ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೩೦೩


ಏತೇನಾರಾಧಿತೋ ಬ್ರಹ್ಮಾ ತಪಸಾ ಭಾವಿತಾತ್ಮನಾ |
ಅಸ್ತ್ರಾಣಿ ಚಾಪ್ಯವಾಪ್ತಾನಿ ರಿಪವಶ್ಚ ಪರಾಜಿತಾಃ ‖೩೧‖
ಸುರಾಸುರೈವಧ್ಯತ್ವಂ ದತ್ತಮಸ್ಮ್ಯೆ ಸ್ವಯಂಭುವಾ |
ಏತಚ್ಚ ಕವಚಂ ದಿವ್ಯಂ ರಥಶ್ಚ ರವಿಭಾಸ್ವರಃ ‖೩೨‖

“ತಪಃ ಪ್ರಭಾವದಿಂದ ಅಂತಃಕರಣವನ್ನು ನಿರ್ಮಲಗೊಳಿಸಿದ ಈ ರಾವಣ
ಪುತ್ರನು, ಬ್ರಹ್ಮದೇವನನ್ನು ಆರಾಧಿಸಿ, ಅನೇಕ ಅಸ್ತ್ರಗಳನ್ನು ಪಡೆದಿದ್ದಾನೆ; ಮತ್ತು
ಅನೇಕ ಶತ್ರುಗಳನ್ನು ಪರಾಜಯಗೊಳಿಸಿದ್ದಾನೆ. 'ನಿನ್ನನ್ನು ವಧಿಸುವದು ದೇವ
ದೈತ್ಯರಿಂದಾಗದು' ಎಂಬ ವರವನ್ನು ಬ್ರಹ್ಮದೇವನು ಈತನಿಗೆ ಕೊಟ್ಟಿದ್ದಾನೆ.
ದಿವ್ಯ ಕವಚವನ್ನೂ ಸೂರ್ಯನಂತೆ ತೇಜಸ್ಸುಳ್ಳ ರಥವನ್ನೂ ಕೊಟ್ಟಿದ್ದಾನೆ”
ಎಂದನು.
ಲಕ್ಷ್ಮಣ ಮತ್ತು ಅತಿಕಾಯ ಇವರಲ್ಲಿಯ ಕಾಳಗದಲ್ಲಿ ಲಕ್ಷ್ಮಣನ ಬಾಣಗಳ
ಸುರಿಮಳೆಯಿಂದ ಅತಿಕಾಯನ ಮೇಲೆ ಯಾವ ಪರಿಣಾಮವೂ ಆಗಲಿಲ್ಲ. ಆಗ
ವಾಯುವು ಲಕ್ಷ್ಮಣನಿಗೆ ಇಂತೆಂದನು:
ಬ್ರಹ್ಮದತ್ತವರೋ ಹ್ಯೇಷ ಅವಧ್ಯಕವಚಾವೃತಃ |
ಬ್ರಾಹ್ಮೇಣಾಸ್ತ್ರೇಣ ಭಿಂಧ್ಯೇನಮೇಷ ವಧ್ಯೋ ಹಿ ನಾನ್ಯಥಾ ‖
ಅವಧ್ಯ ಏಷ ಹ್ಯನ್ಯೇಷಾಮಸ್ತ್ರಾಣಾಂ ಕವಚೀ ಬಲೀ ‖೧೦೩‖

“ಆಭೇದ್ಯವಾದ ಕವಚವನ್ನು ಕೊಟ್ಟಿರುವ ಈ ಅತಿಕಾಯನು ಬ್ರಹ್ಮದೇವನಿಂದ
ವರವನ್ನು ಪಡೆದುಕೊಂಡಿದ್ದಾನೆ. ಅದಕ್ಕಾಗಿ ನೀನು ಬ್ರಹ್ಮಾಸ್ತ್ರದಿಂದ ಅವನನ್ನು
ವಧಿಸು. ಇನ್ನು ಬೇರೆ ಅಸ್ತ್ರಗಳಿಂದ ಈತನ ವಧೆಯಾಗುವಂತಿಲ್ಲ. ಕವಚವನ್ನು
ಧರಿಸಿದ ಈ ಬಲಾಢ್ಯನಾದ ಅತಿಕಾಯನನ್ನು ಇತರ ಅಸ್ತ್ರಗಳಿಂದ ಕೊಲ್ಲುವುದು
ಸಾಧ್ಯವಿಲ್ಲ.”

ಬ್ರಹ್ಮಾಸ್ತ್ರದಿಂದ ಅಭಿಮಂತ್ರಿಸಿದ ಬಾಣವನ್ನು ಅತಿಕಾಯನ ಮೇಲೆ ಬಿಟ್ಟು
ಲಕ್ಷ್ಮಣನು ಆತನನ್ನು ವಧಿಸಿದನು.
ಇದು ಯಾಚಿತ ವರವಿದ್ದು ಆತನಿಗೆ ದೊರೆತ ದಿವ್ಯಕವಚ ಮತ್ತು ತೇಜಸ್ಸುಳ್ಳ
ರಥ ಇವು ಅನುಗ್ರಹರೂಪವಾಗಿವೆ.