ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ವರದಾನ

೩೪೫


ಉಳಿಯುವುದು ವಿರೋಧ ಮಾಡಿದ ಕ್ಷಣವೇ ಈ ಶೂಲವು ಇಲ್ಲದಂತಾಗುವುದು.
ನಿರ್ಭಯತೆಯಿಂದ ಯಾರಾದರೂ ನಿನ್ನನ್ನು ಯುದ್ಧಕ್ಕೆ ಆಹ್ವಾನಿಸಿದರೆ ಈ
ಶೂಲವು ಅವರನ್ನು ಸುಟ್ಟುಹಕಿ ಮರಳಿ ನಿನ್ನ ಕೈ ಸೇರುವದು.”
ಏವಂ ರುದ್ರಾದ್ವರಂ ಲಬ್ದ‍್ವಾ ಭೂಯ ಏವ ಮಹಾಸುರಃ |
ಪ್ರಣಿಪತ್ಯ ಮಹಾದೇವಂ ವಾಕ್ಯಮೇತದುವಾಚ ಹ ‖೧೦‖
ಭಗವನ್ಮಮ ವಂಶಸ್ಯ ಶೂಲಮೇತದನುತ್ತಮಮ್ |
ಭವೇತ್ತು ಸತತಂ ದೇವ ಸುರಾಣಾಮೀಶ್ವರೋ ಹ್ಯಸಿ ‖೧೧‖

ರುದ್ರನಿಂದ ವರವನ್ನು ಪಡೆದ ನಂತರ ಮಧುದೈತ್ಯನು ಮಹಾದೇವನಿಗೆ
ವಂದಿಸಿ ಈ ರೀತಿ ನುಡಿದನು: “ಹೇ ಭಗವಂತನೇ, ನೀವು ದೇವತೆಗಳ ಒಡೆಯ
ರಾಗಿರುವಿರಿ; ಆದ್ದರಿಂದ ಈ ಶೂಲವು ನನ್ನ ವಂಶದಲ್ಲಿಯೇ ಇರಬೇಕು.”
ಪ್ರತ್ಯುವಾಚ ಮಹಾದೇವೋ ನೈತದೇವಂ ಭವಿಷ್ಯತಿ ‖೧೨‖
ಮಾ ಭೂತ್ತೇ ವಿಫಲಾ ವಾಣೀ ಮತ್ಪ್ರಸಾದಕೃತಾ ಶುಭಾ |
ಭವತಃ ಪುತ್ರಮೇಕಂ ತು ಶೂಲಮೇತದ್ಭವಿಷ್ಯತಿ ‖೧೩‖
ಯಾವತ್ಕರಸ್ಥಃ ಶೂಲೋsಯಂ ಭವಿಷ್ಯತಿ ಸುತಸ್ಯ ತೇ |
ಅವಧ್ಯಃ ಸರ್ವಭೂತಾನಾಂ ಶೂಲಹಸ್ತೋ ಭವಿಷ್ಯತಿ ‖೧೪‖

ಸುರಶ್ರೇಷ್ಠ ಶಂಕರನು ಆ ಮಧುದೈತ್ಯನಿಗೆ- “ಈ ನೀತಿ ನಿನ್ನ ಇಚ್ಛೆಯಂತೆ
ಆಗಲಾರದು! ಹೀಗಿದ್ದರೂ ನಾನು ಪ್ರಸನ್ನಗೊಂಡಿರುವದರಿಂದ ನಿನ್ನ
ಶುಭೇಚ್ಛೆಯನ್ನು ವ್ಯರ್ಥಗೊಳಿಸಲಾರೆನು. ನಿನ್ನ ಒಬ್ಬ ಪುತ್ರನ ಬಳಿ ಈ ಶೂಲವು
ಉಳಿಯುವದು. ನಿನ್ನ ಪುತ್ರನ ಕೈಯಲ್ಲಿ ಶೂಲವಿರುವವರೆಗೆ ನಿನ್ನ ಶೂಲ
ಪಾಣಿಯಾದ ಪುತ್ರನನ್ನು ಯಾರೂ ವಧಿಸಲಾರರು!” ಎಂದು ತಿಳಿಸಿದನು.
ಮಧುದೈತ್ಯನು ಇಹಲೋಕವನ್ನು ಬಿಟ್ಟು ವರುಣಲೋಕಕ್ಕೆ ತೆರಳುವಾಗ
ಆ ಶೂಲವನ್ನು ಲವಣನೆಂಬ ಆತನ ಮಗನಿಗೆ ಕೊಟ್ಟನು. ಆ ಶೂಲದ ಅದ್ಭುತ
ಪ್ರಭಾವದಿಂದ ಲವಣನು ಮೂರು ಲೋಕದವರಿಗೂ, ಅದರಲ್ಲೂ ವಿಶೇಷವಾಗಿ
ತಪಸ್ಸನ್ನು ಆಚರಿಸುವವರನು ಪೀಡಿಸಹತ್ತಿದನು. ಶತ್ರುಘ್ನನು ಲವಣಾಸುರನನ್ನು
ವಧಿಸಿದನಂತರ ಆ ಶೂಲವು ರುದ್ರನ ಬಳಿ ಮರಳಿಹೋಯಿತು.
ಇದು 'ಅಯಾಚಿತ' ವರವಾಗಿದೆ. ಮಧುದೈತ್ಯನಿಗೆ ರುದ್ರನಿಂದ
ಅನುಗ್ರಹರೂಪವಾಗಿ ಈ ಶೂಲವು ದೊರೆಯಿತು. ವಾಲ್ಮೀಕಿಯು 'ವರ' ಎಂಬ