ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೩೪೧

೭೪. ಬ್ರಹ್ಮದೇವ < ಹನುಮಾನ

ಉತ್ತರಕಾಂಡ/೩೬

ಅನೇಕ ದೇವತೆಗಳಿಂದ ಬಹು ವಿಧವಾದ ವರಗಳು ಹನುಮಾನನಿಗೆ
ದೊರೆತವೆಂಬ ಬಗ್ಗೆ ಅಗಸ್ತ್ಯಮುನಿಯು ರಾಮನಿಗೆ ತಿಳಿಸುತ್ತಿದ್ದಾನೆ.
ವರ ಕರಮಸಂಖ್ಯೆ ೬೭. ಇಂದರ < ಹನುಮಾನ- ಪರಿಶೀಲಿಸಿ.
ದೀರ್ಘಾಯುಶ್ಚ ಮಹಾತ್ಮಾ ಚ ಬ್ರಹ್ಮಾ ತಂ ಪ್ರಾಬ್ರವೀದ್ವಚಃ |
ಸರ್ವೇಷಾಂ ಬ್ರಹ್ಮದಂಡಾನಾಮವಧ್ಯೋsಯಂ ಭವಿಷ್ಯತಿ ‖೨೧‖

ದೀರ್ಘಾಯುವಿದ್ದ ಮಹಾತ್ಮನಾದ ಬ್ರಹ್ಮದೇವನು ಇಂತೆಂದನು- “ಈ
ನಿನ್ನ ಮಗನಾದ ಹನುಮಾನನು ಶತ್ರುಗಳಿಗೆ ಅರಿಭಯಂಕರನೆನಿಸುವನು; ಮಿತ್ರರ
ಭಯನಿವಾರಕನು; ಇಷ್ಟವಿದ್ದ ರೂಪವನ್ನು ಪಡೆಯುವಂಥವನು; ಸ್ವೇಚ್ಛೆಯಿಂದ
ವರ್ತಿಸುವವನು; ಇಷ್ಟವಿದ್ದ ಕಡೆಗೆ ಸಂಚರಿಸುವ ಕ್ಷಮತೆಯುಳ್ಳವನೂ ಆಗಿ ಕೀರ್ತಿ
ಹೊಂದುವನು. ಈ ನಿನ್ನ ವಾನರ ಶ್ರೇಷ್ಠ ಪುತ್ರನ ವೇಗವು ಕುಂಠಿತವಾಗಲಾರದು.
ಕಾಳಗದಲ್ಲಿ ಈತನಿಂದ ರಾವಣನಿಗೆ ಭಯ, ಪೀಡೆ ಹುಟ್ಟಿಸುವಂಥ ಕಾರ್ಯಗಳನ್ನು
ಎಸಗುವನು. ಈ ಕಾಯಕಗಳಿಂದ ರಾಮನಿಗೆ ಆನಂದ, ರೋಮಾಂಚನ
ವಾಗುವುದು." ಈ ರೀತಿ ಬ್ರಹ್ಮದೇವನು ಹನುಮಾನನಿಗೆ ವರ ಕೊಟ್ಟಿದ್ದನ್ನು
ವಾಯುವಿಗೆ ಹೇಳುತ್ತಾನೆ. ಬ್ರಹ್ಮದೇವನ ಈ ನುಡಿಗಳು ಆಶೀರ್ವಾದ ರೂಪವಾಗಿವೆ.
ಇದು 'ಅಯಾಚಿತ' ವರವಾಗಿದೆ.

೭೫. ರಾಮ < ಸೀತಾ

ಉತ್ತರಕಾಂಡ/೪೬

ಸೀತೆಯು ಗರ್ಭವತಿಯಾಗಿದ್ದಾಗ ಒಮ್ಮೆ ರಾಮನು-
“ಪ್ರಸವಿಸುವ ಸಮಯವು ಈಗ ಸಮೀಪಿಸುತ್ತಿದೆ. ನಿನ್ನ ಬಯಕೆ ಏನಾದರೂ
ಇದ್ದರೆ ಹೇಳು!” ಎಂದನು. ಆಗ ಸಂತೋಷಗೊಂಡ ಸೀತೆಯು “ಹೇ ರಾಘವನೇ,
ಪವಿತ್ರವಾದ ತಪೋವನಗಳನ್ನು ಅವಲೋಕಿಸುವ ಹಾಗೂ ಫಲಮೂಲಗಳನ್ನು
ಭಕ್ಷಿಸಿ, ಗಂಗಾತೀರದಲ್ಲಿ ವಾಸವಿದ್ದ ಮಹಾತೇಜಸ್ವೀ ಋಷಿಗಳ ಸಾನ್ನಿಧ್ಯದಲ್ಲಿ
ಇರುವ ಬಯಕೆ ನನಗಾಗಿದೆ. ಅಲ್ಲಿ ಒಂದು ರಾತ್ರಿಯನ್ನಾದರೂ ಕಳೆಯಬೇಕೆಂದು
ಆಸೆ ನನ್ನದಾಗಿದೆ” ಎಂದಳು ರಾಮನು "ನಾಳೆಯ ದಿನ ಖಚಿತವಾಗಿ ನೀನು
ಅಲ್ಲಿಗೆ ಹೋಗುವೆ!” ಎಂದು ಸೀತೆಗೆ ಆಶ್ವಾಸನೆಯನ್ನಿತ್ತನು.