ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೫೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಈ ರೀತಿ ಕರ್ದಮನ ಮಗನಾದ ಇಲರಾಜನು ಒಂದು ತಿಂಗಳು
ಪುರುಷನಾಗಿದ್ದು ಮರುತಿಂಗಳು 'ಇಲ' ಎಂಬ ತ್ರೈಲೋಕ್ಯಸುಂದರಿಯಾಗುತ್ತಿದ್ದಳು.

ಉತ್ತರಕಾಂಡ/೯೦

ಇಲನಿಗೆ ಉಂಟಾದ ದುಃಸ್ಥಿತಿಯನ್ನು ಶಂಕರನ ಹೊರತಾಗಿ ಯಾರೂ
ನಿವಾರಿಸಲಾರರು ಎಂದು ಕರ್ದಮನ ನಂಬಿಕೆಯಿತ್ತು. ಶಂಕರನಿಗೆ ಪ್ರಿಯವಿದ್ದ
ಅಶ್ವಮೇಧ ಯಜ್ಞವನ್ನು ಕೈಗೊಂಡು ಬ್ರಹ್ಮಹತ್ಯೆಯ ಪಾತಕವನ್ನು ಸಹ
ಕಳೆದುಕೊಳ್ಳಬಹುದು. ಈ ಕಾರಣದಿಂದ ಇಲರಾಜನಿಗೋಸ್ಕರ ಅಶ್ವಮೇಧ
ಯಜ್ಞವನ್ನು ಮಾಡಬೇಕೆಂದು ಕರ್ದಮನು ನುಡಿದನು. ಆಗ ಸಂವರ್ತನಪ್ರಮುಖ
ರಾಜರ್ಷಿ ಶಿಷ್ಯನಾದ ಮರುತ್ತನು ರಾಜನ ಸಲುವಾಗಿ ರುದ್ರನನ್ನು ಆರಾಧಿಸಲು
ಅಶ್ವಮೇಧಯಜ್ಞವನ್ನು ಮಾಡಿದನು. ಯಜ್ಞಪೂರ್ತಿಯ ನಂತರ ಸಂತೋಷ
ಗೊಂಡ ಉಮಾಪತಿ ಶಂಕರನು, “ನಿಮ್ಮ ಭಕ್ತಿಯುತ ಯಜ್ಞದಿಂದ ನಾನು
ಪ್ರಸನ್ನನಾಗಿದ್ದೇನೆ. ಇಲರಾಜನಿಗೆ ಪ್ರಿಯವಿರುವ ಯಾವದನ್ನು ನಾನು ಮಾಡಲಿ?”
ಎಂದನು. ಆಗ ಯಜ್ಞಕ್ಕಾಗಿ ನೆರೆದಿದ್ದ ಎಲ್ಲ ದ್ವಿಜರು “ಇಲರಾಜನಿಗೆ ಪುರುಷತ್ವವು
ಪ್ರಾಪ್ತವಾಗಬೇಕು” ಎಂದು ಶಂಕರನಿಗೆ ಪ್ರಾರ್ಥಿಸಿದರು.
ಮಹಾದೇವನು ಪ್ರಸನ್ನನಾಗಿ ಇಲನಿಗೆ ಪುರುಷತ್ವವನ್ನು ಮರಳಿ ಕೊಟ್ಟನು.
ಇನ್ನಿತರ ವರಗಳಿಗಿಂತ ಈ ವರವು ಭಿನ್ನವಾಗಿದು, ವೈಶಿಷ್ಟ್ಯಪೂರ್ಣವಾಗಿದೆ.
ಪಾರ್ವತಿಯು ಇಲರಾಜನಿಗೆ ಕೊಟ್ಟ ವರವು ರಾಮಾಯಣದಲ್ಲಿ ಉಲ್ಲೇಕಿತ
ವಾಗಿರುವ ಒಂದೇ ಅರ್ಧವರವಾಗಿದೆ.
ಶಂಕರನು ಇಲನಿಗೆ ಕೊಡಬಯಸಿದ ವರವು ಅಯಾಚಿತವಿದ್ದು,
ಅಸ್ವೀಕೃತವಾಗಿದೆ. ಪಾರ್ವತಿಯು ಕೊಟ್ಟ ವರವು ಯಾಚಿತವಿದ್ದರೂ ಅದರಲ್ಲಿಯ
ವಿಸ್ಮರಣೆಯ ಭಾಗವು ಅಯಾಚಿತವಾಗಿದೆ. ಸ್ತ್ರೀತ್ವ ಬಂದಾಗ ಪುರುಷತ್ವದ ಮತ್ತು
ಪುರುಷತ್ವ ಬಂದಾಗ ಸ್ತ್ರೀತನದ ವಿಸ್ಮೃತಿಯಾಗಬೇಕೆಂಬ ಇಚ್ಛೆಯನ್ನು ಇಲನು
ವ್ಯಕ್ತಪಡಿಸಿರದಿದ್ದರೂ ಪಾರ್ವತಿಯು ಅದನ್ನು ಕರುಣಿಸಿದ್ದಾಳೆ.

೮೨. ರಮ < ಪ್ರಜಾಜನರು

ಉತ್ತರಕಾಂಡ/೧೦೭

ಲಕ್ಷ್ಮಣನ ಆತ್ಮಸಮರ್ಪಣೆಯ ನಂತರ ರಾಮನು ಬಹಳ ಶೋಕಾಕುಲ
ನಾದನು. ಪುರೋಹಿತರು, ಮಂತ್ರಿಗಳು ಹಾಗೂ ಪುರವಾಸಿಗಳನ್ನು ಉದ್ದೇಶಿಸಿ