ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೨೯೭


ಜಲಾಶಯಗಳ ನೀರು ಬತ್ತಿಹೋಯಿತು. ಈ ರೀತಿ ಆ 'ಮರುಕಾಂತಾರ'
ಪ್ರದೇಶವನ್ನು ಬರಡು ಮಾಡಿದನಂತರ-
ವರಂ ತಸ್ಮೈ ದದೌ ವಿದ್ವಾನ್ಮರವೇಮರವಿಕ್ರಮಃ ‖೪೧‖
ಪಶವ್ಯಶ್ಚಾಲ್ಪರೋಗಶ್ಚ ಫಲಮೂಲರಸಾಯುತಃ ‖
ಬಹುಸ್ನೇಹೋ ಬಹುಕ್ಷೀರಃ ಸುಗಂಧಿರ್ವಿವಿಧೌಷಧಿಃ ‖೪೨‖
ಏವಮೇತೈಶ್ಚ ಸಂಯುಕ್ತೋ ಬಹುಭಿಃ ಸಂಯುತೋ ಮರುಃ |
ರಾಮಸ್ಯ ವರದಾನಾಚ್ಚ ಶಿವಃ ಪಂಥಾ ಬಬೂವ ಹ ‖೪೩‖

ದೇವಸಮನಾದ, ಪರಾಕ್ರಮಿಯಾದ, ದಶರಥಪುತ್ರನಾದ, ಜ್ಞಾನಿಯಾದ
ರಾಮನು ಆ ಮರುಪ್ರವೇಶಕ್ಕೆ ಈ ರೀತಿ ವರವನ್ನು ಕೊಟ್ಟನು:
“ಪಶುಗಳಿಗೆ ಹಿತಕರವಾಗಬೇಕು, ಅಲ್ಲಿ ರೋಗರುಜಿನಗಳು ಕಡಿಮೆಯಾಗಿರ
ಬೇಕು; ಫಲ, ಮೂಲಗಳು, ರಸಗಳು, ವಿಪುಲಸ್ನಿಗ್ಧತೆಯಿದ್ದ ಸಂಗತಿಗಳು, ಹಾಲು,
ಹೈನ, ಸುಗಂಧ ಮತ್ತು ನಾನಾ ಪ್ರಕಾರದ ಔಷಧಿಗಳಿಂದ ಈ ದೇಶವು
ಸಮೃದ್ಧವಾಗಲಿ!”
ರಾಮನಿಂದ ಈ ವರವನ್ನು ಪಡೆದನಂತರ ಈ ಮರುಪ್ರದೇಶವು ಮೇಲೆ
ತಿಳಿಸಿದ ಗುಣಗಳಿಂದ ಸಂಪನ್ನವಾಯಿತು. ರಾಮನ ಈ ವರದಿಂದ ಆ ಪ್ರದೇಶವು
ಶುಭಕಾರಕವಾಯಿತು.
ಇದು 'ಅಯಾಚಿತ' ವರವಾಗಿದೆ.

೪೪. ವಿಶ್ವಕರ್ಮ < ನಲ (ವಾನರ)

ಯುದ್ಧಕಾಂಡ/೨೨

ಸಾಗರರಾಜನು ರಾಮನಿಗೆ, ವಿಶ್ವಕರ್ಮನ ಪುತ್ರನಾದ 'ನಲ'ವಾನರನ
ಸಾಮರ್ಥ್ಯವನ್ನು ಅರುಹುತ್ತಿದ್ದಾನೆ. ರಾಮನು ಮರುಪ್ರದೇಶಕ್ಕೆ ವರವನ್ನು ಕೊಟ್ಟ
ಕಾರಣ ಸಂತೋಷಗೊಂಡ ಸಾಗರನು, ರಾಮನಿಗೆ ಈ ರೀತಿ ಹೇಳುತ್ತಾನೆ:
ಅಯಂ ಸೌಮ್ಯ ನಲೋ ನಾಮ ತನಯೋ ವಿಶ್ವಕರ್ಮಣಃ |
ಪಿತ್ರಾ ದತ್ತವರಃ ಶ್ರೀಮಾನ್ಪ್ರೀತಿಮಾನ್ವಿಶ್ವಕರ್ಮಣಃ ‖೪೫‖

“ಹೇ ವಿನಯಸಂಪನ್ನ ರಾಮನೇ, ಈ ನಲನೆಂಬ ವಾನರನು ವಿಶ್ವಕರ್ಮನ
ಪುತ್ರನಾಗಿದ್ದಾನೆ. ನಿನ್ನಲ್ಲಿ ಈತನು ಶ್ರದ್ಧೆಯನ್ನಿಟ್ಟುಕೊಂಡಿದ್ದಾನೆ. ಈ ನೆಲದಲ್ಲಿ