ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೨೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಮೇಲೆ ಸಂಚರಿಸಹತ್ತಿದನು. ಅವನು ಹೊರಟುಹೋದನಂತರ ದೇವತೆಗಳು
ತಮ್ಮ ತಮ್ಮ ನಿಜರೂಪಗಳನ್ನು ಪಡೆದರು. ಆ ಎಲ್ಲ ಪಕ್ಷಿ-ಪ್ರಾಣಿಗಳಿಗೆ ಮರಗಳನ್ನಿತ್ತರು.
ಹರ್ಷಾತ್ತದಾಬ್ರವೀದಿಂದ್ರೋ ಮಯೂರಂ ನೀಲಬರ್ಹಿಣಮ್ |
ಪ್ರೀತೋsಸ್ಮಿ ತವ ಧರ್ಮಜ್ಞ ಭುಜಂಗಾದ್ಧಿ ನ ತೇ ಭಯಮ್ ‖೨೨‖
ಇದಂ ನೇತ್ರ ಸಹಸ್ರಂ ತು ಯತ್ತದ್ಬರ್ಹೇ ಭವಿಷ್ಯತಿ |
ವರ್ಷಮಾಣೇ ಮಯಿ ಮುದಂ ಪ್ರಾಪ್ಸ್ಯಸೇ ಪ್ರೀತಿಲಕ್ಷಣಾಮ್ ‖೨೩‖
ಏವಮಿಂದ್ರೋ ವರಂ ಪ್ರಾದಾನ್ಮಯೂರಸ್ಯ ಸುರೇಶ್ವರಃ ‖೨೪‖

ನೀಲವರ್ಣದ ಗರಿಗಳುಳ್ಳ ನವಿಲಿಗೆ ಇಂದ್ರನು ಆನಂದದಿಂದ ಇಂತೆಂದನು-
“ಹೇ ಧರ್ಮಜ್ಞನೇ, ನಾನು ನಿನ್ನ ಮೇಲೆ ಪ್ರಸನ್ನನಾಗಿದ್ದೇನೆ. ಸರ್ಪಗಳ
ಭಯವು ನಿನಗೆ ಇರಲಾರದು. ನನ್ನ ಸಾವಿರ ಕಣ್ಣುಗಳು ನಿನ್ನ ಗರಿಗಳ ಮೇಲೆ
ಸ್ಥಾಪಿತವಾಗುವವು. ನಾನು ಮಳೆಗರೆಯುತ್ತಿದ್ದಾಗ ನಿನಗೆ ಪ್ರೇಮಸೂಚಕ ಆನಂದವು
ಆಗುವದು.” ಈ ರೀತಿ ದೇವೇಂದ್ರನು ಮಯೂರಪಕ್ಷಿಗೆ ವರವನ್ನು ಕೊಟ್ಟನು.
ಈ ಮೊದಲು ನವಿಲಿನ ಗರಿಗಳು ಕೇವಲ ನೀಲವರ್ಣದವಿದ್ದವು. ಈ
ವರದಿಂದ ಅವುಗಳ ಮೇಲೆ ನೇತ್ರಗಳ ಮೂಡಿದವು.
ಇದು 'ಅಯಾಚಿತ' ವರವಾಗಿದೆ.

೫೯. ಯಮ < ಕಾಗೆ

ಉತ್ತರಕಾಂಡ/೧೮

ಅಗಸ್ತ್ಯಮುನಿಯು ರಾಮನಿಗೆ ಮರುತ್ತರಾಜನ ಯಾಗದ ವಿಷಯದ
ಬಗ್ಗೆ ಹೇಳುತ್ತಿದ್ದಾನೆ.
ವರ ಕ್ರಮಸಂಖ್ಯೆ ೫೮ ಇಂದ್ರ < ಮಯೂರ- ನೋಡಿ.
ಧರ್ಮರಾಜೋsಬ್ರವೀದ್ರಾಮ ಪ್ರಾಗ್ವಂಶೇ ವಾಯಸಂ ಪ್ರತಿ |
ಪಕ್ಷಿಸ್ತಾಸ್ಮಿ ಸುಪ್ರೀತಃ ಪ್ರೀತಸ್ಯ ವಚನಂ ಶ್ರುಣು ‖೨೬‖
ಯಥಾನ್ಯೇ ವಿವಿಧೈ ರೋಗೈಃ ಪೀಡ್ಯಂತೇ ಪ್ರಾಣಿನೋ ಮಯಾ |
ತೇ ನ ತೇ ಪ್ರಭವಿಷ್ಯಂತಿ ಮಯಿ ಪ್ರೀತೇ ನ ಸಂಶಯಃ ‖೨೭‖
ಮೃತ್ಯುತಸ್ತೇ ಭಯಂ ನಾಸ್ತಿ ವರಾನ್ಮಮ ವಿಹಂಗಮ |
ಯಾವತ್ತ್ವಾಂ ನ ವಧಿಷ್ಯಂತಿ ನರಾಸ್ತಾವದ್ಭವಿಷ್ಯತಿ ‖೨೮‖
ಯೇ ಚ ಮದ್ವಿಷಯಸ್ಥಾ ವೈ ಮಾನವಾಃ ಕ್ಷುಧ್ರಯಾರ್ದಿತಾಃ |