ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೩೧೧


ನನ್ನದಾಗಿದೆ” ಎಂದನು. ಆಗ ಬ್ರಹ್ಮದೇವನು ಸಂತೋಷಗೊಂಡು ಹೀಗೆ
ಮಾತನಾಡಿದನು.
ಅಹಂ ವೈ ಲೋಕಪಾಲಾನಾಂ ಚತುರ್ಥಂ ಸ್ರುಷ್ಟುಮುದ್ಯತಃ ||೧೭||
ಯಮೇಂದ್ರವರುಣಾನಾಂ ಚ ಪದಂ ಯತ್ತವ ಚೇಪ್ಸಿತಮ್ |
ತದ್ಗಚ್ಛ ಬತ ಧರ್ಮಜ್ಞ ನಿಧೀಶತ್ವಮವಾಪ್ನುಹಿ ॥೧೮॥
ಶಕ್ರಾಂಬುಪಯಮಾನಾಂ ಚ ಚತುರ್ಥಸ್ತ್ವಂ ಭವಿಷ್ಯಸಿ |
ಏತಚ್ಚ ಪುಷ್ಪಕಂ ನಾಮ ವಿಮಾನಂ ಸೂರ್ಯಸಂನಿಭಮ್ ‖೧೯‖
ಪ್ರತಿಗೃಹಣೀಷ್ಟ ಯಾನಾರ್ಥಂ ತ್ರಿದಶೈಃ ಸಮತಾಂ ವ್ರಜ |
ಸ್ವಸ್ತಿ ತೇsಸ್ತು... ‖೨೦‖

“ನಾಲ್ಕನೆಯ ಲೋಕಪಾಲನೊಬ್ಬನನ್ನು ನೇಮಿಸಲು ನಾನು ಉದ್ಯುಕ್ತ
ನಾಗಿದ್ದೇನೆ. ಯಮ, ಇಂದ್ರ, ವರುಣಾದಿಗಲಿಗೆ ಪ್ರಾಪ್ತವಾದಂತೆ ನಿನಗೆ ಲೋಕಪಾಲ
ನಾಗುವ ಸಂಧಿಯು ಒದಗಿದೆ. ನಿನ್ನ ಬೇರೆ ಇಚ್ಛೆ ಆಕಾಂಕ್ಷೆಗಳು ಕೂಡ ಸಿದ್ದಿಸುವವು.
ಹೇ ಧರ್ಮವನ್ನರಿತವನೇ, ನೀನು ಹೊರಡು! ನಿನಗೆ 'ನಿಧಿಶತ್ವ'ವು ದೊರೆಯಲಿದೆ.
ಇಂದ್ರ, ವರುಣಾದಿಗಳಂತೆ ನೀನು ನಾಲ್ಕನೆಯ ಲೋಕಪಾಲನಾಗುವೆ! ಸೂರ್ಯನಂತೆ
ಥಳಥಳಿಸುವ ಈ ಪುಷ್ಪಕವಿಮಾನದಲ್ಲಿ ನೀನು ಪ್ರಯಾಣ ಮಾಡು! ನೀನು
ದೇವತೆಗಳಿಗೆ ಸರಿಸಮಾನನಾಗುವೆ! ನಿನಗೆ ಶುಭವಾಗಲಿ!” ಎಂದನು.
ವೈಶ್ರವಣನು ಬ್ರಹ್ಮನ ಬಳಿ ವರವನ್ನು ಬೇಡಿರಲಿಲ್ಲ. ಬ್ರಹ್ಮದೇವನು ಪ್ರಸನ್ನನಾಗಿ
ವರವನ್ನು ಬೇಡಿಕೊಳ್ಳಲು ತಿಳಿಸಿದಾಗ, ವೈಶ್ರವಣನು ತನ್ನ ಇಷ್ಟಾರ್ಥವನ್ನು
ವ್ಯಕ್ತಮಾಡಿದ ಕಾರಣ ಇದು 'ಅಯಾಚಿತ' ವರವೆನಿಸುತ್ತದೆ. 'ನಿಧಿಶತ್ವ' ಮತ್ತು
ಪುಷ್ಪಕವಿಮಾನ ಇವು ದೊರೆಯಬೇಕೆಂದು ಆತನು ವ್ಯಕ್ತಿಪಡಿಸದೇ ಇದ್ದರೂ
ಬ್ರಹ್ಮದೇವನು ಅವುಗಳನ್ನು ತಾನಾಗಿಯೇ ಕರುಣಿಸಿದನು. ಹೀಗಿರುವದರಿಂದ
ಈ ವರವು 'ಅಯಾಚಿತ'ವಾಗಿದೆ. ಪುಷ್ಪಕವಿಮಾನದ ಪ್ರಾಪ್ತಿಯು ವರವಾಗಿರದೆ
ಅನುಗ್ರಹವಾಗಿದೆ.

೫೨. ಶಂಕರ < ಸುಕೇತ

ಉತ್ತಕಾಂಡ/೪

ರಾಮನು ವಿಚಾರಿಸಿದ ಕಾರಣ ಅಗಸ್ತ್ಯಮುನಿಯು, ರಾಕ್ಷಸರು ಹೇಗೆ
ನಿರ್ಮಿತರಾದರೂ ಎಂಬುದನ್ನು ವಿವರಿಸುತ್ತಾನೆ. ಪ್ರಜಾಪತಿಯು ಮೊಟ್ಟಮೊದಲ