ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೩೬

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಸೂರ್ಯನ ವರದಿಂದ ಸುವರ್ಣರೂಪವನ್ನು ಪಡೆದ ಸುಮೇರು
ಪರ್ವತದಲ್ಲಿ ಹನುಮಂತನ ಪಿತನಾದ ಕೇಸರಿಯು ತನ್ನ ಪತ್ನಿಯಾದ ಅಂಜನಿ
ಯೊಡನೆ ವಾಸವಿದ್ದನು. ಒಮ್ಮೆ ಅಂಜನಿಯು ಹಣ್ಣುಹಂಪಲುಗಳನ್ನು ತರಲು
ವನಕ್ಕೆ ಹೋದ ಸಮಯದಲ್ಲಿ, ಹಸಿವೆಯಿಂದ ವ್ಯಾಕುಲನಾದ ಹನುಮಾನನು
ಅದೇ ಉದಯಿಸುತ್ತಿದ್ದ ಸೂರ್ಯನನ್ನು ಫಲವೆಂದು ಭಾವಿಸಿ ಅದನ್ನು ಹಿಡಿಯ
ಲೆಂದು ಆಕಾಶದತ್ತ ನೆಗೆದನು. ಆತನ ವೇಗವನ್ನು ಅವಲೋಕಿಸಿದ ದೇವತೆಗಳು
ಆಶ್ಚರ್ಯಭರಿತರಾದರು.
ಸೂರ್ಯನು ಮೇರುಪರ್ವತಕ್ಕೆ ವರವನ್ನು ಏಕೆ ಕೊಟ್ಟಿದ್ದನೆಂಬುದರ
ಸರಿಯಾದ ಮಾಹಿತಿ ಇಲ್ಲ. ವರ ದೊರೆತ ಉಲ್ಲೇಖ ಮಾತ್ರ ಇದೆ.

೬೭. ಇಂದ್ರ < ಹನುಮಾನ

ಉತ್ತರಕಾಂಡ/೩೬

ಅನೇಕ ದೇವತೆಗಳಿಂದ ಹಲವಾರು ವರಗಳು ಹನುಮಾನನಿಗೆ ದೊರೆತ
ವಿಷಯದ ಬಗ್ಗೆ ಅಗಸ್ತ್ಯಮುನಿಯು ರಾಮನಿಗೆ ವಿವರಿಸುತ್ತಾನೆ.
ಅತಿವೇಗದಿಂದ ಆಕಾಶದತ್ತ ನೆಗೆದು ಸೂರ್ಯನ ಸಮೀಪ ಹನುಮಂತನು
ಬರುತ್ತಿರುವದನ್ನು ಕಂಡು ರಾಹುವಿಗೆ ಬಲು ಸಿಟ್ಟುಬಂದಿತು. ಇಂದ್ರನ ಬಳಿ
ಹೋಗಿ ಆತನು ಇಂತೆಂದನು: “ನನ್ನ ಹಸಿವೆಯನ್ನು ನೀಗಿಸಲು ನನಗೆ ಅರ್ಪಿಸಿದ
ಸೂರ್ಯ ಚಂದ್ರರನ್ನು ನೀನು ಮತ್ತೆ ಬೇರೆಯವರಿಗೆ ಕೊಡಲಿರುವ ಅರ್ಥವೇನು?
ನಾನು ಈ ಅಮಾವಾಸ್ಯೆಯ ದಿನದಂದು ಸೂರ್ಯನನ್ನು ನುಂಗುವ ಉದ್ದೇಶದಿಂದ
ಬಂದಿರುವಾಗ ಈ ಬೇರೆ ರಾಹುವು ಆತನನ್ನು ಮುತ್ತಿಕೊಂಡಿದ್ದಾನೆ.” ರಾಹುವಿನ
ಈ ಮಾತುಗಳನ್ನು ಕೇಳಿ ಇಂದ್ರನು ಗೊಂದಲಕ್ಕೀಡಾದನು. ಆತನು ರಾಹುವನ್ನು
ಕರೆದುಕೊಂಡು ಸೂರ್ಯನತ್ತ ನಡೆದನು. ರಾಹುವನ್ನು ಕಂಡ ಕ್ಷಣವೇ ಹನುಮಾನನು
ಸೂರ್ಯನನ್ನು ಬಿಟ್ಟು ರಾಹುವಿನ ಬೆನ್ನು ಹತ್ತಿದನು. ಆಗ ಭಯಗೊಂಡ
ರಾಹುವು ಇಂದ್ರನ ನೆರವನ್ನು ಕೋರಿದನು. ಕೋಪಗೊಂಡ ಇಂದ್ರನು ಹನುಮಾನನ
ಮೇಲೆ ವಜ್ರಪ್ರಹಾರ ಮಾಡಿದನು. ಹನುಮಾನನ ಗದ್ದಕ್ಕೆ ಪೆಟ್ಟು ತಗಲಿ ಆತನು
ಪರ್ವತದ ಮೇಲೆ ಪ್ರಜ್ಞೆ ತಪ್ಪಿ ಬಿದ್ದನು. ವಜ್ರಾಯುಧದ ಏಟಿನಿಂದ ನರಳುತ್ತಿರುವ
ತನ್ನ ಮಗನನ್ನು ಕಂಡು ವಾಯುವಿಗೆ ಇಂದ್ರನ ಮೇಲೆ ಕೋಪವುಂಟಾಯಿತು.
ವಾಯುವು ಜಗತ್ತಿನಲ್ಲಿಯ ತನ್ನ ಸಮಚಾರವನ್ನೇ ನಿಲ್ಲಿಸಿಬಿಟ್ಟನು. ತನ್ನ ಪುತ್ರನನ್ನು
ಎತ್ತಿಕೊಂಡು ಒಂದು ಗುಹೆಯಲ್ಲಿ ಕುಳಿತನು. ಈ ರೀತಿ ವಾಯುವು ಕ್ರೋಧಿತನಾದ