ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೩೨೩


ತ್ವಯಿ ಭುಕ್ತೇ ಸುತೃಪ್ರಾಸ್ತೇ ಭವಿಷ್ಯಂತಿ ಸಬಾಂಧವಾಃ ‖೨೯‖

ಪ್ರಾಗ್ವಂಶವನ್ನಾಶ್ರಯಿಸಿ ಕುಳಿತ ಕಾಗೆಯನ್ನು ಕುರಿತು ಯಮಧರ್ಮರಾಯನು
ಹೀಗೆಂದನು- “ಹೇ ಪಕ್ಷಿಯೇ< ನಾನು ನಿನ್ನಮೇಲೆ ಪ್ರಸನ್ನನಾಗಿದ್ದೇನೆ. ಪ್ರಸನ್ನನಾದ
ನಿನ್ನ ಮಾತುಗಳನ್ನು ಆಲಿಸು! ಇನ್ನಿತರ ಪ್ರಾಣಿಗಳಿಗೆ ನಾನು ಹಲವು ವ್ಯಾಧಿಗಳಿಂದ
ಪೀಡಿಸುತ್ತಿರುತ್ತೇನೆ; ಆದರೆ, ನಾನು ನಿನ್ನಲ್ಲಿ ಸಂತೊಷ ಹೊಂದಿದ ಕಾರಣ
ನಿನಗೆ ರೋಗದ ಪೀಡೆಯೇ ಇರಲಾರದು. ಯಾವವರೆಗೆ ಮನುಷ್ಯರಿಂದ
ಇಲ್ಲವೇ ಇತರ ಪ್ರಾಣಿಗಳಿಂದ ನಿನ್ನ ಹತ್ಯೆಯಾಗುವದಿಲ್ಲವೋ ಆವರೆಗೆ ನೀನು
ಬದುಕಿರುವೆ. ಯಮಲೋಕದಲ್ಲಿ ಹಸಿವೆ ಬಾಯಾರಿಕೆಗಳಿಂದ ಬಳಲುತ್ತಿರುವವರಿಗೆ,
ನಿನಗೆ ಆಹಾರ ಭೋಜನಾದಿಗಳು ದೊರೆತಾಗ, ಅವರು ತಮ್ಮ ಸ್ವಬಾಂಧವ
ರೊಂದಿಗೆ ತೃಪ್ತತೆಯನ್ನು ಹೊಂದುವರು” ಎಂಬ ವರವನ್ನು ಯಮನು ಕಾಗೆಗೆ
ಕೊಟ್ಟನು.
ಇದು 'ಅಯಾಚಿತ' ವರವಾಗಿದೆ.

೬೦. ವರುಣ < ಹಂಸ

ಉತ್ತರಕಾಂಡ/೧೮

ಅಗಸ್ತ್ಯಮುನಿಯು ರಾಮನಿಗೆ ಮರುತ್ತರಾಜನ ಯಾಗದ ವೃತ್ತಾಂತವನ್ನು
ಹೇಳುತ್ತಿದ್ದಾನೆ.
ವರ ಕ್ರಮಸಂಖ್ಯೆ ೫೮ ಇಂದ್ರ < ಮಯೂರ- ಪರಿಶೀಲಿಸಿ.
ವರುಣಸ್ತ್ವಬ್ರವಿದ್ಧಂಸಂ ಗಂಗಾತೋಯವಿಚಾರಿಣಮ್ |
ಶ್ರೂಯತಾಂ ಪ್ರೀತಿಸಂಯುಕ್ತಂ ವಚಃ ಪತ್ರರಥೇಶ್ವರ ‖೩೦‖
ವರ್ಣೋ ಮನೋರಮಃ ಸೌಮ್ಯಶ್ಚಂದ್ರಮಂಡಲಸಂನಿರ್ಭಃ |
ಭವಿಷ್ಯತಿ ತವೋದಗ್ರಃ ಶುದ್ಧಫೇನಸಮಪ್ರಭಃ ‖೩೧‖
ಮಚ್ಛರೀರಂ ಸಮಾಸಾದ್ಯ ಕಾಂತೋ ನಿತ್ಯಂ ಭವಿಷ್ಯಸಿ |
ಪ್ರಾಪ್ಸ್ಯಸೇ ಚಾತುಲಾಂ ಪ್ರೀತಿಮೇತನ್ಮೇ ಪ್ರೀತಿಲಕ್ಷಣಮ್ ‖೩೨‖

ಗಂಗೋದಕದಲ್ಲಿ ವಿಹರಿಸುತ್ತಿದ್ದ ಪಕ್ಷಿರಾಜನಾದ ಹಂಸಕ್ಕೆ ವರುಣನು
ಇಂತೆಂದನು: “ನನ್ನ ಪ್ರಿಯ ಭಾಷಣವನ್ನು ನೀನು ಆಲಿಸು | ಶುಭ್ರ ನೊರೆಯಂತೆ
ಪ್ರಭೆಯುಳ್ಳ, ಚಂದ್ರಮಂಡಲದಂತೆ ಕಾಂತಿಯುಳ್ಳ ಹಾಗೂ ಮನೋಹರ