ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೩೦೧


ಈ ಮಹಾವೀರನಾದ ಕುಂಭಕರ್ಣನು ಹುಟ್ಟಿನಿಂದಲೇ ರಾಕ್ಷಸಾಧಿಪತಿ
ಗಳಿಗಿಂತ ಹೆಚ್ಚು ತೇಜಸ್ಸುಳ್ಳವನಾಗಿದ್ದಾನೆ; ವರಗಳನ್ನು ಪಡೆದನಂತರ ಇನ್ನಷ್ಟು
ಬಲಗೊಂಡಿದ್ದಾನೆ.
ಇವನಿಗೆ ವರ ಕೊಟ್ಟವರು ಯಾರು? ವರಗಳ ಸ್ವರೂಪವೇನಿತ್ತು ಎಂಬುದು
ಸ್ಪಷ್ಟವಿಲ್ಲ. ವರದಾನದ ಉಲ್ಲೇಖ ಮಾತ್ರ ಬಂದಿದೆ.

೪೮. ಬ್ರಹ್ಮದೇವ < ಅತಿಕಾಯ

ಯುದ್ಧಕಾಂಡ/೬೯

ಕುಂಭಕರ್ಣನ ವಧೆಯಾದನಂತರ ರಾವಣನು ಶೋಕಾರ್ತನಾಗಿ ರೋದಿಸ
ಹತ್ತಿದನು. ಆಗ 'ತ್ರಿಶಿರಾ' ಎಂಬಾತನು ಆತನನ್ನು ಸಂತೈಸಲು ಈ ರೀತಿ
ನುಡಿದನು:
“ಹೇ ರಾಜನೇ, ನಿನ್ನಂಥ ಶೂರಪುರುಷರು ರೋದಿಸುವದು ಸರಿಯಲ್ಲ;
ನಿನ್ನ ಬಳಿ ಬ್ರಹ್ಮನಿಂದ ಕೊಡಲ್ಪಟ್ಟ ಶಕ್ತಿ, ಕವಚ, ಧನುಸ್ಸು, ಬಾಣ, ರಥ ಇವೆಲ್ಲ
ಇವೆ. ಈ ಮೊದಲು ನೀನು ಅನೇಕ ಸಲ ದೇವದಾನವರನ್ನು ಈ ಅಸ್ತ್ರಗಳಿಂದ
ಛಿನ್ನವಿಚ್ಛಿನ್ನಗೊಳಿಸಿರುವೆ. ರಾಮನಿಗೆ ತಕ್ಕ ಶಾಸ್ತ್ರಿಯನ್ನು ಮಾಡುವದು ನಿನ್ನ
ಕರ್ತವ್ಯವಾಗಿದೆ” ಎಂದು ನುಡಿದು, ತ್ರಿಶಿರಾ ಈತನು “ನೀನು ಸುಮ್ಮನಿದ್ದು
ನೋಡುತ್ತಿರು; ಇಂದು ನನ್ನಿಂದ ಯುದ್ಧದಲ್ಲಿ ರಾಮನು ಹತನಾಗಿ ರಣರಂಗದಲ್ಲಿ
ಬಿದ್ದಿರುವದನ್ನು ನೀನು ನೋಡುವೆ” ಎಂಬ ಪ್ರತಿಜ್ಞೆಯನ್ನು ರಾವಣನೆದುರು
ಮಾಡಿದನು.
ತ್ರಿಶಿರಾ ಈತನ ಪ್ರತಿಜ್ಞೆಯನ್ನು ಕೇಳಿ, ದೇವಾಂತಕ, ನರಾಂತಕ ಮತ್ತು
ಅತಿಕಾಯರೆಂಬ ಮಹಾಶೂರರಾದ ರಾವಣನ ಪುತ್ರರು ಯುದ್ಧಕ್ಕೆ ಸಿದ್ಧರಾದರು.
ಅವರೆಲ್ಲರೂ ಮಹಾಮಾಯಾವಿಗಳಾಗಿದ್ದು, ಯುದ್ಧದಲ್ಲಿ ಹಿಮ್ಮೆಟ್ಟದ ಕಡುಗಲಿ
ಗಳಾಗಿದ್ದರು. ಆಂತರಿಕ್ಷದಲ್ಲಿ ಸಂಚರಿಸುವ ಬಲಾಢ್ಯರಾದ ದೇವತೆಗಳ ದರ್ಪವನ್ನು
ಇರಿಸಿದ ಕೀರ್ತಿಯನ್ನು ಹೊಂದಿದವರಾಗಿದ್ದರು.
ದೇವೈರಪಿ ಸಗಂಧರ್ವೈಃ ಸಕಿನ್ನರಮಹೋರಗೈಃ |
ಸರ್ವೇಸ್ತ್ರವಿದುಷೋ ವೀರಾಃ ಸರ್ವೇ ಯುದ್ಧವಿಶಾರದಾಃ ‖
ಸರ್ವೇ ಪ್ರವರವಿಜ್ಞಾನಾಃ ಸರ್ವೇ ಲಬ್ಥವರಾಸ್ತಥಾ ‖೧೩‖