ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೩೦೭


ಇಲ್ಲಿ ಉಲ್ಲೇಖಿಸಲ್ಪಟ್ಟ ವರ ಮತ್ತು ಇಂದ್ರನು ರಾಮನಿಗೆ ಕೊಟ್ಟ ವರವು
ಒಂದೇ ಇರಬಹುದೋ ಅಥವಾ ಬೇರೆಬೇರೆಯಾಗಿರಬಹುದೋ? ದೇವತೆ
ಗಳಿಂದ ದೊರೆತ ವರವು ಬೇರೆ ಇರಬಹುದು. ಏಕೆಂದರೆ 'ದೇವತೆಗಳಿಂದ'
ಎಂಬ ಬಹುವಚನದ ಉಲ್ಲೇಖವಿದೆ. ಇಂದ್ರನಿಂದ ದೊರೆತ ವರ ಬೇರೆ
ಇರಬಹುದು. ಇಲ್ಲಿ ವರದ ಸ್ವರೂಪವು ಸ್ಪಷ್ಟವಿಲ್ಲ. ಇದು ಕೂಡ 'ಅಯಾಚಿತ'
ವರವಿರಬೇಕು.

ಯುದ್ಧಕಾಂಡ/೧೨೫

ರಾಮನು ಹನುಮಂತನನ್ನು ಅಯೋಧ್ಯೆಯತ್ತ ಮುಂಚೂಣಿಯಲ್ಲಿ ಕಳುಹಿಸಿ,
ತನ್ನ ಕುಶಲವನ್ನು ಅಯೋಧ್ಯಾವಾಸಿಗಳಿಗೆ ತಿಳಿಸಿ ಅವರನ್ನು ಸಂತೋಷಪಡಿಸಲು
ಹೇಳಿದನು. ಸೀತಾಪಹರಣ, ಸುಗ್ರೀವನೊಡನೆ ಮಿತ್ರತ್ವ, ವಾಲಿಯ ವಧೆ,
ಸಮುದ್ರವನ್ನು ಕಂಡಿದ್ದು, ಸೇತುವಿನ ನಿರ್ಮಾಣ, ನಂತರ ನಡೆದ ರಾವಣನ
ವಧೆ ಇವೆಲ್ಲವನ್ನೂ ವಿವರವಾಗಿ ತಿಳಿಸಲು ರಾಮನು ಸೂಚಿಸುತ್ತಿದ್ದಾಗ, ಈ
ಕೆಳಗಿನ ಉಲ್ಲೇಖವು ಬಂದಿದೆ.
ವರದಾನಂ ಮಹೇಂದ್ರೇಣ ಬ್ರಹ್ಮಣಾ ವರುಣೇನ ಚ |
ಮಹಾದೇವಪ್ರಸಾದಾಚ್ಚ ಪಿತ್ರಾ ಮಮ ಸಮಾಗಮಮ್ ‖೧೧‖

"ಇಂದ್ರ, ಬ್ರಹ್ಮ, ವರುಣ ಇವರು ಯಾವ ವರಗಳನ್ನು ಕರುಣಿಸಿದರು?
ಮತ್ತು ಮಹಾದೇವನ ಕೃಪೆಯಿಂದ ನನ್ನ ತಂದೆಯಾದ ದಶರಥನ ಭೇಟಿ ಯಾವ
ರೀತಿಯಾಯಿತು? ಎಂಬುದನ್ನು ಹೇಳಿ, ನಾನು ಇಲ್ಲಿಗೆ ಸಮೀಪಿಸಿದ್ದೇನೆಂದು
ನೀನು ಭರತನಿಗೆ ತಿಳಿಸು."
ವರದಾನಂ ಮಹೇಂದ್ರೋಣ ಬ್ರಹ್ಮಣಾ ವರುಣೇನ ಚ |
ಮಹಾದೇವಪ್ರಸಾದಾಚ್ಚ ಪಿತ್ರಾ ಮಮ ಸಮಾಗಮಮ್ ‖೧೧‖

"ಇಂದ್ರ, ಬ್ರಹ್ಮ, ವರುಣ ಇವರು ಯಾವ ವರಗಳನ್ನು ಕರುಣಿಸಿದರು?
ಮತ್ತು ಮಹಾದೇವನ ಕೃಪೆಯಿಂದ ನನ್ನ ತಂದೆಯಾದ ದಶರಥನ ಭೇಟಿ
ಯಾವ ರೀತಿಯಾಯಿತು? ಎಂಬುದನ್ನು ಹೇಳಿ, ನಾನು ಇಲ್ಲಿಗೆ ಸಮೀಪಿಸಿ
ದ್ದೇನೆಂದು ನೀನು ಭರತನಿಗೆ ತಿಳಿಸು."