ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪಾದಪಿ ವರಾದಪಿ!

೧೩

“Sacrifice is regarded as possessing a mystical potence superior even to gods who, it is sometimes stated, attained to their divine rank by means of sacrifice.” ಎಂದು ಡಾ॥ ಆರ್.ಎನ್. ದಾಂಡೇಕರವರು ಹೇಳಿದ್ದಾರೆ.
ತರ್ಕತೀರ್ಥ ಲಕ್ಷ್ಮಣಶಾಸ್ತ್ರಿ ಜೋಶಿಯವರು ಡಾ॥ ಗಾಡಗೀಳರವರ ಮತವನ್ನು ಸಂಪೂರ್ಣವಾಗಿ ಅನುಮೋದಿಸುವುದಿಲ್ಲ. ಅವರ ಪ್ರಕಾರ:'ದೇವರಿಗೆ ಮಹತ್ವ ದೊರೆತದ್ದು ಯಜ್ಞದಿಂದ' ಎಂಬ ಕಲ್ಪನೆ ರೂಢವಾಗಿದೆ. ಇನ್ನೂ ಹಲವರ ಮತದಂತೆ 'ಭಕ್ತಿ' ಎಂದರೆ ಪ್ರೇಮಭಾವನೆಯ ಒಂದು ಪ್ರಕಾರ. ಇದಕ್ಕೆ 'ನಿಷ್ಠೆ' ಎಂದೂ ಅನ್ನುತ್ತಾರೆ. ಋಗ್ವೇದದ ಯಜ್ಞವಿಧಿಯಲ್ಲಿ ಈ 'ನಿಷ್ಠೆ'ಯ ಉಲ್ಲೇಖ ಆಗಾಗ ಬರುತ್ತದೆ. ಮಾವನಶಾಸ್ತ್ರದ ಪ್ರಕಾರ ವೈದಿಕ ಯಜ್ಞವಿಧಿ ಎಂದರೆ ಕೇವಲ ಮಾತು ವಿಧಿಯಲ್ಲ. ಅದೊಂದು ಅಲೌಕಿಕ ಶಕ್ತಿಯನ್ನು ಅಂಕಿತದಲ್ಲಿಟ್ಟುಕೊಳ್ಳುವ ಪ್ರಕ್ರಿಯೆಯಾಗಿ ಯಾತು ವಿಧಿಯಾಗಿರುತ್ತದೆ; ಆದರೆ, ವೈದಿಕಯಜ್ಞ ವಿಧಿಯಲ್ಲಿ ಹಾಗಿರುವುದಿಲ್ಲ. ಇದರಲ್ಲಿ ದೇವರಿಗೆ ಶರಣುಹೋಗುವ ಮನೋಭಾವಕ್ಕೆ ಪ್ರಾಧಾನ್ಯವಿದೆ. ಯಜ್ಞದಿಂದ ದೇವತೆಗಳನ್ನು ವಶಪಡಿಸಿಕೊಳ್ಳಬಹುದು. ಯಜ್ಞವೆಂದರೆ ಸಮರ್ಪಣೆಯ ವಿಧಿ. ಇದರಲ್ಲಿ 'ಯಾತು' ಕ್ರಿಯೆ ಸಮಾವಿಷ್ಟವಾಗಿದೆ, ಸಂಶಯವಿಲ್ಲ. ಆದರೆ, ವೈದಿಕಯಜ್ಞವೆಂದರೆ ಕೇವಲ ಯಾತು ಕ್ರಿಯೆಯಲ್ಲ... ಜಗತ್ತಿನಲ್ಲಿಯ ಎಲ್ಲ ಧರ್ಮಗಳಲ್ಲಿ ಅಲ್ಪಸ್ವಲ್ಪ ಪ್ರಮಾಣದಲ್ಲಿ ಯಾತು ಕ್ರಿಯೆ ಇದ್ದೇ ಇದೆ. ಯಾತುವಿನಿಂದ ಚಮತ್ಕಾರಗಳು ಜರುಗುತ್ತವೆ; ಜನರು ಅವನ್ನು ನಂಬುತ್ತಾರೆ. ಮಾನವನ ಇಚ್ಛಾಶಕ್ತಿ ಎಂದರೆ (omnipotence of will) ಇಂದ್ರಜಾಲದ ತತ್ತ್ವವಾಗಿದೆ. ಇದರ ವ್ಯಕ್ತಿಸ್ವರೂಪವೆಂದರೆ ಪರಮೇಶ್ವರ! ಯಾತುಕ್ರಿಯೆಯ ಅರಳಿದ ರೂಪವೆಂದರೆ ಭಕ್ತಿಪ್ರಧಾನ ಧರ್ಮ

ತಪಶ್ಚರ್ಯ
ಭಾರತೀಯ ಸಂಸ್ಕೃತಿಯ ಮೂರು ಪ್ರಧಾನ ಅಂಗಗಳಲ್ಲಿ 'ತಪಸ್ಸು' ಒಂದಾಗಿದೆ. 'ಶಬ್ದಕಲ್ಪದ್ರುಮ'ದಲ್ಲಿ ತಪತಿ ತಾಪಯತಿ ವಾ ಎಂದು ಹೇಳಿದ್ದಾರೆ. 'ಸರ್ವಲಕ್ಷಣಸಂಗ್ರಹ'ದಲ್ಲಿ ಕ್ಷುತ್ಪಿ ಪಾಸಾ ಶೀತೋಷ್ಣಾದಿ ದ್ವಂದ್ವ ಸಹನಮ್. 'ಹಸಿವು,

——————
೩. ವೈದಿಕಯಜ್ಞ-ತಂತ್ರಸಾಧನಾ-ಭಕ್ತಿಯೋಗ, ಪು. ೪೭, ಪ್ರಸ್ತಾವನೆ ಪು. ೧೫.
೪. ಭಾರತೀಯ ಸಂಸ್ಕೃತಿ ಕೋಶ, ಖಂಡ ೪, ಪು. ೩೫-೩೭.