ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೧೮

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


“ರಾಕ್ಷಸರ ಕುಲದಲ್ಲಿ ನೀನು ಜನ್ಮ ಪಡೆದಿದ್ದರೂ ನಿನ್ನ ಮತಿಯು ಅಧರ್ಮದತ್ತ
ಹೋಗುತ್ತಿಲ್ಲವಾದ್ದರಿಂದ ನಿನಗೆ ಅಮರತ್ವವು ಪ್ರಾಪ್ತವಾಗುವದು ಎಂದು ಬ್ರಹ್ಮ
ದೇವನು ವರವನ್ನಿತ್ತನು.”
ಪ್ರಸನ್ನನಾದ ಬ್ರಹ್ಮದೇವನು ವಿಭೀಷಣನಿಗೆ ವರವನ್ನು ಬೇಡಿಕೊಳ್ಳಲು
ಹೇಳಿದ ಕಾರಣ, ಅವನು ಬೇಡಿಕೊಂಡ ವರವು ಯಾಚಿತವಾಗಿಲ್ಲ. ತಪಸ್ಸಿನಿಂದ
ಪ್ರಸನ್ನಗೊಳಿಸಿಕೊಂಡಿರುವದರಿಂದ ವರದ ಅಪೇಕ್ಷೆ ಇರಬಹುದು ಎಂದು
ಭಾವಿಸಿದರೂ ಬ್ರಹ್ಮದೇವನು ಅಮರತ್ವದ ವರವನ್ನು ತಾನಾಗಿ ಕೊಟ್ಟ ಕಾರಣ
ಈ ವರವು 'ಅಯಾಚಿತ'ವಾಗಿದೆ.

೫೬. ಬ್ರಹ್ಮದೇವ < ಕುಂಭಕರ್ಣ

ಉತ್ತರಕಾಂಡ/೧೦

ರಾವಣ ಮತ್ತು ಆತನ ಸಹೋದರರು ಆಚರಿಸಿದ ತಪಸ್ಸು ಹಾಗೂ
ಪಡೆದ ವರಗಳ ಬಗ್ಗೆ ಅಗಸ್ತ್ಯಮುನಿಯು ರಾಮಿನಗೆ ಹೇಳುತ್ತಿದ್ದಾನೆ-
“ರಾವಣ ಹಾಗೂ ವಿಭೀಷಣ ಇವರ ತಪಸ್ಸಿನಿಂದ ಸಂತುಷ್ಟನಾಗಿ
ಬ್ರಹ್ಮದೇವನು ಅವರಿಗೆ ವರಗಳನ್ನು ಕೊಟ್ಟ ನಂತರ ಕುಂಭಕರ್ಣನಿಗೆ ಸಹ ವರ
ಕೊಡಲು ಸಿದ್ಧನಾದಾಗ ದೇವತೆಗಳೆಲ್ಲರೂ ಕೈ ಮುಗಿದು ಈ ರೀತಿ ಬ್ರಹ್ಮದೇವನಿಗೆ
ಪ್ರಾರ್ಥಿಸಿಕೊಂಡರು. “ನೀವು ಕುಂಭಕರ್ಣನಿಗಾದರೂ ಈ ರೀತಿಯ ವರವನ್ನು
ಕೊಡಬೇಡಿರಿ! ಈ ದುರ್ಬುದ್ದಿಯು ಜನರನ್ನು ಯಾವ ರೀತಿ ಪೀಡಿಸುತ್ತಾನೆ
ಎಂಬುದು ನಿಮಗೆ ತಿಳಿದ ವಿಷಯ. ಏಳು ಅಪ್ಸರೆಯರನ್ನೂ, ಮಹೇಂದ್ರನ
ಹತ್ತು ಸೇವಕರನ್ನೂ, ಅನೇಕ ಮಾನವರನ್ನೂ ಮತ್ತು ಋಷಿಗಳನ್ನೂ ಇವನು
ತಿಂದುಹಾಕಿದ್ದಾನೆ. ವರ ದೊರೆಯುವ ಮುನ್ನವೇ ಈತನ ವರ್ತನೆಯು ಈ
ಪರಿಯದಿರುವಾಗ, ವರ ಪಡೆದನಂತರ ಈತನು ತ್ರೈಲೋಕ್ಯವನ್ನೇ ಭಕ್ಷಿಸಬಹುದು.
ನೀವು ವರವನ್ನು ಕೊಡುವ ಆಸೆ ಹುಟ್ಟಿಸಿ ಆತನಿಗೆ ಮೋಹವಶ ಮಾಡಿರಿ! ಆಗ
ಅದು ಜನರ ಹಿತಕ್ಕಾಗಿ ಆಗುವದು; ಅಲ್ಲದೆ, ಕುಂಭಕರ್ಣನ ಪ್ರಾರ್ಥನೆಯನ್ನು
ಮನ್ನಿಸಿದಂತೆ ಸಹ ಆಗುವದು. ದೇವತೆಗಳ ಈ ಕೋರಿಕೆಯನ್ನು ಕೇಳಿ ಬ್ರಹ್ಮ
ದೇವನು, ಸರಸ್ವತಿಯನ್ನು ಸ್ಮರಿಸಿದನು. ಆಗ ಸರಸ್ವತಿಯು ಅಲ್ಲಿ ಬಂದು ನಿಂತಳು.
'ಯಾವ ಕಾರ್ಯವಾಗಬೇಕಿದೆ?' ಎಂದು ಪ್ರಶ್ನಿಸಿದಳು. ಆಗ ಬ್ರಹ್ಮದೇವನು
ದೇವತೆಗಳ ಇಚ್ಛೆಯಂತೆ ಮಾಡಬೇಕೆಂದು ಹೇಳಿದನು. ಸರಸ್ವತಿಯು ಒಪ್ಪಿಕೊಂಡಳು.
ಆಗ ಬ್ರಹ್ಮದೇವನು ಕುಂಭಕರ್ಣನಿಗೆ