ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೩೨೭


“ಲಂಕೆಯ ಸಮೀಪದಲ್ಲಿ 'ನಿಕುಂಭಿಲಾ' ಹೆಸರಿನ ಒಂದು ಉತ್ತಮವಾದ
ಉದ್ಯಾನವಿದೆ. ಒಂದು ಸಲ ರಾವಣನು ತನ್ನ ಅನುಯಾಯಿಗಳೊಂದಿಗೆ ಅಲ್ಲಿಗೆ
ತಲುಪಿದಾಗ ಆತನಿಗೆ ಒಂದು ಯಜ್ಞವು ಸಾಂಗವಾಗುತ್ತಿರುವದು ಕಂಡಿತು.
ಕೃಷ್ಣಾಜಿನವನ್ನು ತೊಟ್ಟು ಕಮಂಡಲ ಮತ್ತು ದಂಡವನ್ನು ಧರಿಸಿದ ಆತನ
ಪುತ್ರನಾದ ಮೇಘನಾದನು ಅಲ್ಲಿ ದೃಷ್ಟಿಗೆ ಬಿದ್ದನು. ಆಗ ರಾವಣನು ಆತನ ಬಳಿ
ಹೋಗಿ ಅಪ್ಪಿಕೊಂಡು ಇಂತೆಂದನು: ವತ್ಸನೇ, ನೀನು ಇಲ್ಲಿ ಏನು ಮಾಡುತ್ತಿರುವೆ
ಎಂಬುದನ್ನು ನನಗೆ ನಿಜವಾಗಿ ಹೇಳು!
“ಆಗ ಮೇಘನಾದನ ಯಜ್ಞವು ಸಫಲಗೊಳ್ಳಬೇಕೆಂದು ದ್ವಿಜಶ್ರೇಷ್ಠನಾದ
'ಉಶನಾ' ಎಂಬ ತಪಸ್ವಿಯು ರಾವಣನಿಗೆ: 'ರಾಜನೇ, ನಾನು ನಿನಗೆ ನಿಜ
ಸಂಗತಿಯನ್ನು ಅರುಹುವೆ; ನೀನು ಅದನ್ನು ಕೇಳು! ಅಗ್ನಿಷ್ಟೋಮ, ಅಶ್ವಮೇಧ, ಬಹು
ಸುವರ್ಣಕ ಯಜ್ಞ, ರಾಜಸೂಯ, ಗೋಮೇಧ, ವೈಷ್ಣವ ಹಾಗೂ ಮಾಹೇಶ್ವರ
ಎಂಬ ಏಳು ಯಜ್ಞಗಳನ್ನು ನಿನ್ನ ಪುತ್ರನು ಪೂರ್ತಿಗೊಳಿಸಿದ್ದಾನೆ.”
ಮಾಹೇಶ್ವರೇ ಪ್ರವೃತ್ತೇ ತು ಯಜ್ಞೇ ಪುಂಭಿಃ ಸುದುರ್ಲಭೇ |
ವರಾಂಸ್ತೇ ಲಬ್ಧವಾನ್ಪತ್ರಃ ಸಾಕ್ಷಾತ್ಪಶುಪರತೇರಿಹ ‖೯‖
ಕಾಮಗಂ ಸ್ಯಂದನಂ ದಿವ್ಯಮಂತರಿಕ್ಷಚರಂ ಧ್ರುವಮ್ |
ಮಾಯಾಂ ಚ ತಾಮಸೀಂ ನಾಮ ಯಯಾ ಸಂಪದ್ಯತೇ ತಮಃ ‖೧೦‖
ಏತಯಾ ಕಿಲ ಸಂಗ್ರಾಮೇ ಮಾಯಯಾ ರಾಕ್ಷಸೇಶ್ವರ |
ಪ್ರಯುಕ್ತಯಾ ಗತಿಃ ಶಕ್ಯಾ ನಹಿ ಜ್ಞಾತುಂ ಸುರಾಸುರೈಃ ‖೧೧‖
ಅಕ್ಷಯಾವಿಷುಧೀ ಬಾಣೈಶ್ಚಾಪಂ ಚಾಪಿ ಸದುರ್ಜಯಮ್ |
ಅಸ್ತ್ರಂ ಚ ಬಲವದ್ರಾಜಂಛತ್ರುವಿಧ್ವಂಸನಂ ರಣೇ ‖೧೨‖
ಏತಾನ್ಸರ್ವಾನ್ವರಾಂಲ್ಲಬ್ಧ್ವಾ ಚ ತ್ವಾಂ ದಿದೃಕ್ಷನ್ಸ್ಥಿತೋ ಹ್ಯಹಮ್ ‖೧೩‖

“ಅತಿ ಕಠಿಣವಾದ ಮಾಹೇಶ್ವರ ಯಜ್ಞವು ನಡೆದಾಗ ಸಾಕ್ಷಾತ್ ಪಶುಪತಿ
ಯಾದ ನಿನ್ನ ಪುತ್ರನು ವರಗಳನ್ನು ಪಡೆದುಕೊಂಡಿದ್ದಾನೆ. ಇಚ್ಛೆಯಂತೆ ಚಲಿಸುವ,
ಅಂತರಿಕ್ಷದಲ್ಲಿ ಸರಿ ಹೋಗಬಲ್ಲ ದಿವ್ಯರಥವನ್ನು ಪಡೆದಿದ್ದಾನೆ. ಅಲ್ಲದೇ ಅಧಿಕಾರ
ವನ್ನು ನಿರ್ಮಿಸಬಲ್ಲ ತಾಮಸೀ ಮಾಯಾವಿದ್ಯೆಯನ್ನು ಪಶುಪತಿಯು ದಾನವಾಗಿ
ಕೊಟ್ಟು ಈ ರೀತಿ ನುಡಿದಿದ್ದಾನೆ: 'ಹೇ ರಾಕ್ಷಸಾಧಿಪತಿಯೇ, ಸಂಗ್ರಾಮದಲ್ಲಿ ಈ
ಮಾಯಾವಿದ್ಯೆಯನ್ನು ಬಳಸಿದರೆ ದೇವ-ದೈತ್ಯರಿಗೂ ನಿನ್ನ ಚಲನವಲನವು
ಕಾಣಿಸಲಾರದು. ಸದಾಕಾಲವೂ ತುಂಬಿರುವ ಬತ್ತಳಿಕೆ, ಪರಾಜಯವೆಂಬುದು