ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ವರದಾನ

೩೩೩


ಬಾಣಗಳಿಂದ ನಮ್ಮನ್ನು ಹಿಂಸಿಸುತ್ತಿದ್ದಾನೆ. ಬ್ರಹ್ಮದೇವನು ಈ ಮಹಾತ್ಮನಿಗೆ
ವರವನ್ನಿತ್ತಿದ್ದಾನೆ. ಈ ರಾಕ್ಷಸನು ತನ್ನ ಪ್ರಚಂಡ ಶರೀರವು ಕಾಣದಂತೆ
ಮಾಡಿಕೊಂಡು, ಮಾಯಾವೀ ರೀತಿಯಲ್ಲಿ ಎಚ್ಚರಿಕೆಯಿಂದ ಯುದ್ದವಾಡು
ತ್ತಿದ್ದಾನೆ. ಅದೃಶ್ಯನಾಗಿ ಶಸ್ತ್ರವನ್ನು ಬಳಸುತ್ತಲಿರುವ ಈ ಇಂದ್ರಜಿತುವನ್ನು
ಕಾಳಗದಲ್ಲಿ ಇಂದು ವಧಿಸುವದೆಂತು?” ಈ ಪರಿಯಾಗಿ ರಾಮನು ಲಕ್ಷ್ಮಣನಿಗೆ
ನುಡಿದನು.

ಯದ್ಧಕಾಂಡ/೮೦

ರಾಮಲಕ್ಷ್ಮಣರನ್ನು ವಧಿಸುವ ಪಣವನ್ನು ತೊಟ್ಟ ಇಂದ್ರಜಿತು ಕಲ್ಲುಮಳೆ
ಸುರಿಸಿದಂತೆ ಬಾಣಗಳ ಮಳೆಗರೆದನು. ಈ ಸಂದರ್ಭದ ಉಲ್ಲೇಖವು ಈ
ಕೆಳಗಿನಂತೆ ಇದೆ.
ಸ ರಾಮಂ ಸೂರ್ಯಸಂಕಾಶೈಃ ಶರೈರ್ದತ್ತವರೈರ್ಭೃಷಮ್ |
ವಿವ್ಯಾಧ ಸಮರೇ ಕ್ರುದ್ಧಃ ಸರ್ವಗಾತ್ರೇಷು ರಾವಣಿಃ ‖೨೮‖

ಕೋಪಾವಿಷ್ಟನಾದ ಆ ರಾವಣಪುತ್ರನು ವರವಾಗಿ ಪಡೆದ ಸೂರ್ಯನಷ್ಟು
ಪ್ರಖರವಾದ ಬಾಣಗಳಿಂದ ರಾಮನ ಸರ್ವಾಯವಗಳನ್ನೂ ಛೇದಿಸಿದನು.

ಯುದ್ಧಕಾಂಡ/೮೫

“ಇಂದ್ರಜಿತು ಸೀತೆಯನ್ನು ವಧಿಸಿದನು” ಎಂಬ ಹನುಮಂತನ
ಹೇಳಿಕೆಯನ್ನು ಕೇಳಿದ ಕ್ಷಣವೇ ರಾಮನು ಎಚ್ಚರತಪ್ಪಿದನು. ಲಕ್ಷ್ಮಣನು ಈ
ಸುದ್ದಿಯನ್ನು ನಂಬಿರಲಿಲ್ಲ. ವಾನರರ ಪರಾಕ್ರಮವನ್ನು ಕುಗ್ಗಿಸುವ ಉದ್ದೇಶದಿಂದ
ಇಂರಜಿತುವು ಈ ಮಾಯಾವೀ ಜಾಲವನ್ನು ಹೂಡಿರಬಹುದೆಂದು ಲಕ್ಷ್ಮಣನ
ಅನಿಸಿಕೆಯಾಗಿತ್ತು. ಲಕ್ಷ್ಮಣ ಮತ್ತು ವಿಭೀಷಣರು ಹಲವಾರು ರೀತಿಯಲ್ಲಿ ರಾಮನಿಗೆ
ಸಮಾಧಾನ ಹೇಳಿದರು. ನಿಕುಂಭಿಲಾ ದೇವಾಲಯಕ್ಕೆ ಹೋಮ ಮಾಡಲು
ಹೋದ ಇಂದ್ರಜಿತುವಿನ ಮೇಲೆ ದಾಳಿ ಮಾಡಲು ಲಕ್ಷ್ಮಣವನ್ನು ತತ್‌ಕ್ಷಣ
ಕಳುಹಿಸಬೇಕೆಂದು ವಿಭೀಷಣನು ರಾಮನಿಗೆ ಪ್ರಾರ್ಥಿಸಿದನು. ಒಮ್ಮೆ ಇಂದ್ರಜಿತುವು
ಈ ಹವನವನ್ನು ಪೂರ್ತಿಗೊಳಿಸಿದರೆ, ಆತನು ಎಲ್ಲರನ್ನೂ ವಧಿಸುವನೆಂಬ
ನಿಜವಾದ ಭೀತಿಯು ಎಲ್ಲರನ್ನೂ ಕಾಡುತ್ತಿತ್ತು. ಇಂದ್ರಜಿತುವು ಬ್ರಹ್ಮದೇವನಿಂದ
ಬ್ರಹ್ಮಾಸ್ತ್ರವನ್ನೂ ಮತ್ತು ಇಚ್ಛೆಯನುಸಾರವಾಗಿ ಚಲಿಸುವ ಅಶ್ವಗಳನ್ನೂ