವ ರೂಢಿಯಾಯಿತು. ಈ ಅದ್ಭುತಶಕ್ತಿಯನ್ನು ಪಡೆಯಲು ಪ್ರಯತ್ನಗಳು ನಡೆದವು. ಆಗ ಯಾತು, ಯಜ್ಞ, ದಾನ, ತಪ ಮೊದಲಾದ ಕಲ್ಪನೆಗಳು ಉದಯಿಸಿದವು. ಶಾಪ ಮತ್ತು ವರ- ಈ ಕಲ್ಪನೆಗಳು ಸಹ 'ಯಾತು' ವಿದ್ಯೆಯಿಂದಲೇ ಬಂದಿವೆ.
'ಯಾತು-ವಿದ್ಯೆ' ಎಂದರೇನು?

ಯಾತು-ಕ್ರಿಯ
ಯಾತು ಎಂದರೆ ಇಂದ್ರಜಾಲ. ಪ್ರತಿಯೊಂದು ವಸ್ತುವಿನಲ್ಲಿಯೂ ಅಡಗಿರುವ ಶಕ್ತಿಗೆ ಯಾತು ಶಕ್ತಿ ಎಂದೆನ್ನುತ್ತಾರೆ. ಅದರ ಜ್ಞಾನವೆಂದರೆ ಯಾತು-ವಿದ್ಯೆ. ಆ ವಿದ್ಯೆಯನ್ನು ಅರಿತವನಿಗೆ 'ಯಾತುಧಾನ' ಎನ್ನುತ್ತಾರೆ. ರಾಕ್ಷಸರು ಯಾತುಧನರು, ಅವರು ಈ ಶಕ್ತಿಯನ್ನು ಅರಿತಿದ್ದರು. ಈ ಶಕ್ತಿಯ ಬಲದಿಂದ ಅವರು ಬೇರೆ ಬೇರೆ ರೂಪಗಳನ್ನು ಧರಿಸಬಹುದಿತ್ತು. ಮಾರೀಚನು ಈ ವಿದ್ಯೆಯನ್ನು ಅರಿತಿದ್ದರಿಂದ ಕಾಂಚನಮೃಗದ ರೂಪವನ್ನು ತಳೆದು ಸೀತೆಯನ್ನು ಮರುಳುಮಾಡಿದನು. ಆ ನಂತರವೇ ರಾಮಾಯಣ ನಡೆಯಿತೆನ್ನಬಹುದು. ವಿಶ್ವದಲ್ಲಿಯ ಒಂದೊಂದು ವಸ್ತುವಿನಲ್ಲಿ ಹುದುಗಿದ ಶಕ್ತಿ ಇದೆ. ಮಂತ್ರಗಳ ಸರಿಯಾದ ಉಚ್ಚಾರಣೆಯಿಂದ ಆ ಶಕ್ತಿಯನ್ನು ಜಾಗೃತಗೊಳಿಸಬಹುದು. ಅದರಿಂದ, ಇಚ್ಛಾಪೂರ್ತಿ ಮಾಡಿಕೊಳ್ಳ ಬಹುದು. ಇದು ಯಾತು-ಕ್ರಿಯೆಯ ಸರಳ ಲೆಕ್ಕ. 'ಯಾತು' ಎಂದರೆ ಆದಿಮಾನವನ ಜೀವನ ಮೂಲಾಧಾರ. ಅವರಿಗೆ ಗೂಢ ಅಗಮ್ಯಶಕ್ತಿಯಲ್ಲಿ ತುಂಬ ವಿಶ್ವಾಸವಿತ್ತು. ಈಶ್ವರನ ಕಲ್ಪನೆ ಅವರಿಗೆ ಇರದ ಕಾರಣ ಭಕ್ತಿಯಿಂದ ದೇವರನ್ನು ಪ್ರಾರ್ಥಿಸುವ ಪ್ರಶ್ನೆಯೇ ಇರಲಿಲ್ಲ. ದೇವರು, ಪೂಜೆ, ಆವಾಹನೆ, ಯಜ್ಞ ಇವೆಲ್ಲ ಸಾಂಸ್ಕೃತಿಕ ವಿಕಾಸದನಂತರ ಬಂದ ಸಂಗತಿಗಳು. ಮಂತ್ರಗಳನ್ನು ವಿಧಿಯುಕ್ತವಾಗಿ ಉಚ್ಚರಿಸಿದರೆ ಉದ್ದಿಷ್ಟವು ಸಫಲವಾಗುವುದರಲ್ಲಿ ಸಂಶಯವಿಲ್ಲ; ಅದರಲ್ಲಿ ಕೃಪೆ ಇಲ್ಲವೇ ಅವಕೃಪೆಯ ಪ್ರಶ್ನೆ ಬಾರದು. ತಂತ್ರವಿದ್ಯೆಯಲ್ಲಿ ದೇವರ ಕೃಪೆ ಅಥವಾ ಕೋಪ ಯಾವುದಕ್ಕೂ ಸ್ಥಾನವಿಲ್ಲ, ನೈತಿಕತೆಗೆ ಅವಕಾಶವಿಲ್ಲ. 'What is ritually correct is ethically right.'
ಯಾತು-ಶಕ್ತಿಯು ಧರ್ಮದ ಕಲ್ಪನೆಯ ಪೂರ್ವಾವಸ್ಥೆ. ಫ್ರೇಜರ್ ಎಂಬಾತನ ಅಭಿಪ್ರಾಯದಂತೆ ಅದು ವಿಜ್ಞಾನದ ಪೂರ್ವಸ್ಥಿತಿಯೂ ಅಹುದು. ಉದ್ದಿಷ್ಟ ಸಾಧನೆ ಈ ಎರಡರ ಗುರಿಯಾಗಿರುತ್ತದೆ. ವಸ್ತುವಿನಲ್ಲಿಯ ಸುಪ್ತಶಕ್ತಿಯನ್ನು 'ಯಾತುಧಾನ' ಮತ್ತು 'ವಿಜ್ಞಾನಿ' ಇಬ್ಬರೂ ನಂಬುತ್ತಾರೆ. ಅವರ ಸಾಧನೆಯಲ್ಲಿ