ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೩೨೯


ಅಯಂ ಚ ಪುತ್ರೋsತಿಬಲಸ್ತವ ರಾವಣ ವೀರ್ಯವಾನ್ |
ಜಗತೀಂದ್ರ ಜಿದಿತ್ಯೇವ ಪರಿಖ್ಯಾತೋ ಭವಿಷ್ಯತಿ ‖೫‖

“ಈ ನಿನ್ನ ವೀರನಾದ ಅತಿಬಲಾಢ್ಯನಾದ ಪುತ್ರನು ಜಗತ್ತಿನಲ್ಲಿ 'ಇಂದ್ರಜಿತು'
ಎಂಬ ಹೆಸರಿನಿಂದ ಖ್ಯಾತಿಗೊಳ್ಳುವನು.” ಯಾರನ್ನು ಆಶ್ರಯಿಸಿ ರಾವಣನು
ದೇವತೆಗಳನ್ನು ಸೋಲಿಸಿದನೋ ಆ ರಾಕ್ಷಸನು (ಇಂದ್ರಜಿತು) ಯಾರಿಂದಲೂ
'ಸೋಲುವಂತಿಲ್ಲ' ಎಂದು ನುಡಿದು, ಇಂದ್ರನನ್ನು ಮುಕ್ತಗೊಳಿಸಬೇಕೆಂದು
ವಿನಂತಿಸಿದನು. ಇಷ್ಟೇ ಅಲ್ಲದೆ, ಇಂದ್ರನನ್ನು ಬಿಟ್ಟುಕೊಡಲು ಏನನ್ನು ಕೊಡಬೆಕು
ಎಂದು ಸ್ಪಷ್ಟವಾಗಿ ರಾವಣನಿಗೆ ವಿಚಾರಿಸಿದನು. ಆಗ ಮೇಘನಾದನು ಬ್ರಹ್ಮ
ದೇವನಿಗೆ-
ಅಮರತ್ವಮಹಂ ದೇವ ವೃಣೇ ಯದ್ಯೇಷಮುಚ್ಯತೇ ‖೮‖

“ಹೇ ದೇವನೇ, ಇಂದ್ರನನ್ನು ಬಿಟ್ಟುಕೊಡಬೇಕೆಂದರೆ 'ನಾನು ಅಮರನಾಗ
ಬೇಕೆಂದು ವರವನ್ನು ಬೇಡುತ್ತೇನೆ” ಎಂದನು.
ಆಗ ಬ್ರಹ್ಮದೇವನು-
ನಾಸ್ತಿ ಸರ್ವಾಮರತ್ವಂ ಹಿ ಕಸ್ಯಜಿತ್ಪ್ರಾಣಿನೊಃ ಭುವಿ ‖೯‖

“ಭೂಲೋಕದಲ್ಲಿನ ಯಾವ ಪ್ರಾಣಿಯೂ (ಪಕ್ಷಿ, ಚತುಷ್ಪಾದ ಮತ್ತು
ಇತರ ಮಹಾ ತೇಜಸ್ಸಿನ ಭೂತಪ್ರಾಣಿಗಳು) ಸಂಪೂರ್ಣ ಅಮರತ್ವವನ್ನು
ಹೊಂದುವಂತಿಲ್ಲ” ಎಂದನು.
ಬ್ರಹ್ಮದೇವನ ಮಾತನ್ನು ಕೇಳಿ ಮೇಘನಾದನು-
ಶ್ರೂಯತಾಂ ವಾ ಭವೇತ್ಸಿದ್ಧಿಃ ಶತಕ್ರತುವಿಮೋಕ್ಷಣೇ ‖೧೧‖
ಮಮೇಷ್ಟಂ ನಿತ್ಯಶೋ ಹವ್ಯೈರ್ಮಂತ್ರೈಃ ಸಂಪೂಜ್ಯ ಪಾವಕಮ್ |
ಸಂಗ್ರಾಮಮವತರ್ತುಂ ಚ ಶತ್ರುನಿರ್ಜಯಕಾಂಕ್ಷಿಣಃ ‖೧೨‖
ಅಶ್ವಯುಕ್ತೋ ರಥೋ ಮಹ್ಯಮುತ್ತಿಷ್ಠೇತ್ತು ವಿಭಾವಸೋಃ |
ತತ್ಸ್ಥಸ್ಯಾಮರತಾ ಸ್ಯಾನ್ಮೇ ಏಷ ಮೇ ನಿಶ್ಚಿತೋ ವರಃ ‖೧೩‖
ತಸ್ಮಿನ್ಯದ್ಯಸಮಾಪ್ತೇ ಚ ಜಪ್ಯಹೋಮೇ ವಿಭಾವಸೌ |
ಯುದ್ಧೇಯಂ ದೇವ ಸಂಗ್ರಾಮೇ ತದಾ ಮೇ ಸ್ಯಾದ್ವಿನಾಶನಮ್ ‖೧೪‖