ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೩೧೫


ಬ್ರಹ್ಮದೇವನು ಸಂತುಷ್ಟನಾಗಿ ತಾನಾಗಿ ವರವನ್ನು ಕೊಟ್ಟಿದ್ದರೂ ವರದ
ಉದ್ದೇಶವನ್ನಿಟ್ಟುಕೊಂಡು ತಪಸ್ಸನ್ನಾಚರಿಸಿದ್ದರಿಮದ ಇದು 'ಯಾಚಿತ' ವರವಾಗಿದೆ
ಎಂದು ತಿಳಿದುಕೊಳ್ಳಬೇಕು.

ಉತ್ತರಕಾಂಡ/೬

ದೇವತೆಗಳನ್ನು ಮತ್ತು ತಪೋಧನ ಋಷಿಗಳನ್ನು ಸುಕೇಶನ ಪುತ್ರರು
ವಧಿಸಲು ಹವಣಿಸಿದಾಗ ದೇವತೆಗಳು ಮತ್ತು ಋಷಿಗಳು ಮಹೇಶ್ವರನ ಬಳಿಗೆ
ಶರಣುಹೋಗಿ ಈ ರೀತಿ ನುಡಿದರು-
ಸುಕೇಶಪುತ್ರೈರ್ಭಗವನ್ವಿತಾಮಹವಿರೋದ್ಧತೈಃ |
ಪ್ರಜಾಧ್ಯಕ್ಷ ಪ್ರಜಾಃ ಸರ್ವಾ ಬಾಧ್ಯಂತೇ ರಿಪುಬಾಧನೈಃ ‖೪‖

“ಭಗವಂತನೇ, ಹೇ ಪ್ರಜಾಧಿಪತಿಯೇ, ಬ್ರಹ್ಮದೇವನ ವರದಿಂದ ಕೊಬ್ಬಿದ
ಈ ಸುಕೇಶಪುತ್ರರು ಎಲ್ಲ ಪ್ರಜೆಗಳನ್ನೂ ಹಿಂಸಿಸುತ್ತಿದ್ದಾರೆ.”
“ನಮ್ಮ ಆಶ್ರಮಗಳನ್ನು ಅವರು ಹಾಳುಮಾಡಿದ್ದಾರೆ. ದೇವತೆಗಳನ್ನು
ಸ್ವರ್ಗದಿಂದ ಹೊರಗಟ್ಟಿ ಇವರು ದೇವತೆಗಳಂತೆ ಅಲ್ಲಿ ಕ್ರೀಡಾಸಕ್ತರಾಗಿದ್ದಾರೆ.
ತಾವು ಈಗ ಕಠೋರ ರೂಪವನ್ನು ತಾಳಿ ಆ ದೇವಕಂಟಕರನ್ನು
ನಿರ್ಮೂಲಗೊಳಿಸಬೇಕು.”
ದೇವತೆಗಳ ಈ ಪ್ರಾರ್ಥನೆಯನ್ನು ಶಂಕರನು ಆಲಿಸಿದನು. ಹೀಗಿದ್ದರೂ
ಸಂಕೇಶನ ಬಗ್ಗೆ ಆತನ ಕೃಪಾದೃಷ್ಟಿಯಿದ್ದುದರಿಂದ, ಆತನು 'ಇವರನ್ನು ವಧಿಸುವದು
ನನಗೆ ಅಸಾಧ್ಯ ನಾನು ವಧಿಸಲಾರೆನು; ಆದರೆ ಅವರ ವಧೆಯು ಒಂದು
ಉಪಾಯವನ್ನು ನಿಮಗೆ ಸುಚಿಸುವೆನು' ಎಂದು ನುಡಿದು, 'ನೀವೆಲ್ಲರೂ ವಿಷ್ಣುವಿಗೆ
ಶರಣು ಹೋದರೆ ಆತನಿಂದ ಇವರ ವಧೆಯಾಗಬಹುದು' ಎಂದು ಸಲಹೆಯಿತ್ತನು.
ಆಗ ಆ ದೇವತೆಗಳು ವಿಷ್ಣುವಿಗೆ ಶರಣುಹೋಗಿ ಇಂತೆಂದರು-
ಸುಕೇಶತನಯೈರ್ದೇವ ತ್ರಿಭಿಸ್ತ್ರೇತಾಗ್ನಿಸಂನಿಭೈಃ ‖
ಆಕ್ರಮ್ಯ ವರದಾನೇನ ಸ್ಥಾನಾನ್ಯಪಹೃತಾನಿ ನಃ ‖೧೪‖


“ಹೇ ದೇವನೇ, ಅಗ್ನಿಹೋತ್ರಾದಿ ಶ್ರೌತಕರ್ಮ ಸಂಬಂಧದಲ್ಲಿ ಅಗ್ನಿಯಂತೆ
ಪ್ರಖರರಿದ್ದ ಆ ಸುಕೇಶಪುತ್ರರು ವರದಾನದಿಂದ ನಮ್ಮ ಸ್ಥಾನಗಳನ್ನು
ಅಪಹರಿಸಿಕೊಂಡಿದ್ದಾರೆ. ಮದೋನ್ಮತ್ತರಾದ ಈ ರಾಕ್ಷಸರನ್ನು ಕೊಂದು ನೀವು