ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೩೦೫


ಇದಕ್ಕೆ ವರವೆನ್ನಬೇಕೋ? ಅಥವಾ ಯುದ್ಧಕ್ಕಾಗಿ ದೊರೆತ ಸಹಾಯವೆನ್ನ
ಬಹುದೋ? ವರವಿದ್ದರೆ 'ಅಯಾಚಿತ'ವೆಂದೆನ್ನಬೇಕಾಗುತ್ತದೆ. ರಥ, ಧನಸ್ಸು,
ಕವಚ, ಬಾಣ ಮತ್ತು ಶಕ್ತಿ ಇವೆಲ್ಲವೂ ಅನುಗ್ರಹರೂಪವಾಗಿವೆ.

ಯುದ್ಧಕಾಂಡ/೧೨೦

ರಾವಣನ ವಧೆಯಾದ ನಂತರ ಮತ್ತು ಸೀತೆಯು ಅಗ್ನಿದಿವ್ಯವನ್ನು ಮಾಡಿದ
ನಂತರ ಸಂತೋಷಗೊಂಡ ಇಂದ್ರನು ರಮನಿಗೆ ಆತನ ಇಷ್ಟಾರ್ಥಗಳನ್ನು
ಪೂರ್ತಿಗೊಳಿಸುವ ವಚನವನ್ನು ಕೊಟ್ಟು ವರವನ್ನು ಬೇಡಲು ಹೇಳಿದನು. ಆಗ
ರಾಮನು ಆನಂದದಿಂದ ಹೀಗೆಂದನು:
ಯದಿ ಪ್ರೀತಿಃ ಸಮುತ್ಪನ್ನಾ ಮಯಿ ತೇ ವಿಭುಧೇಶ್ವರ |
ವಕ್ಷ್ಯಾಮಿ ಕುರು ಮೇ ಸತ್ಯಂ ವಚನಂ ವದತಾಂ ವರ ‖೪‖
ಮಮ ಹೇತೋಃ ಪರಾಕ್ರಾಂತಾ ಯೇ ಗತಾ ಯಮಸಾದನಮ್
ತೇ ಸರ್ವೇ ಜೀವಿತಂ ಪ್ರಾಪ್ಯ ಸಮುತ್ತಿಷ್ಠಂತು ವಾನರಾಃ ‖೫೫‖
ಮತ್ಕೃತೇ ವಿಪ‍್ರಯುಕ್ತಾ ಯೇ ಪುತ್ರೈರ್ದಾರೈಶ್ಚ ವಾನರಾಃ |
ತಾನ್ಪ್ರೀತಮನಸಃ ಸರ್ವಾನ್ದ್ರಷ್ಟುಮಿಚ್ಛಾಮಿ ಮಾನದ ॥೬॥
ವಿಕ್ರಾಂತಾಶ್ಚಾಪಿ ಶ್ರಾರಾಶ್ಚ ನ ಮೃತ್ಯುಂ ಗಣಯಂತಿ ಚ |
ಕೃತಯತ್ನಾ ವಿಪನ್ನಾತ್ಚ ಜೀವಯೈತಾನ್ಪುರಂದರ ॥೭॥
ಮತ್ಪ್ರಿಯೇಷ್ವಭಿರಕ್ತಾಶ್ಚ ನ ಮೃತ್ಯುಂ ಗಣಯಂತಿ ಯೇ |
ತ್ವತ್ಪ್ರಸಾದಾತ್ಸಮೇಯುಸ್ತೇ ವರಮೇತಮಹಂ ವೃಣೇ ‖೮‖
ನೀರುಜೋ ನಿರ್ವ್ರರ್ಣಾಂಶ್ಚೃವ ಸಂಪನ್ನಬಲಪೌರುಷಾನ್ |
ಗೋಲಾಂಗೂಲಾಂಸ್ತಥರ್ಕ್ಷಾಂಶ್ಚ ದ್ರುವಷ್ಟುಮಿಚ್ಛಾಮಿ ಮಾನದ ‖೯‖
ಅಕಾಲೇ ಚಾಪಿ ಪುಷ್ಪಾಣಿ ಮೂಲಾನಿ ಚ ಫಲಾನಿ ಚ |
ನದ್ಯಶ್ಚ ವಿಮಲಾಸ್ತತ್ರ ತಿಷ್ಠೇಯುರ್ಯುತ್ರ ವಾನರಾಃ ‖೧೦‖

“ಹೇ ದೇವತೆಗಳ ರಾಜನಾದ ಇಂದ್ರನೇ, ನೀನು ನಿಜವಾಗಿ ನನ್ನ ಮೇಲೆ
ಪ್ರಸನ್ನಗೊಂಡಿದ್ದರೆ ನನ್ನ ಕೇಳಿಕೆಯನ್ನು ನಿಜಗೊಳಿಸಬೇಕು! ನನಗಾಗಿ ಯುದ್ಧದಲ್ಲಿ
ಪರಾಕ್ರಮವನ್ನು ಮಾಡಿ ಮಡಿದ ವಾನರರೆಲ್ಲರೂ ಪುನಃ ಜೀವಿತರಾಗಲಿ. ಹೇ
ಮಾನ್ಯ ವರನೇ, ನನಗಾಗಿ ಯಾವ ವಾನರರು ತಮ್ಮ ಹೆಂಡತಿ ಮಕ್ಕಳನ್ನು
ಆಗಲಿರುವರೋ ಅವರೆಲ್ಲರೂ ಪ್ರಸನ್ನಚಿತ್ತರಾಗಬೇಕೆಂಬ ಇಚ್ಛೆ ನನ್ನದಾಗಿದೆ.