ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೩೪೬

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಶಬ್ದವನ್ನು ಬಳಸಿದ್ದಾನೆ. ಲವಣನಿಗೆ ತನ್ನ ತಂದೆಯ ಪುಣ್ಯದಿಂದ ಶೂಲವು
ದೊರಕಿತ್ತು. ಆದರೆ ಲವಣನ ದುಷ್ಟವರ್ತನೆಯಿಂದ ಅದು ಅವನ ಬಳಿ
ಉಳಿಯಲಿಲ್ಲ. ಹೀಗಿರುವದರಿಂದ ಇದು ಲವಣನಿಗೆ ದೊರೆತ ವರವಲ್ಲ. ಕೇವಲ
ತಂದೆಯಿಂದ ದೊರೆತ ವರದ ಬಾಧ್ಯತೆ ಎಂದೆನ್ನಬಹುದು.

೭೮. ವಸಿಷ್ಠ < ಕಲ್ಮಾಷಪಾದ (ಸೌದಾಸರಾಜ)

ಉತ್ತರಕಾಂಡ/೬೫

ರಾಮನು ಶತ್ರುಘ್ನನಿಗೆ ಅಭಿಷೇಕ ಮಾಡಿ ಲವಣಾಸುರನ ವಧೆಗೆಂದು
ಕಳುಹಿಸಿದನು. ಶತ್ರುಘ್ನನು ವಾಲ್ಮೀಕಿಯ ಆಶ್ರಮದಲ್ಲಿ ಒಂದು ರಾತ್ರಿಯನ್ನು
ಕಳೆದನು. ಅಲ್ಲಿಯೇ ಹತ್ತಿರದಲ್ಲಿ ಸಂಗ್ರಹಿಸಿಟ್ಟ ಯಜ್ಞಸಾಮಗ್ರಿಗಳನ್ನು ನೋಡಿ
ಶತ್ರುಘ್ನನು ವಾಲ್ಮೀಕಿಯನ್ನು ಕೇಳಿದಾಗ, ಆತನು ಸೌದಾಸರಾಜನ ಕಥೆಯನ್ನು
ನಿರೂಪಿಸಿದನು.
ಶಾಪ ಕ್ರಮಸಂಖ್ಯೆ, ೫೭, ವಸಿಷ್ಠ < ಸೌದಾಸ:
ಶಾಪ ಕ್ರಮಸಂಖ್ಯೆ ೫೮, ಸೌದಾಸ < ವಸಿಷ್ಠ- ಪರಿಶೀಲಿಸಿ.
ಸೌದಾಸರಾಜನು ಕಲ್ಮಾಷಪಾದನಾಗಿ ಪರಿವರ್ತಿತನಾದ ನಂತರ ಆತನು
ಪತ್ನಿಯನ್ನೊಡಗೂಡಿ ವಸಿಷ್ಠನಿಗೆ ಆಗಾಗ ವಂದಿಸಿ, ಬ್ರಾಹ್ಮಣವೇಷವನ್ನು ತಾಳಿದ
ಮಾಯಾವೀ ರಾಕ್ಷಸನು ಆಡಿದ ನುಡಿಗಳನ್ನು ಅವನಿಗೆ ವಿವರಿಸಿದನು. ಆಗ
ಮಾಯಾವೀ ರಾಕ್ಷಸನಿಂದ ನಡೆದ ಅನರ್ಥವು ವಸಿಷ್ಠನಿಗೆ ತಿಳಿಯಿತು. ಆತ
ಆತನು ಸೌದಾಸರಾಜನಿಗೆ-
ಮಯಾ ರೋಷಪರೀತೇನ ಯದಿದಂ ವ್ಯಾಹೃತಂ ವಚಃ |
ನೈತಚ್ಛಕ್ಯಂ ವೃಥಾ ಕರ್ತುಂ ಪ್ರದಾಸ್ಯಾಮಿ ಚ ತೇ ವರಮ್ ‖೩೫‖
ಕಾಲೋ ದ್ವಾದಶವರ್ಷಾಣಿ ಶಾಪಸ್ಯಾಂತೋ ಭವಿಷ್ಯತಿ |
ಮತ್ಪ್ರಸಾದಾಚ್ಚ ರಾಜೇಂದ್ರ ಅತೀತಂ ನ ಸ್ಮರಿಷ್ಯಸಿ ‖೩೬‖

“ನಾನು ಕೋಪಗೊಂಡು ಆಡಿದ ನುಡಿಯು ಎಂದಿಗೂ ಸುಳ್ಳಾಗಲಾರದು.
ಈಗ ನಾನು ನನಗೆ ಒಂದು ವರವನ್ನು ಕೊಡುತ್ತೇನೆ. ಹನ್ನೆರಡು ವರ್ಷಗಳು
ಕಳೆದ ನಂತರ ಈ ಶಾಪವು ಇಲ್ಲವಾದೀತು. ಹೇ ರಾಜನೇ, ನನ್ನ ಪ್ರಸಾದದಿಂದ
ನಿನಗೆ ಪೂರ್ವದ ಸ್ಮರಣೆ ಉಳಿಯಲಾರದು!” ಎಂದನು.