ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೩೩೧


ಈ ರೀತಿ ಮಾಯಾವಿದ್ಯೆಯನ್ನು ಆಶ್ರಯಿಸಿ ಯಾರ ಕಣ್ಣಿಗೂ ಬೀಳದೆ
ಇಂದ್ರಜಿತುವು ನಾಗಪಾಶದಿಂದ ಅಭಿಮಂತ್ರಿಸಿದ ಶರಗಳಿಂದ ರಾಮ-ಲಕ್ಷ್ಮಣರನ್ನು
ಕಟ್ಟಿಹಾಕಿದನು.

ಯುದ್ಧಕಾಂಡ/೧೫

ಇಂದ್ರಜಿತುವಿನ ನಾಗಪಾಶದಿಂದ ಬಂಧನಕ್ಕೊಳಗಾದ ರಾಮ-ಲಕ್ಷಣರನ್ನು,
ಗರುಡನು ಆ ಪಾಶವನ್ನು ಕಿತ್ತು ಮುಕ್ತಗೊಳಿಸಿದನು. ಆಗ ವಾನರರು ಪ್ರಚಂಡ
ಘರ್ಜನೆ ಮಾಡಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ವಾನರರ
ಘರ್ಜನೆಯನ್ನು ಕೇಳಿ ರಾವಣನಿಗೆ ಮಾತ್ರ ಚಿಂತೆಯೆನಿಸಿತು. ರಾವಣನು ತನ್ನ
ಭೀತಿಯ ಕಾರಣವನ್ನು ವ್ಯಕ್ತಪಡಿಸುವಾಗ, ಇಂದ್ರಜಿತು ಪಡೆದುಕೊಂಡ ವರದ ಬಗ್ಗೆ ಈ ಕೆಳಗಿನಂತೆ ಉಲ್ಲೇಖಿಸಿದ್ದಾನೆ.
ಘೋರೈರ್ದತ್ತವರೈಬ್ರದ್ಧೌ ಶರೈರಾಶೀವಿಷೋಪಮೈಃ |
ಅಮೋಘೈಃ ಸೂರ್ಯಸಂಕಾಶೈಃ ಪ್ರಮಥ್ಯೇಂದ್ರಜಿತಾ ಯುಧಿ ‖೧೫॥
“ಬಹುಕಾಲದವರೆಗೆ ಘೋರ ತಪಸ್ಸನ್ನಾಚರಿಸಿದ್ದರಿಂದ, ವರರೂಪವಾಗಿ
(ಇಂದ್ರಜಿತು) ಮೇಘನಾದನಿಗೆ ದೊರೆತ, ಸರ್ಪದಂತೆ ವಿಷಪೂರಿತ ತೀಕ್ಷ್ಣ
ಬಾಣಗಳಿಂದ ರಾಮ ಲಕ್ಷ್ಮಣರನ್ನು ಘಾಸಿಗೊಳಿಸಿ ಬಂಧಿಸಲಾಗಿತ್ತು. ಅಂಥ
ಶತ್ರುಗಳು ಈಗ ಪುನಃ ಬಂಧನಮುಕ್ತರಾಗಿರುವದರಿಂದ ನನ್ನ ಸೈನ್ಯವು ಕಂಗೆಟ್ಟು
ಹೋಗುವದು.”
ಈ ವರವನ್ನು ಯಾರು ಕೊಟ್ಟರು? ಈ ಬಗ್ಗೆ ಸ್ಪಷ್ಟ ಉಲ್ಲೇಖವಿಲ್ಲ.
ಬ್ರಹ್ಮದೇವನಿಂದ ಇಂದ್ರಜಿತು ಕೇಳಿ ಪಡೆದ ವರದಲ್ಲಿ ರಥದ ಉಲ್ಲೇಖವಿದೆ;
ಬಾಣಗಳ ಉಲ್ಲೇಖವಿಲ್ಲ. ಮಾಹೇಶ್ವರೀ ಯಜ್ಞದ ನಂತರ ವರರೂಪವಾಗಿ
ಧನಸ್ಸು ಬಾಣಗಳು ದೊರೆತವೆಂಬ ಉಲ್ಲೇಖವು ಯುದ್ಧಕಾಂಡದ ೭ನೇ
ಸರ್ಗದಲ್ಲಿದೆ.
ವರ ಕ್ರಮಸಂಖ್ಯೆ ೪೨. ? < ಮೇಘನಾದ, ಪರಿಶೀಲಿಸಿ.

ಯುದ್ಧಕಾಂಡ/೭೨

ಲಕ್ಷ್ಮಣನು ಅತಿಕಾಮನನ್ನು ವಧಿಸಿದ ನಂತರ ಶೋಕಾಕುಲ ಹಾಗೂ
ಉದ್ವಿಗ್ನನಾಗಿದ್ದ ರಾವಣನು ಈ ಕೆಳಗಿನಂತೆ ಉದ್ಗಾರಗಳನ್ನು ತೆಗೆದಿದ್ದಾನೆ.