ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೩೫೩


ಆತನು ನುಡಿದದ್ದೇನೆಂದರೆ: “ಧರ್ಮಾಸಕ್ತನಾದ ವೀರ ಭರತನಿಗೆ ಇಂದು
ನಾನು ಅಯೋಧ್ಯಾಪತಿಯಾಗಿ ರಾಜ್ಯಾಭಿಷೇಕವನ್ನು ಮಾಡಿ ಅನಂತರ ಅರಣ್ಯಕ್ಕೆ
ಹೋಗುವೆನು. ಲಕ್ಷ್ಮಣನು ಹಿಡಿದ ಮಾರ್ಗವನ್ನೇ ನಾನೂ ಹಿಡಿಯುವೆನು.”
ರಾಮನ ಈ ನಿರ್ಣಯವನ್ನು ಕೇಳಿದ ಪ್ರಜೆಗಳೆಲ್ಲರೂ ದುಃಖಪರವಶರಾದರು.
ಪ್ರಜೆಗಳ ಚೇತನವೇ ಅಳಿದುಹೋಯಿತು. ಭರತನಿಗೂ ಅತ್ಯಂತ ಅಸ್ವಸ್ಥತೆ
ಉಂಟಾಯಿತು. ಆತನು ರಾಮನಿಗೆ, “ನನಗೆ ರಾಜ್ಯಾಭಿಲಾಷೆ ಅಥವಾ ಸ್ವರ್ಗದ
ಅಭಿಲಾಷೆ ಇರುವದಿಲ್ಲ. ಕುಶ-ಲವ ಇವರಿಗೆ ರಾಜ್ಯಾಭಿಷೇಕವನ್ನು ಮಾಡಬೇಕು;
ಶತ್ರುಘ್ನನಿಗೆ ಕೂಡಲೇ ದೂತರಿಂದ ಹೇಳಿಕಳುಹಿಸಿ ನಿಮ್ಮ ಗಮನದ ವಾತೆಯನ್ನು
ತಿಳಿಸಿರಿ!” ಎಂದನು. ವಸಿಷ್ಠಮುನಿಯು ಮುಖವನ್ನು ಮೇಲೆತ್ತದೆ “ವತ್ಸ ರಾಮನೇ,
ಭೂಮಿಯಲ್ಲಿರುವ ಈ ಪ್ರಜೆಗಳನ್ನು ಲಕ್ಷಿಸು! ಪ್ರಜೆಗಳ ಇಷ್ಟದಂತೆ ನೀನು
ವರ್ತಿಸು! ಅವರ ಇಚ್ಛೆಯನ್ನು ಅಲ್ಲಗಳೆಯಬೇಡ!” ಎಂದನು. ಆಗ ರಾಮನು
ಪ್ರಜೆಗಳಿಗೆ “ನಾನು ಯಾವ ರೀತಿ ವರ್ತಿಸಲಿ?” ಎಂದು ಪ್ರಶ್ನಿಸಿದನು. ಆಗ
ಪ್ರಜೆಗಳು-
ಗಚ್ಛಂತಮನುಗಚ್ಛಾಮೋ ಯತ್ರ ರಾಮ ಗಮಿಷ್ಯಸಿ ‖೧೨‖
ಪೌರೇಷು ಯದಿ ತೇ ಪ್ರೀತಿರ್ಯದಿ ಸ್ನೇಹೋ ಹ್ಯನುತ್ತಮಃ |
ಸಪುತ್ರದಾರಾಃ ಕಾಕುತ್ಸ್ಥ ಸಮಂ ಗಚ್ಛಾಮ ಸತ್ಪಥಮ್ ‖೧೩‖
ತಪೋವನಂ ವಾ ದುರ್ಗಂ ವಾ ನದೀಮಂಭೋನಿಧಿಂ ತಥಾ |
ವಯಂ ತೇ ಯದಿ ನ ತ್ಯಾಜ್ಯಾಃ ಸರ್ವಾನ್ನೋ ನಯ ಈಶ್ವರ ‖೧೪‖
ಏಷಾ ನಃ ಪರಮಾ ಪ್ರೀತಿರೇಷ ನಃ ಪರಮೋ ವರಃ |
ಹೃದ್ಗತಾ ನಃ ಸದಾ ಪ್ರೀತಿಸ್ತವಾನುಗಮನೇ ನೃಪ ‖೧೫‖

“ರಾಜನೇ, ನೀನು ಹೋದತ್ತ ನಾವೆಲ್ಲರೂ ಹಿಂಬಾಲಿಸುವೆವು. ಪ್ರಜೆಗಳ
ಮೇಲೆ ನಿನ್ನ ಪ್ರೀತಿ ಇದ್ದಲ್ಲಿ, ಅವರಲ್ಲಿ ದೃಢ ಸ್ನೇಹವಿದ್ದಲ್ಲಿ, ನಮ್ಮನ್ನು ಬಿಟ್ಟು
ಕೊಡಬಾರದೆಂದು ಅನಿಸುತ್ತಿದ್ದಲ್ಲಿ, ನಾವೆಲ್ಲರೂ ನಮ್ಮ ಮಡದಿ ಮಕ್ಕಳೊಂದಿಗೆ,
ಸ್ವರ್ಗ, ತಪೋವನ ದುರ್ಗಮಾರಣ್ಯ, ನದಿ ಮತ್ತು ಸಾಗರ, ಹೀಗೆ ನೀನು ಎತ್ತ
ಸಾಗುವಿಯೋ ಅಲ್ಲಿಗೆ ನಾವೆಲ್ಲರೂ ಹಿಂಬಾಲಿಸುವೆವು. ಹೇ ಈಶ್ವರನೇ, ನೀನು
ನಮ್ಮೆಲ್ಲರನ್ನೂ ಜೊತೆ ಕರೆದುಕೊಂಡು ಹೋಗು! ಇದರಿಂದ ನಮಗೆ
ಹಿಡಿಸಲಾರದಷ್ಟು ಆನಂದವಾಗುವದು. ಇದು ನಮಗೆ ಬೇಕಾದ ಮುಖ್ಯ