ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೩೨೧


ಇದು ಯಾಚಿತ ವರವಾಗಿದೆ. ಚಂದ್ರಹಾಸ ಖಡ್ಗವು ಅನುಗ್ರಹರೂಪದಲ್ಲಿ
ಲಭಿಸಿದೆ.

೫೮. ಇಂದ್ರ < ಮಯೂರ

ಉತ್ತರಕಾಂಡ/೧೮

ಅಗಸ್ತ್ಯಮುನಿಯು ರಾಮನಿಗೆ ಮರುತ್ತರಾಜನ ಯಾಗದ ವೃತ್ತಾಂತವನ್ನು
ಹೇಳುತ್ತಿದ್ದಾನೆ:
ಉಶೀರಬೀಜ ಎಂಬ ದೇಶದಲ್ಲಿ ಮರುತ್ತರಾಜನು ದೇವತೆಗಳ ಸಹಿತ
ಯಾಗವನ್ನು ಕೈಗೊಂಡಿದ್ದನು. ಬರಹಸ್ಪತಿಯ ಸಹೋದರನಾದ ಧರ್ಮವಿದನಾದ
ಸಂವರ್ತ ಎಂಬಾತನು ಆತನ ಪುರೋಹಿತನಾಗಿದ್ದನು. ರಾವಣನು ಈ ಯಜ್ಞವು
ಇಲ್ಲಿ ನಡೆದಿದೆ ಎಂಬದನ್ನು ಅರಿತಿದ್ದಾನೆ ಎಂಬ ಸಂಗತಿಯು ಈ ಯಜ್ಞ
ಮಾಡುವವರಿಗೆ ತಿಳಿದುಬಂದಿತು. ಆಗ ರಾವಣನು ಇಲ್ಲಿಗೆ ಬಂದು ಹಲ್ಲೆ
ನಡೆಯಿಸಬಹುದು ಎಂಬ ಭೀತಿಯನ್ನು ತಾಳಿ ದೇವತೆಗಳೆಲ್ಲರೂ ಒಬ್ಬೊಬ್ಬರಾಗಿ
ತಿರ್ಯಂಗ್ ಯೋನಿಯನ್ನು (ಪ್ರಾಣಿ-ಪಕ್ಷಿಗಳ ರೂಪ) ಪ್ರವೇಶಿಸಿದರು. ಇಂದ್ರನು
ನವಿಲಿನ ರೂಪ ತಾಳಿದನು. ಧರ್ಮರಾಜ ಯಮನು ಕಾಗೆಯಾದನು; ವರುಣನು
ಹಂಸರೂಪವನ್ನು ಸ್ವೀಕರಿಸಿದನು. ಧನಾಧ್ಯಕ್ಷನಾದ ಕುಬೇರನು ಓತಿಕೇತನಾದನು.
ಇನ್ನಿತರ ದೇವತಾದಿಗಳು ಅನ್ಯ ಪಶುಪಕ್ಷಿಗಳ ರೂಪವನ್ನು ತಾಳಿದರು. ರಾವಣನು
ಆ ಯಜ್ಞಮಂಟಪವನ್ನು ಪ್ರವೇಶಿಸಿ ಮರುತ್ತರಾಜನನ್ನು ಯುದ್ಧಕ್ಕೆ ಆಹ್ವಾನಿಸಿದನು.
ಮರುತ್ತರಾಜನು ಅಂಜಿಕೆಯಿಲ್ಲದೆ 'ನೀನು ಯಾರು?' ಎಂದು ರಾವಣನಿಗೆ
ಪ್ರಶ್ನಿಸಿದನು. ರಾವಣನು ಆಗ ತನ್ನ ಪೌರುಷವನ್ನು ತಾನೇ ಬಣ್ಣಿಸಿಕೊಂಡನು
ಅದನ್ನು ಕೇಳಿ ಮರುತ್ತರಾಜನು ಯುದ್ಧಕ್ಕೆ ಸಜ್ಜಾದನು. ಆದರೆ ಆತನ
ಪುರೋಹಿತರು ಆತನನ್ನು ತಡೆದರು. 'ಈ ಮಾಹೇಶ್ವರ ಯಾಗವು ಮುಗಿಯುವವರೆಗೆ
ದೀಕ್ಷೆಯನ್ನು ತೆಗೆದುಕೊಂಡವನಿಗೆ ಯುದ್ಧಮಾಡುವ ಅಧಿಕಾರವಿರುವುದಿಲ್ಲ.
ಪ್ರಹಾರ ಮಾಡುವದು ಈಗ ಸರಿಯಲ್ಲ; ಮಾಡಿದಲ್ಲಿ ಕುಲದ ನಾಶವಾಗುವದು;
ಅಲ್ಲದೆ, ಈ ಯುದ್ಧದಲ್ಲಿ ವಿಜಯದ ಸಾಧ್ಯತೆ ಕಡಿಮೆ; ಏಕೆಂದರೆ ರಾವಣನಿಗೆ
ಯಾರಿಂದಲೂ ಸೋಲು ಬರುವಂತಿಲ್ಲ' ಎಂದರು.
ಮರುತ್ತರಾಜನು ಪುರೋಹಿತರ ಸೂಚನೆಯ ಪ್ರಕಾರ ಯುದ್ದದ ವಿಚಾರವನ್ನು
ಬಿಟ್ಟುಬಿಟ್ಟನು. ರಾವಣನಿಗೆ ಜಯವಾಯಿತೆಂದು ಶುಕರಾಕ್ಷಸನು ಘೋಷಿಸಿದನು.
ಯಜ್ಞಕ್ಕಾಗಿ ಬಂದ ಮಹರ್ಷಿಗಳನ್ನು ಭಕ್ಷಿಸಿ ರಾವಣನು ಪುನಃ ಪೃಥ್ವಿಯ