ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೩೩೯


ವರುಣನು, “ಹತ್ತು ಹತ್ತು ಸಾವಿರ ವರ್ಷಗಳ ಆವರ್ತನಗಳು ನೂರು
ಸಲ ಕಳೆದುಹೋದರೂ ನನ್ನ ಪಾಶದಿಂದ ಅಥವಾ ನೀರಿನಿಂದ ಹನುಮಾನನ
ಮೃತ್ಯುವಾಗಲಾರದು” ಎಂದು ವರವನ್ನು ಕೊಟ್ಟನು.
ಇದು 'ಅಯಾಚಿತ' ವರವಾಗಿದೆ.

೭೦. ಯಮ < ಹನುಮಾನ

ಉತ್ತರಕಾಂಡ/೩೬

ಅನೇಕ ದೇವತೆಗಳಿಂದ ಹನುಮಾನನಿಗೆ ಹಲವು ವರಗಳು ದೊರೆತವು.
ಅವುಗಳನ್ನು ಕುರಿತು ಅಗಸ್ತ್ಯಮುನಿಯು ರಾಮನಿಗೆ ತಿಳಿಸುತ್ತಿದ್ದಾನೆ.
ಇಂದ್ರ < ಹನುಮಾನ, ವರ ಕ್ರಮಾಮಕ ೬೭- ನೋಡಿ.
ಯಮೋ ದಂಡಾದವಧ್ಯತ್ವಮರೋಗತ್ವಂ ಚ ದತ್ತವಾನ್ |
ವರಂ ದದಾಮಿ ಸಂತುಷ್ಟ ಅವಿಷಾದಂ ಚ ಸಂಯುಗೇ ‖೧೬‖

ಯಮನು ಹನುಮಾನನಿಗೆ ಒಳ್ಳೆಯ ಆರೋಗ್ಯ ಹಾಗೂ ಯಮದಂಡದಿಂದ
ಸಹ ಮರಣವು ಬಾರದೆಂಬ ವರವನ್ನಿತ್ತನು. ಸಂಗ್ರಾಮದಲ್ಲಿ ಈತನಿಗೆ ದಣಿವು
ಆಗಲಾರದು! ಎಂದೂ ನುಡಿದನು.
ಇದು 'ಅಯಾಚಿತ' ವರವಾಗಿದೆ.

೭೧. ಕುಬೇರ < ಹನುಮಾನ

ಉತ್ತರಕಾಂಡ/೩೬

ಇಂದ್ರ < ಹನುಮಾನ, ವರ ಕ್ರಮಾಂಕ ೬೭- ನೋಡಿ.
ದೇವತೆಗಳಿಂದ ಹನುಮಾನನಿಗೆ ಅನೇಕ ವರಗಳು ದೊರೆತವೆಂಬ ಬಗ್ಗೆ
ಅಗಸ್ತ್ಯ ಮುನಿಯು ರಾಮನಿಗೆ ಹೇಳುತ್ತಿದ್ದಾನೆ.
ಗದೇಯಂ ಮಾಮಿಕಾ ನೈನಂ ಸಂಯುಗೇಷು ವಧಿಷ್ಯತಿ |
ಇತ್ಯೇವಂ ಧನದಃ ಪ್ರಾಹ ತದಾ ಹ್ಯೇಕಾಕ್ಷಿ ಪಿಂಗಲಃ ‖೧೭‖

“ಈ ನನ್ನ ಗದೆಯಿಂದ ಕಾಳಗದಲ್ಲಿ ಹನುಮನನ ವಧೆಯಾಗಲಾರದು!”
ಎಂಬ ವರವನ್ನು ಏಕಾಕ್ಷ ಪಿಂಗಲ ಕಣ್ಣಿನ ಕುಬೇರನು ಕೊಟ್ಟನು.
ಇದು 'ಅಯಾಚಿತ' ವರವಾಗಿದೆ.