ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೨೯೯


“ಹೇ ದೇವಿಯೆ, ನಿನಗಾಗಲಿರುವ ಪುತ್ರನು ನನ್ನಂತೆಯೇ ಆಗುವನು”
ಎಂದು ವಿಶ್ವಕರ್ಮನು ಮಂದರವೆಂಬ ಪರ್ವತದ ಮೇಲೆ ನನ್ನ ಮಾತೆಗೆ
ವರವನ್ನು ಕೊಟ್ಟಿದ್ದನು.
“ನಾನು ಆತನ ಸ್ವಂತ ಮಗನಿದ್ದು ಶಿಲ್ಪವಿದ್ಯೆಯಲ್ಲಿ ಆತನಷ್ಟೇ ನಿಪುಣ
ನಿದ್ದೇನೆ. ನೀವು ಕೇಳದೇ ಇದ್ದರೆ ನಾನಾಗಿ ನನ್ನ ಗುಣಗಳನ್ನು ನಿಮ್ಮ ಮುಂದೆ
ಹೇಳಲಾರೆನು. ನಾನು ಸಮುದ್ರದಲ್ಲಿ ಸೇತುವೆಯನ್ನು ಕಟ್ಟಲು ಕ್ಷಮತೆ
ಯುಳ್ಳವನಿದ್ದೇನೆ.”
ಇಲ್ಲಿ ವರವನ್ನು ಕೊಡಲು ಇದ್ದ ಕಾರಣವು ಸ್ಪಷ್ಟವಿಲ್ಲ. ಇದು 'ಅಯಾಚಿತ'
ವರವಿರ ಬೇಕು.
ಮಾತೆಯ ಹೆಸರಿನ ಉಲ್ಲೇಖವು ಇರದೇ ಇದ್ದರೂ ಅವಳು ಬಹುಶಃ
ಘೃತಾಚಿ ಎಂಬ ಅಪ್ಸರೆಯಾಗಿರಬೇಕು.

೪೬. ಇಂದ್ರ < ಜಾಂಬವಾನ

ಯುದ್ಧಕಾಂಡ/೨೭

ರಾವಣನ ಅಮಾತ್ಯನಾದ ಸಾರಣನು ರಾಮನ ಬೆಂಬಲಕ್ಕಿದ್ದ ವೀರಸೇನಾ
ಪತಿಗಳ ಶಕ್ತಿ ಸಾಮರ್ಥ್ಯದ ಬಗ್ಗೆ ರಾವಣನಿಗೆ ಅರುಹುತ್ತಿದ್ದಾನೆ.
ಸಮುದ್ರದ ಮೇಲೆ ಸೇತುವೆಯನ್ನು ಕಟ್ಟಿ ವಾನರರ ಸೈನ್ಯದೊಡನೆ ರಾಮನು
ಲಂಕೆಗೆ ಬಂದನು. ಆಗ ಆತನ ಸೈನ್ಯಬಲವನ್ನು ನಿರೀಕ್ಷಿಸಲೆಂದು ರಾವಣನು,
ಶುಕ, ಸಾರಣರೆಂಬ ತನ್ನ ಅಮಾತ್ಯರನ್ನು ಕಳುಹಿದನು. ರಾಮನನ್ನು ಕಂಡು
ಅವರು ತುಂಬ ಭಯಗೊಂಡರು. ಅವರು ರಾವಣನ ಗುಪ್ತಚಾರರಿದ್ದ ಬಗ್ಗೆ
ವಿಭೀಷಣನು ರಾಮನಿಗೆ ತಿಳಿಸಿದನು. ರಾಮನು, ಆ ಶುಕ, ಸಾರಣರಿಗೆ 'ನಿಮ್ಮ
ನಿರೀಕ್ಷಣಾಕಾರ್ಯವು ಪೂರ್ತಿಗೊಂಡಿದ್ದರೆ ನಿರ್ಭಯರಾಗಿ ಮರಳಿಹೋಗಿರೆಂ'ದು
ಹೇಳಿದನು. ಸೀತೆಯನ್ನು ಅಪಹರಿಸಿಕೊಂಡು ಹೋದ ರಾವನನಿಗೆ, ಮರುದಿನ
ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಲು ಹೇಳಿ ಕಳುಹಿಸಿದನು. ಸಾರಣನು,
ವಾನರವೀರರ, ಸೇನಾಪತಿಗಳ ವರ್ಣನೆಯನ್ನು ರಾವಣನ ಮುಂದೆ ಮಾಡುತ್ತಿದ್ದಾನೆ.
ಜಾಂಬವಂತನ ಬಗ್ಗೆ ಈ ರೀತಿ ಕಥನ ಮಾಡುತ್ತಿದ್ದಾನೆ:
“ಋಕ್ಷವಾನ ಪರ್ವತದ ಮೇಲೆ ವಾಸವಿದ್ದ 'ಧೂಮ್ರ' ಎಂಬ ಸೇನಾ
ನಾಯಕನು ಋಕ್ಷರ ಅಧಿಪತಿಯಾಗಿದ್ದನು. ಆತನ ತಮ್ಮನು ರೂಪದಲ್ಲಿ ಅಣ್ಣನನ್ನೇ
ಹೋಲುತ್ತಿದ್ದರೂ, ಪರಾಕ್ರಮದಲ್ಲಿ ಅಣ್ಣನಿಗೆ ಮಿಗಿಲಾದವನಿದ್ದನು. ಆ ತಮ್ಮನ