ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೧೬

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ನಮ್ಮ ಭಯವನ್ನು ಹೋಗಲಾಡಿಸಬೇಕು. ಆಗ ದೇವತೆಗಳಿಗೆ ಅಭಯವನ್ನಿತ್ತು
ವಿಷ್ಣುವು ಇಂತೆಂದು ನುಡಿದನು- “ನೀವು ಇನ್ನು ಯೋಚಿಸಬೇಡಿರಿ; ನಾನು
ಅವರನ್ನು ವಧಿಸುತ್ತೇನೆ.”
ದೇವತೆಗಳ ಈ ಚಟುವಟಿಕೆಗಳು ಗಮನಕ್ಕೆ ಬಂದ ತಕ್ಷಣವೇ 'ಮಾಲ್ಯವಾನ'
ರಾಕ್ಷಸನು ತನ್ನ ಸಹೋದರರಿಗೆ ಹೀಗೆಂದನು- “ದೇವತೆಗಳು ಹಾಗೂ ಋಷಿಗಳು
ಸೇರಿಕೊಂಡು ಶಿವನ ಬಳಿ ಹೋಗಿ ಈ ರೀತಿ ಹೇಳಿದ್ದಾರೆ.
ಸಕೇಶತನಯಾ ದೇವ ವರದಾನಬಲೋದ್ಧತಾಃ |
ಬಾಧಂತೇsಸ್ಮಾನ್ಸಮುದ್ದೃಪ್ತಾ ಘೋರರೂಪಾಃ ಪದೇ ಪದೇ ‖೨೫‖

“ವರದಾನದಿಂದ ಮದವೇರಿದ ಸುಕೇಶಪುತ್ರರು ತುಂಬಾ
ಅಹಂಕಾರಿಗಳಾಗಿದ್ದಾರೆ. ಸತತವಾಗಿ ನಮ್ಮನ್ನೆಲ್ಲ ಪೀಡಿಸುತ್ತಿದ್ದಾರೆ- ಎಂದು
ಶಿವನಿಗೆ ತಿಳಿಸಿದ್ದಾರೆ. ಅಲ್ಲದೆ, ಶಂಕರನು ಸುಕೇಶ ಪುತ್ರರನ್ನು ವಧಿಸಬೇಕೆಂದು
ಪ್ರಾರ್ಥಿಸಿಕೊಂಡಾಗ, ಅವನು ತಾನು ವಧೆ ಮಾಡುವುದಿಲ್ಲವೆಂದು ಹೇಳಿದ್ದಾನೆ.
ಆದರೆ ವಧಿಸುವ ಉಪಾಯವನ್ನು ಅವರಿಗೆ ತಿಳಿಸಿದ್ದಾನೆ.”
ಸುಮಾಲೀ ವರಲಬ್ಧಾಂಸ್ತು ಜ್ಞಾತ್ವಾ ಚೈತಾನ್ನಿಶಾಚರಾನ್ |
ಉದತಿಷ್ಠದ್ಭಯಂ ತ್ಯಕ್ತ್ವಾ ಸಾನುಗಃ ಸ ರಸಾತಲಾತ್ ‖೧೧-೧‖

ನಿಶಾಚರರಿಗೆ ಬ್ರಹ್ಮದೇವನು ಮರವನ್ನು ಕೊಟ್ಟ ಸಂಗತಿಯನ್ನು ಕೇಳಿ
ಸುಮಾಲಿಯು ನಿರ್ಭಯನಾಗಿ ತನ್ನ ಅನುಚರರೊಂದಿಗೆ ರಸಾತಳದಿಂದ
ಹೊರಬಿದ್ದನೆಂಬ ಉಲ್ಲೇಖವು ಉತ್ತರಕಾಂಡ ೧೧-೧ರಲ್ಲಿ ಬಂದಿದೆ.

೫೫. ಬ್ರಹ್ಮದೇವ < ವಿಭೀಷಣ

ಉತ್ತರಕಾಂಡ/೧೦

ರಾವಣ ಹಾಗೂ ಆತನ ಸಹೋದರರು ಕೈಗೊಂಡ ತಪಸ್ಸಿನ ಬಗ್ಗೆ,
ಪಡೆದ ವರಗಳ ಬಗ್ಗೆ ಅಗಸ್ತ್ಯಮುನಿಯು ರಾಮನಿಗೆ ಹೇಳುತ್ತಿದ್ದಾನೆ.
ರಾವಣ ಮತ್ತು ಆತನ ಸಹೋದರರು ಜಿತೇಂದ್ರಿಯರಾಗಿದ್ದುಕೊಂಡು
ಅನೇಕ ತರಹದ ಧರ್ಮವಿಧಿಗಳನ್ನು ಆಚರಿಸಿದರು. ವಿಭೀಷಣನು ಒಂಟಿಗಾಲಿನಲ್ಲಿ
ಎದ್ದು ನಿಂತು ಐದು ಸಾವಿರ ವರ್ಷಗಳ ಕಾಲ ತಪಸ್ಸನ್ನು ಮಾಡಿದನು. ಶಿರ
ಮತ್ತು ಬಾಹುಗಳೆರಡನ್ನೂ ಮೇಲೆ ಆಕಾಶದತ್ತ ಎತ್ತರಿಸಿ ಇನ್ನೂ ಐದು ಸಾವಿರ