ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೨೪

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಸೌಮ್ಯವಾದ ಉತ್ತಮ ವರ್ಣವು ನಿನ್ನ ಶರೀರದ ಕಾಂತಿಯಾಗಲಿ! ನನ್ನ ರೂಪವಿದ್ದ
ಜಲಾಶಯದಲ್ಲಿ ನೀನು ಯಾವಾಗಲೂ ಮನೋಹರನಾಗಿ ಕಂಗೊಳಿಸುತ್ತಿರು!
ನೀನು ನನ್ನ ಪರೀತಿಯ ಕುರುಹಾಗಿ ಸದಾಕಾಲವೂ ಆನಂದದಲ್ಲಿರುವೆ.”
ಈ ಮೊದಲು ಹಂಸಪಕ್ಷಿಯ ವರ್ಣವು ಬಿಳಿಯದಾಗಿರಲಿಲ್ಲ. ಆ ಪಕ್ಷಿಯ
ರೆಕ್ಕೆಗಳ ತುದಿಗಳು ನೀಲವರ್ಣವಿದ್ದವು ಮತ್ತು ಎದೆಯ ಭಾಗವು ಎಳಸಾದ
ಹುಲ್ಲಿನ ವರ್ಣದ್ದಾಗಿರುತ್ತಿತ್ತು.
ಇದು 'ಅಯಾಚಿತ' ವರವಾಗಿದೆ.

೬೧. ವೈಶ್ರವಣ < ಕೃಕಲಾಸ (ಓತಿಕೇತ)

ಉತ್ತರಕಾಂಡ/೧೮

ಅಗಸ್ತ್ಯ ಮುನಿಯು ರಾಮನಿಗೆ ಮರುತ್ತರಾಜನ ಯಾಗದ ಬಗ್ಗೆ ಹೇಳುತ್ತಾನೆ.
ವರ ಕ್ರಮಸಂಖ್ಯೆ ೫೮ ಇಂದ್ರ < ಮಯೂರ- ಪರಿಶೀಲಿಸಿರಿ.
ಅಥಾಬ್ರವೀದ್ವೈಶ್ರವಣಃ ಕೃಕಲಾಸಂ ಗಿರೌ ಸ್ಥಿತಮ್ |
ಹೈರಣ್ಯಂ ಸಂಪ್ರಯಚ್ಛಾಮಿ ವರ್ಣ೦ ಪ್ರೀತಸ್ತವಾಪ್ಯಹಮ್ ‖೩೪‖
ಸದ್ರವ್ಯಂ ಚ ಶಿರೋ ನಿತ್ಯಂ ಭವಿಷ್ಯತಿ ತವಾಕ್ಷಯಮ್ |
ಏಷ ಕಾಂಚನಕೋ ವರ್ಣೋ ಮತ್ಪ್ರೀತ್ಯಾ ತೇ ಭವಿಷ್ಯತಿ ‖೩೫‖

ಪರ್ವತದ ಮೇಲೆ ನೆಲೆಸಿದ್ದ ಕೃಕಲಾಸ(ಓತಿಕೇತ)ಕ್ಕೆ ವೈಶ್ರವಣನು
ಇಂತೆಂದನು- “ನಾನು ನನಗೆ ಪ್ರಸನ್ನನಾಗಿದ್ದೇನೆ. ನಾನು ನಿನಗೆ ಹೊನ್ನಿನ
ವರ್ಣವನ್ನು ದಯಪಾಲಿಸುತ್ತೇನೆ. ನಿನ್ನ ಶಿರದ ಭಾಗವು ಯಾವಾಗಲೂ ಸುವರ್ಣ
ವಾಗಿ ಉಳಿಯುವದು. ಸ್ವಲ್ಪದರಲ್ಲಿ ಹೇಳಬೇಕೆಂದರೆ ನಿನ್ನ ವರ್ಣವು ನನ್ನ
ಪ್ರೀತಿಯ ದ್ಯೋತಕವಾಗುವದು.”
ಇದು 'ಅಯಾಚಿತ' ವರವಾಗಿದೆ.

೬೨. ಬ್ರಹ್ಮದೇವ < ನಿವಾತ್ಮಕವಚ

ಯುದ್ಧಕಾಂಡ/೨೩

ಅಗಸ್ತ್ಯಮುನಿಯು ರಾಮನಿಗೆ ರಾವಣನ ಪರಾಕ್ರಮವನ್ನು ಬಣ್ಣಿಸುತ್ತಿದ್ದಾನೆ.
ಯಮನನ್ನು ಸೋಲಿಸಿದ ನಂತರ ಮಾರೀಚ ಪ್ರಭೃತಿರಾಕ್ಷಸರೊಂದಿಗೆ
ರಾವಣನು ಪುಷ್ಪಕವಿಮಾನದಿಂದ ಸಾಗರದಲ್ಲಿ ಪ್ರವೇಶಿಸಿ ಪಾತಾಳಕ್ಕೆ ಹೋದನು.