ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೩೪೩


ಅನಯಿಷ್ಯಾಮಿ ತೇ ಚೇತಸ್ತುಷ್ಟೋsಸ್ಮಿ ತವ ಪಾರ್ಥಿವ ‖೧೨‖

“ರಾಜನೇ, ನಾನು ನಿನ್ನಲ್ಲಿ ಸಂತುಷ್ಟನಾಗಿದ್ದೇನೆ. ಆದಕಾರಣ ನಿನ್ನ ದೇಹದಲ್ಲಿ
ಚೈತನ್ಯವನ್ನುಂಟುಮಾಡುವೆನು.”
ಸುಪ್ರೀತಾಶ್ವ ಸುರಾಂ ಸರ್ವೇ ನಿಮೇಶ್ಚೇತಸ್ತದಾಬ್ರುವನ್ |
ವರಂ ವರಯ ರಾಜರ್ಷೇ ಕ್ವ ತೇ ಚೇತೋ ನಿರೂಪ್ಯತಾಮ್ ‖೧೩‖
ಏವಮುಕ್ತೇ ಸುರೈಃ ಸರ್ವೈರ್ನಿಮೇಶ್ಚೇತಸ್ತದಾಬ್ರವೀತ್ |
ನೇತ್ರೇಷು ಸರ್ವಭೂತಾನಾಂ ವಸೇಯಂ ಸುರಸುತ್ತಮಾಃ ‖೧೪‖
ತ್ವತ್ಕೃತೇ ಚ ನಿಮಿಷ್ಯಂತಿ ಚಕ್ಷೂಂಷಿ ಪೃಥಿವೀಪತೇ |
ವಾಯುಭೂತೇನ ಚರತಾ ವಿಶ್ರಾಮಾರ್ಥಂ ಮುಹುರ್ಮುಹುಃ ‖೧೬‖

ಆನಂತರ ದೇವತೆಗಳೆಲ್ಲರೂ ಸುಪ್ರಸನ್ನರಾಗಿ ಈ ರೀತಿ ಉದ್ಗರಿಸಿದರು:
“ಹೇ ರಾಜರ್ಷಿಯೇ, ನೀನು ವರವನ್ನು ಬೇಡು! ನಿನ್ನ ಚೇತನಾಪ್ರತೀಕವು
ಎಲ್ಲಿರುವದೆಂಬುದನ್ನು ತಿಳಿಸು.” ದೇವತೆಗಳೆಲ್ಲರೂ ಈ ರೀತಿ ಕೇಲಿದಾಗ
ನಿಮಿರಾಜನ ಜೀವಾತ್ಮನು ಈ ರೀತಿ ನುಡಿದನು: “ಹೇ ಶ್ರೇಷ್ಠ ದೇವತೆಗಳಿರಾ,
ಸಕಲಪ್ರಾಣಿಮಾತ್ರರ ನೇತ್ರಗಳಲ್ಲಿ ನಾನು ವಾಸವಿರುವೆ.” ಇದನ್ನು ಕೇಳಿ ದೇವತೆ
ಗಳೆಲ್ಲರೂ "ಎಲ್ಲ ಪ್ರಾಣಿಗಳ ನೇತ್ರಗಳಲ್ಲಿ ನೀನು ವಾಯುರೂಪವಾಗಿ ಸಂಚರಿಸುವೆ!
ಮತ್ತು ಈ ರೀತಿ ವಾಯುರೂಪವನ್ನು ಹೊಂದಿ ಸಂಚರಿಸುವ ನಿನಗೆ ಆಗಾಗ
ವಿಶ್ರಾಂತಿ ಸಿಗಬೇಕೆಂದು ಎಲ್ಲ ಪ್ರಾಣಿಮಾತ್ರರ ಕಣ್ಣುಗಳೂ ಸತತ ಎವೆಯಿಕ್ಕು
ತ್ತಿರುವವು.”
ಈ ರೀತಿ ನುಡಿದು ದೇವತೆಗಳು ಮರಳಿದರು. ನಿಮಿರಾಜನಿಗೆ ಪುತ್ರನಾಗ
ಬೇಕೆಂದು ಋಷಿಗಳು ಆತನ ಚೇತನವಿಲ್ಲದ ದೇಹವನ್ನು 'ಅರಣಿ' ಎಂದು
ಪ್ರಯೋಜಿಸಿ ಮಂತ್ರ ಸಹಿತವಾಗಿ ಹೋಮಪೂರ್ವಕವಾಗಿ, ತಮ್ಮ ಬಲದಿಂದ
ಅದನ್ನು ಉಜ್ಜಿದರು. ಹೀಗೆ ಅರಣಿಯ ಮಂಥನವು ಒಬ್ಬ ಮಹಾಪುರುಷನು
ಪ್ರಕಟನಾದನು. ಹೀಗೆ ಮಂಥನಕ್ರಿಯೆಯಿಂದ ಈತನು ಉದ್ಭವಿಸಿದ್ದರಿಂದ ಆತನಿಗೆ
'ಮಿತಿ' ಎಂಬ ಹೆಸರು ಬಮದಿತು.
ಇದು 'ಅಯಾಚಿತ' ವರವಾಗಿದ್ದು ದೇಹವನ್ನು ತ್ಯಜಿಸಿದ ಜೀತಾತ್ಮಕ್ಕೆ ಈ
ವರದು ದೊರೆತಿದೆ.