ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೩೧೭


ವರ್ಷಗಳ ಪರ್ಯಂತ ವೇದಾಧ್ಯಯನದಲ್ಲಿ ತೊಡಗಿ ಧರ್ಮಾತ್ಮನಾದ ವಿಭೀಷಣನು
ಸೂರ್ಯನ ತಪಸ್ಸನ್ನಾಚರಿಸಿದನು. ವಿಭೀಷಣನ ತಪಸ್ಸಿನಿಂದ ಪ್ರಸನ್ನನಾದ
ಬ್ರಹ್ಮದೇವನು-
ಪರಿತುಷ್ಟೋsಸ್ಮಿ ಧರ್ಮಾತ್ಮನ್ವರಂ ವರಯ ಸುವ್ರತ ‖೨೮‖

“ನಿನ್ನ ಬಗ್ಗೆ ನನಗೆ ಸಂತೋಷವಾಗಿದೆ. ಹೇ ಸದಾಚರಣಸಂಪನ್ನ
ಧರ್ಮನಿಷ್ಠನೇ, ನೀನು ವರವನ್ನು ಕೇಳ!” ಎಂದನು. ಆಗ ವಿಭೀಷಣನು
ಕರಗಳೆರಡನ್ನೂ ಜೋಡಿಸಿ, “ಪ್ರತ್ಯಕ್ಷದಲ್ಲಿ ಜಗದೀಶನೇ ಪ್ರಸನ್ನನಾಗಿರುವದರಿಂದ
ನಾನು ಕೃತಾರ್ಥನಾದೆ” ಎಂದನು.
ಪ್ರೀತೇನ ಯದಿ ದಾತವ್ಯೋ ವರೋ ಮೇ ಶ್ರುಣು ಸುವ್ರತ |
ಪರಮಾಪ‌ದ್ಗತಸ್ಯಾಪಿ ಧರ್ಮೇ ಮಮ ಮತಿರ್ಭವೇತ್ ‖೩೦‖
ಅಶಿಕ್ಷಿತಂ ಚ ಬ್ರಹ್ಮಾಸ್ತ್ರಂ ಭಗವನ್ಪ್ರತಿಬಾತು ಮೇ |
ಯಾ ಯಾ ಮೇ ಜಾಯತೇ ಬುದ್ಧಿರ್ಯೇಷು ಯೇಷ್ವಾಶ್ರಮೇಷು ಚ ‖೩೧‖
ಸಾ ಸಾ ಭವತು ಧರ್ಮಿಷ್ಠಾ ತಂ ತಂ ಧರ್ಮಂ ಚ ಪಾಲಯೇ |
ಏಪ ಮೇ ಪರಮೋದಾರೋ ವರಃ ಪರಮಕೋ ಮತಃ ‖೩೨‖

“ನೀವು ಪ್ರಸನ್ನರಾಗಿ ನನಗೆ ವರವನ್ನು ಕೊಡುತ್ತಿದ್ದರೆ ಹೇ ಸುವ್ರತರೇ,
ನನ್ನ ಮಾತುಗಳನ್ನು ಆಲಿಸಿರಿ! ನಾನು ಎಷ್ಟೇ ಸಂಕಟದಲ್ಲಿ ಸಿಲುಕಿದ್ದರೂ ನನ್ನ
ಒಲವು ಧರ್ಮದತ್ತ ಇರಬೇಕು. ಭಗವಂತನೇ, ಬ್ರಹ್ಮಾಸ್ತ್ರದ ಪ್ರತಿಭೆಯು
ನನಗೆ ಉಪದೇಶವಿರದೇ ದೊರೆಯಬೇಕು! ಯಾವ ಆಶ್ರಮದಲ್ಲಿ ನಾನು
ಇದ್ದರೂ ನನ್ನಲ್ಲಿ ಧರ್ಮಬುದ್ಧಿ ಇರಬೇಕು! ನಾನು ಧಮ್ವನ್ನಾಚರಿಸುತ್ತ
ಇರಬೇಕು! ಹೇ ಪರಮ ಉದಾರನೇ, ಇಂಥ ವರವು ನನಗೆ ಅತ್ಯಂತ
ಪ್ರಿಯವೆನಿಸುವದು.”
ಧರ್ಮನಿಷ್ಠರಾದವರಿಗೆ ಈ ಜಗತ್ತಿನಲ್ಲಿ ಯಾವ ಸಂಗತಿಯೂ ದುರ್ಲಭ
ವಾಗಿರುವದಿಲ್ಲ ಎಂಬುದನ್ನು ಅರಿತ ವಿಭೀಷಣನ ಭಾಷಣವನ್ನು ಕೇಳಿ ಬ್ರಹ್ಮದೇವನು
ಹೀಗೆಂದನು-
ಯಸ್ಮಾದ್ರಾಕ್ಷಸರೋನೌ ತೇ ಜಾತಸ್ಯಾಮಿತ್ರನಾಶನ ‖೩೪‖
ನಾಧರ್ಮೇ ಜಾಯತೇ ಬುದ್ಧಿರಮರತ್ವಂ ದದಾಮಿ ತೇ ‖೩೫‖